ಪುತ್ತೂರು: ನ.21 ರಂದು ಸಂತ ವಿಕ್ಟರ್ ಬಾಲಿಕಾ ಪ್ರೌಡ ಶಾಲೆ ಪುತ್ತೂರಿನಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ನಡೆಯಿತು.
ಸ್ಮಾರ್ಟ್ ಕ್ರೇಡಲು, ಫಾಸ್ಟ್ ಸ್ಪಿನ್ನಿಂಗ್ ಗೇಮ್, ಆಲ್ಕೋಹಾಲ್ ಡಿಟೆಕ್ಷನ್, ಲೈನ್ ಫಾಲೋವಿಂಗ್ ರೋಬರ್ಟ್, ಲೈಟ್ ಫಾಲೋವಿಂಗ್ ರೋಬರ್ಟ್, ಸ್ಮಾರ್ಟ್ ಕ್ಲೋತ್ ಡ್ರೈಯಿಂಗ್ ಸ್ಟ್ಯಾಂಡ್, ಕಾರ್ ತೆಫ್ಟ್ ಅಲಾರ್ಮ, ಡಿಸ್ಟೆನ್ಸ್ ಮೀಟರ್ ಲೈಟ್ ರೊಟೇಟಿಂಗ್ ಸೋಲರ್ ಪ್ಯಾನಲ್/ಆಟೊ ಮ್ಯಾಟಿಕ್ ಗೇಟ್ ಓಪನ್, ಒಬ್ಜಕ್ಟ್ ಅವೈಡಿಂಗ್ ರೋಬರ್ಟ್ ಮುಂತಾದ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು.
ಶಾಲಾ ಸಂಚಾಲಕರಾದ ಲಾರೆನ್ಸ್ ಮಸ್ಕರೇನ್ಹಸ್ರವರು ವಿಜ್ಞಾನ ಮಾದರಿ ಪ್ರದರ್ಶನ ಉದ್ಘಾಟಿಸಿ ಆಶೀರ್ವದಿಸಿ ವಿದ್ಯಾರ್ಥಿಗಳನ್ನು ಹರಿಸಿದರು.
ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ ಉಪಸ್ಥಿತರಿದ್ದು, ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಸುತ್ತಲಿನ ಶಾಲೆಗಳಾದ ಸಂತ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆ, ಮಾಯಿ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಕಟ್ಟೆ ಶಿವರಾಮ ಕಾರಂತ ಮುಂತಾದ ಶಾಲೆಗಳ ವಿದ್ಯಾರ್ಥಿನಿಗಳು ಬಂದು ವಿಜ್ಞಾನ ಮಾದರಿ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.