ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ನ.27ರಿಂದ ಡಿ.4ರ ತನಕ ’ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ’ ನಡೆಯಲಿದ್ದು ಇದರ ಅಂಗವಾಗಿ ಗೊನೆ ಮುಹೂರ್ತ ಹಾಗೂ ಚಪ್ಪರ ಮುಹೂರ್ತ ನ.21ರಂದು ನಡೆಯಿತು.
ವಿದ್ವಾನ್ ವೇದಮೂರ್ತಿ ಮುರಳಿಕೃಷ್ಣ ಭಟ್ ನಂದಗೋಕುಲರವರು ಪೂಜಾ ವಿಧಿವಿಧಾನ ನೆರವೇರಿಸಿದರು. ಪೆರಣ ಭಂಡಾರ ಮನೆಯ ಮೊಕ್ತೇಸರ ವಿಶ್ವನಾಥ ಗೌಡ ಪೆರಣ, ಶ್ರೀ ಮದ್ಭಾಗವತ ಸಪ್ತಾಹ ಯಜ್ಞ ಸಮಿತಿ ಅಧ್ಯಕ್ಷ ಓಡ್ಯಪ್ಪ ಗೌಡ ಪೆರಣ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು, ಉಪಾಧ್ಯಕ್ಷರಾದ ತಿಮ್ಮಪ್ಪ ಗೌಡ ಕೋಡಿಯಡ್ಕ, ಕುಶಾಲಪ್ಪ ಗೌಡ ಅನಿಲ, ಕೊರಗಪ್ಪ ಗೌಡ ಕಲ್ಲಡ್ಕ, ನಾಗಪ್ಪ ಗೌಡ ಅಲಂಗೂರು, ಹೊನ್ನಪ್ಪ ಗೌಡ ಕುದ್ಕೋಳಿ, ಚೆನ್ನಪ್ಪ ಗೌಡ ಹೊಕ್ಕಿಲ, ಆನಂದ ಗೌಡ ಬರಮೇಲು, ಜೊತೆ ಕಾರ್ಯದರ್ಶಿ ಶೇಖರ ಗೌಡ ಬನತ್ತಕೋಡಿ, ಕೋಶಾಧಿಕಾರಿ ಜನಾರ್ದನ ಗೌಡ ಪಟೇರಿ, ಸದಸ್ಯರಾದ ಕಮಲಾಕ್ಷ ಗೌಡ ಗೋಳಿತ್ತೊಟ್ಟು, ವೆಂಕಪ್ಪ ಗೌಡ ಡೆಬ್ಬೇಲಿ, ಶೇಖರ ಗೌಡ ಅನಿಲಬಾಗ್, ಜಾನಪ್ಪ ಗೌಡ ಬೊಟ್ಟಿಮಜಲು, ಜಯಂತ ಅಂಬರ್ಜೆ, ಗೋಪಾಲ ಗೌಡ ಕುದ್ಕೋಳಿ, ರಮೇಶ ಗೌಡ ಕಲ್ಲಡ್ಕ, ಪುರುಷೋತ್ತಮ ಕುದ್ಕೋಳಿ, ರಘುನಾಥ ಕುದ್ಕೋಳಿ, ಸುಷ್ಮಾ ಪೆರಣ, ಅಭಿಜಿತ್ ಪೆರಣ, ವಿಶ್ವಜಿತ್ ಪೆರಣ, ಮಾಧವ ಗೌಡ ಪೆರಣ, ಬಾಬು ಗೌಡ ಗೌಡತ್ತಿಗೆ, ಬಾಲಕೃಷ್ಣ ಗೌಡ ಗೌಡತ್ತಿಗೆ, ಮಹಿಳಾ ಸಮಿತಿ ಸಂಚಾಲಕಿ ತಿರುಮಲ ಗೌಡತ್ತಿಗೆ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯೆ ಜೀವಿತಾ ಪೆರಣ, ಗುಲಾಬಿ ಬನತ್ತಕೋಡಿ, ಸುಂದರಿ ಬೊಟ್ಟಿಮಜಲು ಹಾಗೂ ವಿವಿಧ ಸಮಿತಿಗಳ ಸಂಚಾಲಕರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.