ಗೋಳಿತ್ತೊಟ್ಟು ಪೆರಣ ಭಂಡಾರ ಮನೆಯಲ್ಲಿ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಂಪನ್ನ

0

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ನ.27ರಂದು ಆರಂಭಗೊಂಡಿದ್ದ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಡಿ.4ರಂದು ಸಂಪನ್ನಗೊಂಡಿತು.

ಕೊನೆಯ ದಿನವಾದ ಡಿ.4ರಂದು ಬೆಳಿಗ್ಗೆ ಕಲಶಾರಾಧನೆ, ಶ್ರೀ ಮದ್ಭಾಗವತ ಪಾರಾಯಣ ಆರಂಭ, ದ್ವಾದಶ ಸ್ಕಂದ ಸಮಾಪ್ತಿ ಪರ್ಯಂತ, ಉತ್ತರ ಮಾಹಾತ್ಮ್ಯ ಪಾರಾಯಣ ನಡೆಯಿತು. ಬೆಳಿಗ್ಗೆ ಶ್ರೀ ಗಾಯತ್ರಿ ಯಜ್ಞ ಆರಂಭಗೊಂಡು ಮಧ್ಯಾಹ್ನ ಯಜ್ಞದ ಪೂರ್ಣಾಹುತಿ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ, ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಯಜ್ಞ ಮಂಟಪದಿಂದ ದೇವರ ವಿಗ್ರಹವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಪೆರಣ ಭಂಡಾರ ಮನೆಯ ಮೊಕ್ತೇಸರ ವಿಶ್ವನಾಥ ಗೌಡರವರ ತೋಟದಲ್ಲಿನ ಕೆರೆಯಲ್ಲಿ ವಿಗ್ರಹದ ಅವಭೃತ ಸ್ನಾನ ನಡೆಯಿತು. ಅಲ್ಲಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಬಳಿಕ ಯಜ್ಞ ಮಂಟಪದಲ್ಲಿ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಚಿವರು, ಶಾಸಕರ ಭೇಟಿ:

ಡಿ.4ರಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ, ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಉದ್ಯಮಿ ಕುಶಾಲಪ್ಪ ಗೌಡ ಪೂವಾಜೆ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದರು. ಮಧ್ಯಾಹ್ನ 1 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಪೆರಣ ಭಂಡಾರ ಮನೆಯ ಮೊಕ್ತೇಸರ ವಿಶ್ವನಾಥ ಗೌಡ ಪೆರಣ, ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ಅಧ್ಯಕ್ಷ ಓಡ್ಯಪ್ಪ ಗೌಡ ಪೆರಣ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು, ಉಪಾಧ್ಯಕ್ಷರಾದ ತಿಮ್ಮಪ್ಪ ಗೌಡ ಕೋಡಿಯಡ್ಕ, ಕುಶಾಲಪ್ಪ ಗೌಡ ಅನಿಲ, ಕೊರಗಪ್ಪ ಗೌಡ ಕಲ್ಲಡ್ಕ, ನಾಗಪ್ಪ ಗೌಡ ಅಲಂಗೂರು, ಹೊನ್ನಪ್ಪ ಗೌಡ ಕುದ್ಕೋಳಿ, ಚೆನ್ನಪ್ಪ ಗೌಡ ಹೊಕ್ಕಿಲ, ಆನಂದ ಗೌಡ ಬರಮೇಲು, ಜೊತೆ ಕಾರ್ಯದರ್ಶಿ ಶೇಖರ ಗೌಡ ಬನತ್ತಕೋಡಿ, ಕೋಶಾಧಿಕಾರಿ ಜನಾರ್ದನ ಗೌಡ ಪಠೇರಿ, ಸದಸ್ಯರಾದ ಕಮಲಾಕ್ಷ ಗೌಡ ಗೋಳಿತ್ತೊಟ್ಟು, ಮೋಹನ ಗೌಡ ಪಠೇರಿ, ಮಂಜಪ್ಪ ಗೌಡ ಪೆರ್ನೆ, ವೀರಪ್ಪ ಗೌಡ ಕಲ್ಲಡ್ಕ, ನೋಣಯ್ಯ ಗೌಡ ಅನಿಲ, ವಿವಿಧ ಸಮಿತಿ ಸಂಚಾಲಕರಾದ ಆನಂದ ಗೌಡ ದೇವಸ್ಯಕೋಡಿ, ಶೇಖರ ಗೌಡ ಅನಿಲಬಾಗ್, ಡೀಕಯ್ಯ ಗೌಡ ಕಲ್ಲಡ್ಕ, ರಮೇಶ ಗೌಡ ಕಲ್ಲಡ್ಕ, ವೆಂಕಪ್ಪ ಗೌಡ ಡೆಬ್ಬೇಲಿ, ನವೀನ ಗೌಡ ಕೋಡಿಯಡ್ಕ, ಬಾಲಕೃಷ್ಣ ಗೌಡ ಗೌಡತ್ತಿಗೆ, ಮಾಧವ ಗೌಡ ಪೆರಣ, ಪುರುಷೋತ್ತಮ ಕುದ್ಕೋಳಿ, ಡೊಂಬಯ್ಯ ಗೌಡ ಗೌಡತ್ತಿಗೆ, ತಿರುಮಲ ಗೌಡತ್ತಿಗೆ, ನಾರಾಯಣ ಗೌಡ ತೆಂಕುಬೈಲು ಸೇರಿದಂತೆ ಸಮಿತಿ ಸದಸ್ಯರು, ಪೆರಣ ಕುಟುಂಬಸ್ಥರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here