ಆಲಂಕಾರು: ಬುಡೇರಿಯಾ ಶ್ರೀ ಶಿರಾಡಿ ದೈವಸ್ಥಾನದ ಡಿ.15 ,16 ರಂದು ನಡೆಯುವ ವಾರ್ಷಿಕ ನರ್ತನೋತ್ಸವದ ಅಮಂತ್ರಣ ಪತ್ರಿಕೆ ಬುಡೇರಿಯಾ ಶ್ರೀ ಶಿರಾಡಿ ದೈವಸ್ಥಾನದಲ್ಲಿ ನ.16 ರಂದು ಸಂಕ್ರಾಂತಿಯಂದು ದೈವಗಳಿಗೆ ತಂಬಿಲ ಸೇವೆ ನಡೆದ ಬಳಿಕ ವಾರ್ಷಿಕ ನರ್ತನೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಡಿ.11 ರಂದು ಪಜ್ಜಡ್ಕದಲ್ಲಿ ನಾಗ ತಂಬಿಲ ಮತ್ತು ರಕ್ತೇಶ್ವರಿ ದೈವಕ್ಕೆ ತಂಬಿಲ ನಡೆದ ಬಳಿಕ ಶ್ರೀ ಕ್ಷೇತ್ರದಲ್ಲಿ ಗೊನೆ ಮುಹೂರ್ತ ನಡೆಯಲಿದೆ.
ಡಿ.15 ರಂದು ಶ್ರೀ ಕ್ಷೇತ್ರದಲ್ಲಿ ಗಣಹೋಮ,ಅಶ್ಲೇಷ ಬಲಿ ,ದೈವಗಳಿಗೆ ಕಲಾಶಾಭಿಷೇಕ ತಂಬಿಲ ಬಳಿಕ ಪ್ರಸಾದ ವಿತರಣೆ,ಅನ್ನಪ್ರಸಾದ ನಡೆದು ಕೆದಿಲದಲ್ಲಿ ದೈವಗಳ ಭಂಡಾರ ತೆಗೆದು ನರ್ತನೋತ್ಸವ ಸ್ಥಳದಲ್ಲಿ ಕಲ್ಕುಡ,ಕಲುರ್ಟಿ,ಪಂಜುರ್ಲಿ,ಗುಳಿಗ ದೈವಗಳ ಭಂಡಾರ ತೆಗೆದು ಭಜನಾ ಕಾರ್ಯಕ್ರಮ ಅನ್ನಪ್ರಸಾದ ನಡೆದು ದೈವಗಳ ನರ್ತನೋತ್ಸವ ನಡೆಯಲಿದೆ .
ಡಿ.16 ರಂದು ಬೆಳಿಗ್ಗೆ ಶ್ರೀ ಶಿರಾಡಿ ದೈವದ ನರ್ತನೋತ್ಸವ ಪ್ರಸಾದ ಬೋಜನ ನಡೆದು ಗಡಿ ಜಾಗಕ್ಕೆ ಪ್ರಯಾಣ ನಡೆಯಲಿದೆ ಎಂದು ಊರ ಹತ್ತು ಸಮಸ್ತರ ಪರವಾಗಿ ಅಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ,ಸಂಕಪ್ಪ ಗೌಡ ಗೌಡತ್ತಿಗೆ,ಸೂರಪ್ಪ ಪೂಜಾರಿ ಹೊಸಮಜಲು ಅಮಂತ್ರಣ ಪತ್ರ ಬಿಡುಗಡೆ ಮಾಡಿ ತಿಳಿಸಿದ್ದಾರೆ.