ಪುತ್ತೂರು: ಪಡ್ನೂರುನಲ್ಲಿರುವ ಸ್ವಾಮಿ ಕೊರಗಜ್ಜ ಸಾನಿಧ್ಯಕ್ಕೆ ಬೆಳ್ಳಿ ಮುಟ್ಟಾಳೆಯನ್ನು ಸಮರ್ಪಿಸಲಾಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ನೇತೃತ್ವದಲ್ಲಿ ಭಕ್ತ ಸಮೂಹದ ಪರವಾಗಿ ಬೆಳ್ಳಿ ಮುಟ್ಟಾಳೆಯನ್ನು ಸಮರ್ಪಣೆ ಮಾಡಲಾಯಿತು.
ಆರಂಭದಲ್ಲಿ ವೇದ ಮೂರ್ತಿ ಹರಿಪ್ರಸಾದ್ ಬನಾರಿರವರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು. ಬಳಿಕ ಮುರದಿಂದ ಕೊಡಂಗೆಯವರೆಗೆ ಬೆಳ್ಳಿ ಮುಟ್ಟಾಳೆಯನ್ನು ಮೆರವಣಿಗೆಯಲ್ಲಿ ತಂದು ಕ್ಷೇತ್ರಕ್ಕೆ ಅರ್ಪಿಸಲಾಯಿತು.
ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಲಕ್ಷ್ಮಣ ಜಾರಿಗೆಬೈಲು ಮತ್ತು ಕುಟುಂಬಸ್ಥರಿಂದ ಹರಕೆಯ ನೇಮೋತ್ಸವ ನಡೆಯಿತು. ಬಳಿಕ ಪಡ್ನೂರು ಅಶ್ವಥಕಟ್ಟೆ ದೇವತಾ ಸಮಿತಿ ಮತ್ತು ಎರ್ಮುಂಜಪಳ್ಳ ಧೂಮಾವತಿ ಯುವಕ ಮಂಡಲದ ವತಿಯಿಂದ ಅನ್ನದಾನ ಸೇವೆ ನಡೆಯಿತು.
ಸ್ವಾಮಿ ಕೊರಗಜ್ಜ ಸಾನಿಧ್ಯದ ಧರ್ಮದರ್ಶಿ ಬಾಬು ಕೊಡಂಗೆ ಮತ್ತು ಬಟ್ಯ ದಂಪತಿ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸೀನಪ್ಪ ಪೂಜಾರಿ ಮಾವಿನಕಟ್ಟೆ, ಮೋಹನ್ ಗೌಡ ಪಡ್ನೂರು, ಸ್ಥಳೀಯರಾದ ಧನಂಜಯ ಪಂಜಿಗುಡ್ಡೆ, ಮನು ನಾಯ್ಕ, ಕಿರಣ್ ಪಂಜಿಗುಡ್ಡೆ, ಸಾಂತಪ್ಪ ನಾಯ್ಕ, ರೋಹನ್ ರಾಜ್, ನಾರಾಯಣ ಕುಲಾಲ್ ಹಾಗೂ ಅಶ್ವಥ ಕಟ್ಟೆ ದೇವತಾ ಸಮಿತಿ ಹಾಗೂ ಧೂಮಾವತಿ ಯುವಕ ಮಂಡಲ ಎರ್ಮುಂಜಪಳ್ಳ ಇದರ ಸದಸ್ಯರು ಉಪಸ್ಥಿತರಿದ್ದರು.