ಪುತ್ತೂರು: ಇನ್ನರ್ ವೀಲ್ ಕ್ಲಬ್ ನೇತ್ರತ್ವದಲ್ಲಿ Indiana HOspital and Heart Institute Mangalore ಇದರ ಸಹಯೋಗದೊಂದಿಗೆ ವಿವೇಕಾನಂದ ಪದವಿ ಪೂರ್ವ ಕಾಲೇಜ್ ನಲ್ಲಿ CPR (Cardio Pulmonary Resuscitation) ಕುರಿತು ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲಾಯಿತು.
ತುರ್ತು ಸಂದರ್ಭಗಳಲ್ಲಿ ಪ್ರಾಣರಕ್ಷಣೆ ಮಾಡಲು ಅಗತ್ಯವಾದ ಮೂಲಭೂತ ಕ್ರಮಗಳನ್ನು ಭಾಗವಹಿಸಿದ ವಿದ್ಯಾರ್ಥಿ ಗಳಿಗೆ ಡಾ॥ಭರತ್ (Department of emergency Medicine) ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಕೊಟ್ಟರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜೆನ ಪ್ರಾಂಶುಪಾಲರಾದ ಶ್ರೀ ದೇವಿಚರಣ್,ಉಪನ್ಯಾಸಕರು,ಇನ್ನರ್ ವೀಲ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ರೂಪಲೇಖ ಸ್ವಾಗತಿಸಿದರು,ಕಾರ್ಯದರ್ಶಿ ಸಂಧ್ಯಾ ಸಾಯ ವಂದಿಸಿದರು.
