ಪುತ್ತೂರು: ಸಹ್ಯಾದ್ರಿ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜ್ ಮಂಗಳೂರು ಅವರು ನ.24ರಿಂದ ಮೂರು ದಿನ ಆಯೋಜಿಸಿದಂತ ‘ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್’ ಎಂಬ ವಿಜ್ಞಾನ ಮೇಳದಲ್ಲಿ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾದ ಅಟಲ್ ಟಿಂಕರಿಂಗ್ ಲ್ಯಾಬ್ ನ ವಿದ್ಯಾರ್ಥಿಗಳ 4 ತಂಡಗಳು ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ.
ಒಟ್ಟು 1 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ ಸುಮಾರು 500 ಮಾದರಿಗಳನ್ನು ಈ ಸ್ಪರ್ಧೆಯಲ್ಲಿ ಪ್ರದರ್ಶಿಸಲಾಗಿತ್ತು. ಸ್ಪರ್ಧೆಯಲ್ಲಿ ಕೊಂಬೆಟ್ಟು ಶಾಲೆಯ ವಿದ್ಯಾರ್ಥಿಗಳಾದ ನಿಕಿತಾ, ವಿಲಾಸಿನಿ ,ಹಾಗೂ ಶ್ರೇಯ ಕೆ ರವರು ಆಯೋಜಿಸಿದ ‘ಕ್ಯಾಶ್ ರಿಮೂವರ್ ಮಾದರಿಯು’ ದ್ವಿತೀಯ ಬಹುಮಾನವನ್ನು ಪಡೆದಿದೆ. ಉಜ್ವಲ್ ಪ್ರವೀತ್ ಹಾಗೂ ಸಾಯಿ ಪ್ರಸಾದ್ ರವರ ‘ಅರೆಕಾ ಅಗ್ರಿಟೆಕ್’ ಎಂಬ ಮಾದರಿಯು ಪ್ರಥಮ ಬಹುಮಾನದೊಂದಿಗೆ ರೂ. 12000 ನಗದು ಹಾಗೂ ಅವರ ಈ ಯೋಜನೆಗೆ ಉಚಿತವಾದ ಮೆಂಟರಿಂಗ್ ಅನ್ನು ಪಡೆದಿರುತ್ತದೆ. ಅಟಲ್ ಟಿಂಕರಿಂಗ್ ಲ್ಯಾಬ್ ನ ನೋಡಲ್ ಶಿಕ್ಷಕಿ ಸಿಂಧು.ವಿ.ಕೆ ಹಾಗೂ ಐ.ಟಿ. ಉಪನ್ಯಾಸಕ ಆಶ್ಲೇಶ್ ಕುಮಾರ್ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಸಂಸ್ಥೆಯ ಉಪಪ್ರಾಂಶುಪಾಲ ವಸಂತ ಮೂಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.