ಫಿಲೋಮಿನಾದಲ್ಲಿ ಮೇಳೈಸಿದ ಅಂತರ್-ಪ್ರೌಢಶಾಲಾ ‘ಪ್ರತಿಭಾ’

0

ವಿವೇಕಾನಂದ ತೆಂಕಿಲ ಚಾಂಪಿಯನ್, ಎಸ್‌ಡಿಎಂ ಉಜಿರೆ ರನ್ನರ‍್ಸ್, ಜ್ಞಾನಗಂಗಾ ಬೆಳ್ಳಾರೆ ತೃತೀಯ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಮತ್ತು ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಲು ವರ್ಷಂಪ್ರತಿ ಆಯೋಜಿಸಲಾಗುವ ಪ್ರೌಢಶಾಲಾ ವಿದ್ಯಾರ್ಥಿಗಳ ಅಂತರ್-ಶಾಲಾ ಸ್ಪರ್ಧೆ ‘ಪ್ರತಿಭಾ 2022’ ಸಾಂಸ್ಕೃತಿಕ ಕಲರವ ಸಂಭ್ರಮದ ತೆರೆ ಕಂಡಿದ್ದು, ವಿದ್ಯಾರ್ಥಿಗಳ ಪ್ರತಿಭೆಗಳ ಕಲರವ ಅಕ್ಷರಶ ಕಣ್ಮನ ಸೆಳೆದಿದೆ.

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯು ಈ ಪ್ರತಿಭಾ ಕೂಟದಲ್ಲಿ ಅತ್ಯಧಿಕ ಅಂಕಗಳನ್ನು ಕಲೆ ಹಾಕುವ ಮೂಲಕ ‘ಪ್ರತಿಭಾ-2022’ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ಫಲಕ ಹಾಗೂ ರೂ.5 ಸಾವಿರ ನಗದನ್ನು ಗಳಿಸಿಕೊಂಡಿದೆ. ಉಜಿರೆಯ ಎಸ್‌ಡಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ರನ್ನರ್ಸ್ ಪ್ರಶಸ್ತಿ(ಫಲಕ ಹಾಗೂ ರೂ.3 ಸಾವಿರ ನಗದು)ಯನ್ನು ಪಡೆದರೆ, ಸುಳ್ಯ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ತೃತೀಯ ಸ್ಥಾನ(ಫಲಕ ಹಾಗೂ ರೂ.2 ಸಾವಿರ ನಗದು)ಕ್ಕೆ ತೃಪ್ತಿಪಟ್ಟುಕೊಂಡಿತು.

ಭಾಗವಹಿಸಿದ 26 ಪ್ರೌಢಶಾಲೆಗಳು:

ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ(ಕನ್ನಡ/ಆಂಗ್ಲ ಮಾಧ್ಯಮ), ಸಂತ ಫಿಲೋಮಿನಾ ಪ್ರೌಢಶಾಲೆ(ಕನ್ನಡ/ಆಂಗ್ಲ ಮಾಧ್ಯಮ), ಸಂತ ಮೇರೀಸ್ ಪ್ರೌಢಶಾಲೆ ಬೆಳ್ತಂಗಡಿ, ಸುದಾನ ವಸತಿಯುತ ಶಾಲೆ, ಸೈಂಟ್ ತೆರೆಸಾ ಪ್ರೌಢಶಾಲೆ ಬೆಳ್ತಂಗಡಿ, ವಿವೇಕಾನಂದ ಪ್ರೌಢಶಾಲೆ(ಕನ್ನಡ/ಆಂಗ್ಲ ಮಾಧ್ಯಮ), ಸೈಂಟ್ ಜೋಸೆಫ್ ಆ.ಮಾ ಪ್ರೌಢಶಾಲೆ ಬೀರಮಂಗಲ, ಬಾಲವಿಕಾಸ ಆ.ಮಾ ಪ್ರೌಢಶಾಲೆ ಮಾಣಿ, ಪ್ರಗತಿ ಆ.ಮಾ ಪ್ರೌಢಶಾಲೆ ಕಾಣಿಯೂರು, ಸೈಂಟ್ ರೀಟಾ ಆ.ಮಾ ಪ್ರೌಢಶಾಲೆ ವಿಟ್ಲ, ಕೆಪಿಎಸ್ ಸ್ಕೂಲ್ ಕುಂಬ್ರ, ಕಾನ್ನಾಯ ಜ್ಯೋತಿ ಆ.ಮಾ ಪ್ರೌಢಶಾಲೆ ಕಡಬ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಸುಳ್ಯ, ಸರಕಾರಿ ಪ್ರೌಢಶಾಲೆ ಪಾಪೆಮಜಲು, ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ, ಸೈಂಟ್ ಜಾರ್ಜ್ ಆ.ಮಾ ಪ್ರೌಢಶಾಲೆ ನೆಲ್ಯಾಡಿ, ವಿವೇಕಾನಂದ ಪ್ರೌಢಶಾಲೆ ತೆಂಕಿಲ, ಸುಬೋಧ ಪ್ರೌಢಶಾಲೆ ಪಾಣಾಜೆ, ಹೋಲಿ ರೆಡಿಮರ್ ಆ.ಮಾ ಶಾಲೆ ಬೆಳ್ತಂಗಡಿ, ಎಸ್‌ಡಿಎಂ ಆ.ಮಾ ಪ್ರೌಢಶಾಲೆ ಉಜಿರೆ, ಬೆಥನಿ ಆ.ಮಾ ಪ್ರೌಢಶಾಲೆ ಪುತ್ತೂರು, ಎನ್‌ಎಂಪಿಯುಸಿ ಪ್ರೌಢಶಾಲೆ ಅರಂತೋಡು, ಸುಳ್ಯ, ಸರಕಾರಿ ಉನ್ನತ ಪ್ರೌಢಶಾಲೆ ಕೆಮ್ಮಾಯಿ ಹೀಗೆ 26 ಪ್ರೌಢಶಾಲೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ವಿಭಾಗವಾರು ಫಲಿತಾಂಶ:

ಪೇಯ್ಟಿಂಗ್:ನಿಶಾ ಜೈನ್, ಎಸ್‌ಡಿಎಂ ಉಜಿರೆ(ಪ್ರ), ಪೂರ್ಣಶ್ರೀ ಎ.ಎಸ್, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ(ದ್ವಿ), ಪುನೀತ್ ಸಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ/ಅಗಮ್ಯ, ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ತೆಂಕಿಲ(ತೃ),

ಕೊಲಾಜ್ ಮೇಕಿಂಗ್: ಆಯಿಶಾ ಫಕಿಹ/ಪ್ರಣಮ್ಯ ಜಿ, ಸೈಂಟ್ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ನೆಲ್ಯಾಡಿ(ಪ್ರ), ಲುಹಾ ಮರಿಯಮ್/ಫಾತಿಮ ಜಸೀರಾ, ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೆಳ್ತಂಗಡಿ(ದ್ವಿ), ಪ್ರಣಾಮ್ ಎಸ್.ಶೆಟ್ಟಿ/ರೋಹನ್ ಮೊಂತೇರೊ, ಸೈಂಟ್ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪುತ್ತೂರು(ತೃ),

ಸೆಮಿನಾರ್(ಕನ್ನಡ): ಧಾತ್ರಿ ಆರ್.ರೈ, ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ತೆಂಕಿಲ(ಪ್ರ), ಶ್ರಾವ್ಯ ಕೆ.ಎಂ, ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾಣಿಯೂರು(ದ್ವಿ), ಮನ್ವಿ ಆರ್.ಶೆಟ್ಟಿ, ಸೈಂಟ್ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲೆ(ತೃ),

ಸೆಮಿನಾರ್(ಇಂಗ್ಲೀಷ್): ರಿಧಿ ಶೆಟ್ಟಿ, ಕಾನ್ನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಡಬ(ಪ್ರ), ಆಶೆರ್ ಪಿಂಟೊ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ(ದ್ವಿ), ದಿವ್ಯ ಮಾರುತಿ, ಎಸ್‌ಡಿಎಂ ಉಜಿರೆ(ತೃ)

ರಸಪ್ರಶ್ನೆ: ಅಭಿರಾಂ ಭಟ್ ಪಿ.ಎನ್/ಧನುಷ್ ರಾಮ್ ಎಂ, ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕಿಲ(ಪ್ರ), ಸಮನ್ಯು ಎಸ್.ಶೆಟ್ಟಿ/ಅಭಿರಾಂ, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ(ದ್ವಿ), ವಿಜೇತ್ ಬಿ.ಜೆ/ಚಿಂತನ್ ಎಸ್.ಎಸ್, ಎನ್‌ಎಂಪಿಯುಸಿ ಆರಂತೋಡು(ತೃ),

ಕಸದಿಂದ ರಸ: ಊರ್ವಿ ಮಾನ್ಯ/ಸಾನ್ವಿ ಸುಬ್ರಹ್ಮಣ್ಯ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್(ಪ್ರ), ಆಯುಷ್ ಎ/ಚರೀಶ್ಮಾ, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ(ದ್ವಿ), ಪೂರ್ವಿ ಎಂ.ಎಸ್/ರಚನಾ ಪಿಂಟೊ, ಸಂತ ಫಿಲೋಮಿನಾ ಪ್ರೌಢಶಾಲೆ ಪುತ್ತೂರು ಹಾಗೂ ಸುಪ್ರೀತಾ/ವಂದಿತಾ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ(ತೃ),

ಕ್ಲೇ ಮಾಡೆಲಿಂಗ್: ಶ್ರಾವ್ಯ ಎನ್.ಎನ್, ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ಪುತ್ತೂರು(ಪ್ರ), ಅನ್ವಿತ್, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ(ದ್ವಿ), ಹಿತಾ ಟಿ.ಎನ್, ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪುತ್ತೂರು(ತೃ)

ವಿಜ್ಞಾನ ಮಾದರಿ ಪ್ರದರ್ಶನ: ಚಿನ್ಮಯ್ ಮಾಝಿ/ತನ್ಮಯ್ ಕೃಷ್ಣ, ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ಪುತ್ತೂರು(ಪ್ರ), ಫರ‍್ಮಾನ್ ಖಾನ್/ಕ್ರಿಸ್ ಆರನ್ ಪಿರೇರಾ, ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ(ದ್ವಿ), ಸೋಹನ್/ಪವನ್, ಎಸ್‌ಡಿಎಂ ಉಜಿರೆ(ತೃ),

ಪ್ರೊಡಕ್ಟ್ ಲಾಂಚಿಂಗ್: ಎಸ್‌ಡಿಎಂ ಆಂಗ್ಲ ಮಾಧ್ಯಮ(ಸಿಬಿಎಸ್‌ಇ) ಪ್ರೌಢಶಾಲೆ(ಪ್ರ), ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ(ದ್ವಿ), ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕಿಲ(ತೃ),

ಜಾನಪದ ನೃತ್ಯ: ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ(ಪ್ರ), ಎಸ್‌ಡಿಎಂ ಉಜಿರೆ(ದ್ವಿ), ವಿವೇಕಾನಂದ ಸಿಬಿಎಸ್‌ಇ ಪ್ರೌಢಶಾಲೆ(ತೃ)

ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಪ್ರತಿಭಾ ಸಂಯೋಜಕಿ ಡಾ|ಆಶಾ ಸಾವಿತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ಭರತ್ ಕುಮಾರ್ ವಂದಿಸಿದರು. ಉಪನ್ಯಾಸಕಿ ಸೌಮ್ಯಲತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಸಿಬ್ಬಂದಿ ಮತ್ತು ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಸಹಕರಿಸಿದರು.

ಪ್ರಶಂಸನೀಯ ಕಾರ್ಯಕ್ರಮ…
ಹತ್ತು ಸಾಂಸ್ಕೃತಿಕ ಸ್ಪರ್ಧೆಗಳು, 26 ಪ್ರೌಢಶಾಲೆಗಳ ಭಾಗವಹಿಸುವಿಕೆ, ೫೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳ ‘ಪ್ರತಿಭಾ’ ಪ್ರದರ್ಶನದ ಕಲರವ, 25 ಕ್ಕೂ ಹೆಚ್ಚು ತೀರ್ಪುಗಾರರು. ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹಕರೆಂಬಂತೆ ಆಗಮಿಸಿದ ಆಯಾ ಪ್ರೌಢಶಾಲೆಯ ಶಿಕ್ಷಕರು. ನಿಜಕ್ಕೂ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ತೋರ್ಪಡಿಸಲು ಅಕ್ಷರಶ ವೇದಿಕೆ ಅಲ್ಲಿ ಕಲ್ಪಿಸಲಾಗಿತ್ತು. 2016 ರಲ್ಲಿ ಆರಂಭವಾದ ಈ ಪ್ರತಿಭಾ ಸ್ಪರ್ಧೆಯು ಭಾಗವಹಿಸಿದ ಮಕ್ಕಳಿಂದ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಂದ ಅಪೂರ್ವ ಮನ್ನಣೆ ಗಳಿಸಿದೆ. ರಸಪ್ರಶ್ನೆ, ಸೆಮಿನಾರ್, ಬೆಸ್ಟ್ ಔಟ್ ಆಫ್ ವೇಸ್ಟ್, ಪೇಂಯ್ಟಿಂಗ್, ಕ್ಲೇ ಮಾಡೆಲಿಂಗ್, ಸೈನ್ಸ್ ಮಾಡೆಲ್, ಪ್ರೊಡಕ್ಟ್ ಲಾಂಚಿಂಗ್, ಕೊಲಾಜ್, ಜಾನಪದ ನೃತ್ಯ ಹೀಗೆ ಹತ್ತು ಸ್ಪರ್ಧೆಗಳಲ್ಲಿ ೫೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಉತ್ಸಾಹಭರಿತವಾದ ಭಾಗವಹಿಸುವಿಕೆ ನೋಡುಗರ ಪ್ರಶಂಸೆಗೆ ಪಾತ್ರವಾಗಿತ್ತು.

ಆತ್ಮವಿಶ್ವಾಸ ತುಂಬುವ ವೇದಿಕೆ..
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ವಾತಾವರಣವನ್ನು ಫಿಲೋಮಿನಾ ವಿದ್ಯಾಸಂಸ್ಥೆಯು ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಈ ವಿದ್ಯಾಸಂಸ್ಥೆಗೆ ಬಂದು ನಿಮ್ಮಲ್ಲಿನ ಪ್ರತಿಭಾ ಕೌಶಲಗಳನ್ನು ಸದುಪಯೋಗಪಡಿಸಿಕೊಳ್ಳಿ. ಪ್ರತಿಭೆ ಎಲ್ಲರಲ್ಲಿ ಇದೆ. ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸಾಗಿದಾಗ ಯಶಸ್ಸು ನಿಶ್ಚಿತ. ವಿದ್ಯಾರ್ಥಿಗಳ ಪ್ರತಿಭೆಗೆ ಆತ್ಮವಿಶ್ವಾಸವನ್ನು ತುಂಬುವ ವೇದಿಕೆಯನ್ನು ಕಾಲೇಜು ಒದಗಿಸಿಕೊಟ್ಟಿರುವುದು ಶ್ಲಾಘನೀಯ.
-ದೀಪಕ್ ಮಿನೇಜಸ್, ಮಾಲಕರು, ಸೋಜಾ ಮೆಟಲ್ ಮಾರ್ಟ್

ಹೈಲೈಟ್ಸ್…..
-ಸ್ಪರ್ಧೆಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ.
-ಪ್ರವೇಶ ಶುಲ್ಕವಿಲ್ಲ, ಸಂಸ್ಥೆಯಿಂದ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ಒಂದು ತಂಡಕ್ಕೆ ಮಾತ್ರ ಅವಕಾಶವಿತ್ತು.
-ಬೆಳಗ್ಗಿನ ಅವಧಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶವಿತ್ತು. ಆದರೆ ಮಧ್ಯಾಹ್ನದ ಅವಧಿಯಲ್ಲಿ ನಡೆಯುವ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಆ ವಿದ್ಯಾರ್ಥಿಯು ಭಾಗವಹಿಸಬಹುದಾಗಿತ್ತು.
-ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾ ತಂಡ ಆಯಾ ಸಂಸ್ಥೆಯ ಶಿಕ್ಷಕರ ಉಪಸ್ಥಿತಿಯಲ್ಲಿ ಭಾಗವಹಿಸಬೇಕಿತ್ತು.
-ಪ್ರತೀ ಸ್ಪರ್ಧೆಗೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನಿಗದಿಪಡಿಸಲಾಗಿತ್ತು.
-ಸಮಗ್ರ ಪ್ರಶಸ್ತಿ ಫಲಕ ಮತ್ತು ಆಕರ್ಷಕ ನಗದು ಬಹುಮಾನ ನೀಡಲಾಗಿತ್ತು.
-ಸ್ಪರ್ಧಾಳುಗಳಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಭೋಜನ ಹಾಗೂ ಸಂಜೆಯ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
-ಸ್ಪರ್ಧಿಗೆ ಸ್ಪರ್ಧೆಯ ನಿಯಮಗಳ ಬಗ್ಗೆ ಸಂದೇಹವಿದ್ದಲ್ಲಿ ಸ್ಪರ್ಧೆ ಆರಂಭವಾಗುವ ಮುನ್ನ ಸ್ಪರ್ಧಾ ನಿರ್ದೇಶಕರಲ್ಲಿ ಸಂದೇಹವನ್ನು ಬಗೆಹರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು.
-ಜಾನಪದ ನೃತ್ಯ ಹೊರತುಪಡಿಸಿ ಉಳಿದ ಎಲ್ಲಾ ಸ್ಪರ್ಧೆಗಳು ಉದ್ಘಾಟನಾ ಸಮಾರಂಭದ ಬಳಿಕ ಬೆಳಗ್ಗೆ ಏಕಕಾಲದಲ್ಲಿ ಜರಗಿತು. ಜಾನಪದ ನೃತ್ಯ ಸ್ಪರ್ಧೆಯು ಮಧ್ಯಾಹ್ನ ಭೋಜನದ ಬಳಿಕ ನಡೆಯಿತು.

ಅನಿಸಿಕೆಗಳು..
ಪ್ರತಿಭಾ ಕಾರ್ಯಕ್ರಮ ಅದ್ಭುತವಾಗಿದೆ. ಅನೇಕ ಮಕ್ಕಳ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ. ಫಿಲೋಮಿನಾ ಕಾಲೇಜು ಕ್ಯಾಂಪಸ್ ನಮ್ಮ ವಿದ್ಯಾರ್ಥಿಗಳಿಗೆ ಬಹಳ ಇಷ್ಟವಾಯಿತು. ಇನ್ನಷ್ಟು ಸ್ಪರ್ಧೆಗಳನ್ನು ಏರ್ಪಡಿಸಿ ಮುಖ್ಯವಾಗಿ ಹಾಡುಗಾರಿಕೆ ಅವಕಾಶ ನೀಡಿ.
-ಸಂಧ್ಯಾ ಎಂ.ಡಿ, ಶಿಕ್ಷಕಿ, ಸೈಂಟ್ ರೀಟಾ ಆ.ಮಾ ಪ್ರೌಢಶಾಲೆ, ವಿಟ್ಲ

ಮಕ್ಕಳ ಸರ್ವಾಂಗೀಣ ಪ್ರದರ್ಶನಕ್ಕೆ ಉತ್ತಮವಾದ ವೇದಿಕೆಯನ್ನು ನಿರ್ಮಿಸಿ ಕೊಡಲಾಗಿತ್ತು. ಮಕ್ಕಳಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತಮ ಸದಾವಕಾಶವನ್ನು ಆಯೋಜಕರು ಒದಗಿಸಿ ಕೊಟ್ಟಿದ್ದಾರೆ. ಫಿಲೋಮಿನಾ ಕ್ಯಾಂಪಸ್ ಪ್ಲಾಸ್ಟಿಕ್ ರಹಿತ ಕ್ಯಾಂಪಸ್ ಹೊಂದಿರುವುದು ಹೆಗ್ಗಳಿಕೆಯಾಗಿದೆ.
-ಮೋಹಿನಿ ಎ.ರೈ, ಶಿಕ್ಷಕಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆ

ಇಡೀ ಕಾರ್ಯಕ್ರಮ ವೈವಿಧ್ಯಮಯವಾಗಿ, ಮನೋರಂಜಕವಾಗಿ, ಆಕರ್ಷಕವಾಗಿ ಇತ್ತು. ಮಧ್ಯಾಹ್ನದ ಊಟವಾಗಲಿ, ಉಪಹಾರವಾಗಲಿ ಬಹಳ ರುಚಿಕರವಾಗಿತ್ತು. ಪ್ರತಿಯೊಂದು ಸ್ಪರ್ಧೆಯು ಪರಿಪೂರ್ಣತೆ ಹಾಗೂ ಉತ್ಕೃಷ್ಟತೆಯಿಂದ ಕೂಡಿತ್ತು. ಕಾಲೇಜಿನ ರೋವರ‍್ಸ್ ರೇಂಜರ‍್ಸ್, ಎನ್‌ಸಿಸಿ ಕೆಡೆಟ್ಸ್, ರೆಡ್ ಕ್ರಾಸ್ ಸೊಸೈಟಿ ಸ್ವಯಂಸೇವಕರು ನಮ್ಮನ್ನು ಆದರದಿಂದ, ಸ್ನೇಹತ್ವದಿಂದ ನೋಡಿಕೊಂಡಿದ್ದಾರೆ.
-ಹೇಮಲತಾ ಬಾಕುಳ, ಶಿಕ್ಷಕಿ, ಸುದಾನ ಶಾಲೆ ಪುತ್ತೂರು

ಕಾಲೇಜು ಹಮ್ಮಿಕೊಂಡ ಪ್ರತಿಭಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತುಂಬಾ ಖುಶಿ ಕೊಟ್ಟಿದೆ. ನಮ್ಮಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರ ಸೂಸಲು ಈ ಕಾರ್ಯಕ್ರಮವು ತುಂಬಾ ಸಹಕಾರಿಯಾಗಿದೆ. ನಮಗೆ ಬೇಕಾದ ವ್ಯವಸ್ಥೆಯು ಅತ್ಯಂತ ಅದ್ಭುತವಾಗಿತ್ತು. ಇಲ್ಲಿನ ಎಲ್ಲಾ ಇವೆಂಟ್ಸ್‌ಗಳು ಬಹಳ ಕುತೂಹಲಕಾತರಿಯಾಗಿತ್ತು. ನಮ್ಮ ಪ್ರತಿಭೆಯನ್ನು ತೋರ್ಪಡಿಸಲು ಅನುವು ಮಾಡಿಕೊಟ್ಟ ಸಂಸ್ಥೆಗೆ ಧನ್ಯವಾದಗಳು.
-ಶ್ರುತಿ ಎನ್.ಕೆ, ವಿದ್ಯಾರ್ಥಿನಿ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ

ಫಿಲೋಮಿನಾ ಕಾಲೇಜು ಕ್ಯಾಂಪಸ್ ತುಂಬಾ ಸ್ವಚ್ಛತೆಯಿಂದ ಕೂಡಿದೆ ಮತ್ತು ಇಲ್ಲಿನ ವಿದ್ಯಾರ್ಥಿಗಳು ತುಂಬಾ ಸಭ್ಯತೆಯ ಗುಣವುಳ್ಳವರು. ಕಾರ್ಯಕ್ರಮದಲ್ಲಿನ ಸ್ವಯಂಸೇವಕರು ನಮಗೆ ಸಹಾಯ ಮಾಡಲು ಸದಾ ಸಿದ್ಧರಿದ್ದರು ಎಂದು ಹೇಳಲು ಖುಯಾಗುತ್ತೆ. ಒಟ್ಟಾರೆ ಕಾರ್ಯಕ್ರಮ ಎಕ್ಸೆಲೆಂಟ್
-ಅನುಷಾ ಎಸ್, ವಿದ್ಯಾರ್ಥಿನಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆ

ಫಿಲೋಮಿನಾ ಕಾಲೇಜು ತುಂಬಾ ಶಿಸ್ತಿನಿಂದ ಕೂಡಿದೆ ಎಂಬುದು ಇಲ್ಲಿಗೆ ಬಂದ ಮೇಲೆ ತಿಳಿಯಿತು. ಇಲ್ಲಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಲ್ಲರೂ ನಮ್ಮನ್ನು ಬಹಳ ಪ್ರೀತಿಯಿಂದ ನೋಡಿಕೊಂಡರು. ನಾವು ಇಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದೆವು. ಇಲ್ಲಿನ ಸಂಸ್ಕೃತಿ ತುಂಬಾ ಚೆನ್ನಾಗಿದೆ.
-ಪ್ರೇಯಾ ಎಸ್, ವಿದ್ಯಾರ್ಥಿನಿ, ಷಣ್ಮುಖದೇವ ಪ್ರೌಢಶಾಲೆ, ಪೆರ್ಲಂಪಾಡಿ

ಪ್ರತಿಭಾ ಕಾರ್ಯಕ್ರಮ ತುಂಬಾ ಅದ್ಭುತವಾದದ್ದು. ಏಕೆಂದರೆ ಇದರಲ್ಲಿ ಮಕ್ಕಳಿಗೆ ಕಲಿಯುವಂತಹುದು ಸಾಕಷ್ಟಿದೆ. ಬರೀ ಪಾಠವನ್ನು ಬಿಟ್ಟು ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರಲ್ಲಿ ಇರುವಂತಹ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಸುವರ್ಣಾವಕಾಶ. ಒಟ್ಟಾಗಿ ಈ ಕಾರ್ಯಕ್ರಮ ಬಹಳ ಪ್ರೇರಣೆಯನ್ನು ನೀಡುತ್ತದೆ.
-ಮೈತ್ರೇಯಿ, ಶಿಕ್ಷಕಿ, ಬೆಥನಿ ಆ.ಮಾ ಪ್ರೌಢಶಾಲೆ, ಪುತ್ತೂರು

ವಿದ್ಯಾರ್ಥಿಗಳ ಅಭಿವ್ಯಕ್ತಿ ಪ್ರದರ್ಶನಕ್ಕೆ ಉತ್ತಮ ವೇದಿಕೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ಸೃಜನಾತ್ಮಕತೆ, ಸಮಸ್ಯಾ ವಿಶ್ಲೇಷಣೆ, ಧನಾತ್ಮಕ ಚಿಂತನೆಗೆ ಈ ಕಾರ್ಯಾಗಾರವು ಅವಕಾಶ ಮಾಡಿಕೊಡುತ್ತದೆ. ಸರಕಾರಿ ಶಾಲಾ ವಿದ್ಯಾರ್ಥಿಗಳೂ ಕೂಡ ಖಾಸಗಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವುದು ಉತ್ತಮ ವಾತಾವರಣವಾಗಿದೆ.
-ಪ್ರತಿಭಾ ಕೆ, ಶಿಕ್ಷಕಿ, ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕೃಷ್ಣನಗರ

LEAVE A REPLY

Please enter your comment!
Please enter your name here