ಉಪ್ಪಿನಂಗಡಿ: ಯುವ ಸಂಸತು ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ

0

ರಾಮಕುಂಜ: ಪುತ್ತೂರು ಶೈಕ್ಷಣಿಕ ವಲಯದಿಂದ(ಕಡಬ ಹಾಗೂ ಪುತ್ತೂರು ತಾಲೂಕು) ಜಿಲ್ಲಾ ಹಂತದ ಪ್ರೌಢಶಾಲಾ ವಿದ್ಯಾರ್ಥಿಗಳ ಯುವ ಸಂಸತು ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಸೂಚನೆಯ ಮೇರೆಗೆ ತರಬೇತಿ ಕಾರ್ಯಕ್ರಮ ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜ್‌ನ ಪ್ರೌಢಶಾಲಾ ವಿಭಾಗದಲ್ಲಿ ತರಬೇತಿ ಕಾರ್ಯಕ್ರಮ ನ.17 ರಂದು ನಡೆಯಿತು.

 



ಸಂಸ್ಥೆಯ ಉಪಪ್ರಾಚಾರ್ಯ ಶ್ರೀಧರ ಭಟ್‌ರವರು ಕಾರ್ಯಾಗಾರವನ್ನು ಉದ್ಘಾಟಿಸಿ ತಂಡಕ್ಕೆ ಶುಭ ಹಾರೈಸಿದರು. ತರಬೇತುದಾರರಾದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜ್‌ನ ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯರವರು ಜಿಲ್ಲಾ ಹಾಗೂ ರಾಜ್ಯ ಹಂತಗಳ ಸ್ಪರ್ಧೆಗಳಲ್ಲಿನ ನಿಯಮಗಳು, ವಿವಿಧ ಹುದ್ದೆಗಳನ್ನು ನಿರ್ವಹಿಸಬೇಕಾದ ಕ್ರಮ, ವಾದಿಸುವ ಶೈಲಿ, ಪ್ರಶ್ನೆಗಳ ಗಟ್ಟಿತನ, ಸದನದಲ್ಲಿನ ಶಿಸ್ತು ಹಾಗೂ ಸಭಾ ನಡಾವಳಿಗಳ ಬಗ್ಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ತಿಳಿಸಿದರು.

ಉಪ್ಪಿನಂಗಡಿ, ರಾಮಕುಂಜ, ಹಿರೇಬಂಡಾಡಿ, ಕೊಂಬೆಟ್ಟು, ಪುತ್ತೂರು ನಗರ ಪ್ರೌಢಶಾಲೆಯಿಂದ ಜಿಲ್ಲಾ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಅವರ ಮಾರ್ಗದರ್ಶಿ ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಉಪ್ಪಿನಂಗಡಿ ಶಾಲೆಯ ಸಮಾಜವಿಜ್ಞಾನ ಶಿಕ್ಷಕಿ ಸುಮಾ ಸ್ವಾಗತಿಸಿ, ರಾಮಕುಂಜ ಶಾಲೆಯ ಶಿಕ್ಷಕ ದಿನೇಶ್ ವಂದಿಸಿದರು.

LEAVE A REPLY

Please enter your comment!
Please enter your name here