ಪುತ್ತೂರು: ನಿಜವಾದ ಶಿಕ್ಷಣವೆಂದರೆ ಅಂತರಾಳದಲ್ಲಿ ವುದನ್ನೂ ಹೊರ ತರುವುದು, ಮೂಲ ಭಾರತೀಯ ಸಂಸ್ಕೃತಿಗಳನ್ನು ಅಧ್ಯಯನ ಮಾಡುವುದು, ಈ ಸಮಾಜದ ಜೀವಿಗಳಲ್ಲಿ ಮನೆ, ನೆರಮನೆ ಸದಸ್ಯನಾಗಿ, ರಾಜ್ಯ, ದೇಶದ ಪ್ರಜೆಯಾಗಿ, ವಿಶ್ವಮಾನವ ನಾಗುವ ವಿಶಾಲ ಪರಿಕಲ್ಪನೆ ಇರಬೇಕು. ಸಾಧನೆ, ಕಲಿಕೆಗೆ ಸರ್ಟಿಫಿಕೇಟ್ ಇದ್ದಂತೆ, ನೀವೂ ನಿಮ್ಮ ವ್ಯಕ್ತಿತ್ವಕ್ಕೆ ಸರ್ಟಿಫಿಕೇಟ್ ಆಗಬೇಕೆಂದು , ಸ ಪ.ಪೂ. ಕಾ.ಕೆಯ್ಯೂರು ,ಬೆಳ್ತಂಗಡಿ ಇಲ್ಲಿನ ಪ್ರಭಾರ ಪ್ರಾಂಶುಪಾಲ ಬಾಲಕೃಷ್ಣ ಬೇರಿಕೆ ಅಭಿಪ್ರಾಯಪಟ್ಟರು.
ನ. 27ರಂದು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಇವುಗಳ ಆಶ್ರಯದಲ್ಲಿ ನಡೆದ ಗಣಪತಿ ಹೋಮ ಸತ್ಯನಾರಾಯಣ ಪೂಜಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕಲಿಯುವಿಕೆಯಲ್ಲಿ ಗಣನೀಯ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪುರಸ್ಕಾರಿಸಿ ,ಅಭಿನಂದನೆ ಸಲ್ಲಿಸಿ ಬಳಿಕ ಮಾತನಾಡಿ, ಒಂದು ಹಂತದ ಬಳಿಕ ನೀವು ಆರ್ಥಿಕ ಸಧೃಢರಾದರೆ ,ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗಿ ಅವರನ್ನೂ ಬೆನ್ನು ತಟ್ಟಿ ಪ್ರೋತ್ಸಾಹಿಸೋ ಕಾರ್ಯ ಮಾಡಿ. ಯಾರು ಇತರರಿಗಾಗಿ ಬದುಕುತ್ತಾರೋ ಅವರು ನಿಜವಾಗಿಯೂ ಬದುಕಿರುತ್ತಾರೆಂದೂ ಕಿವಿಮಾತು ಹೇಳಿದರು.
ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ ಮಾತನಾಡಿ ,ಸಾಧನೆಯೆಂಬುದು ನಿರಂತರವಾಗಿ ಸಾಗಬೇಕು. ಸಾಧನೆಗೆ ವಿದ್ಯೆಯೊಂದಿದ್ದರೆ ಮಾತ್ರ ಸಾಲದು , ಬುದ್ದಿಯೂ ಬೇಕೂ ಜೊತೆಗೆ ಎಲ್ಲರಲ್ಲೂ ನಾಯಕತ್ವ ಗುಣ ಬೆಳೆಯಬೇಕು ಎಂದು ಹೇಳಿ ಹಾರೈಸಿದರು. ವೇದಿಕೆಯಲ್ಲಿ ಮರಾಟಿ ಸಮಾಜ ಸೇವಾ ಸಂಘದ ಖಜಾಂಚಿ ಬಾಲಕೃಷ್ಣ ನಾಯ್ಕ ಬಿ ,ಸಂಚಾಲಕ ಕರುಣಾಕರ ಟಿ.ಎನ್ ,ಕಾರ್ಯದರ್ಶಿ ಸಾವಿತ್ರಿ ಶೀನಪ್ಪ ,ಮಹಿಳಾ ವೇದಿಕೆ ಅಧ್ಯಕ್ಷೆ ಯಮುನಾ ಪಟ್ಟೆ ,ಪ್ರ.ಕಾ.ನವೀನ್ ಕುಮಾರ್ ಉಪಸ್ಥಿತರಿದ್ದರು. ಮ.ಸ.ಸೇ.ಸಂ. ಮಾಜಿ ಅಧ್ಯಕ್ಷ ಶಿವಪ್ಪ ನಾಯ್ಕ ಮುಖ್ಯ ಅತಿಥಿ ಬಾಲಕೃಷ್ಣ ಬೇರಿಕೆಯವರನ್ನು ಸ್ವಾಗತಿಸಿ , ನಿವೃತ್ತ ಪ್ರಾಂಶುಪಾಲ ದುಗ್ಗಪ್ಪ ನಾಯ್ಕ ಪರಿಚಯಿಸಿದರು.
ಸಂಘದ ಉಪಾಧ್ಯಕ್ಷ ಮಂಜುನಾಥ್ ಎನ್. ಎಸ್ ಪ್ರಸ್ತಾವನೆಗೈದರು. ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ ಗಳ ಬಳಿಕ ಮಹಿಳಾ ಸಂಘಟನೆ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರೆವೇರಿತು. ಗೌರಿ ಬರೆಪ್ಪಾಡಿ ಬಳಗ ಪ್ರಾರ್ಥನೆ ನೆರವೇರಿಸಿ, ಕರುಣಾಕರ ಪಾಂಗ್ಲಾಯಿ ಸ್ವಾಗತಿಸಿ , ಗಿರೀಶ್ ಸೊರಕೆ ನಿರೂಪಿಸಿ ,ಅಶೋಕ್ ಬಲ್ನಾಡ್ ವಂದಿಸಿದರು.
ನಗರಸಭಾ ಸದಸ್ಯ ಶೀನಪ್ಪ ನಾಯ್ಕ ,ಮಹಮ್ಮಯಿ ಸೌಹಾರ್ದ ಸಹಕಾರಿ ಅಧ್ಯಕ್ಷ ಶೀನ ನಾಯ್ಕ ,ಉಪಾಧ್ಯಕ್ಷ ಚೋಮ ನಾಯ್ಕ , ಮರಾಟಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಮಾಜ ಭಾಂಧವರು ,ವಿದ್ಯಾರ್ಥಿಗಳು ಹಾಗೂ ಹೆತ್ತವರು ಹಾಜರಿದ್ದರು.ಬಳಿಕ ವಿದ್ಯಾರ್ಥಿ ಗಳಿಂದ ಯೋಗಾಸನ ,ತದನಂತರ ಬೋಜನ ನೆರವೇರಿತು.
82 ವಿದ್ಯಾರ್ಥಿಗಳಿಗೆ ಪುರಸ್ಕಾರ…
ಎಸ್ಎಸ್ಎಲ್ಸಿ ,ಪಿಯು ,ಡಿಗ್ರಿ ,ಮಾಸ್ಟರ್ ಡಿಗ್ರಿ ಹಾಗೂ ಪಿಎಚ್ ಡಿ ಯಲ್ಲಿ ಅದ್ಬುತ ಸಾಧನೆ ಮಾಡಿರುವಂಥ ಯುವ ಪ್ರತಿಭೆಗಳನ್ನೂ ಪ್ರೋತ್ಸಾಹಿಸಿ ,ಗೌರವಿಸೋ ಮೂಲಕ , ಸಂಘಟನೆಯೂ ನಿರಂತರವಾಗಿ ಶ್ರೇಷ್ಠ ಕಾರ್ಯಗಳನ್ನೂ ಮಾಡುತ್ತಿದೆ.