ಈಶ್ವರಮಂಗಲ: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು: ಶ್ರೀ ಗಜಾನನ ವಿದ್ಯಾಸಂಸ್ಥೆಗಳು ಹನುಮಗಿರಿ, ಈಶ್ವರಮಂಗಲ ಇಲ್ಲಿನ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ದ.3 ರಂದು ಬೆಳಗ್ಗೆ 9.30ಕ್ಕೆ ನಡೆಯಿತು.


ನಿವೃತ್ತ ದೈಹಿಕ ಶಿಕ್ಷಕ ರಘುನಾಥ ರೈ ದೀಪ ಬೆಳಗಿಸಿ, ವಿದ್ಯಾರ್ಥಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಅತೀ ಅವಶ್ಯಕ, ಕ್ರೀಡೆಯಲ್ಲಿ ಸೋಲು ಗೆಲುವು ಎಂಬುದು ಒಂದೇ ನಾಣ್ಯದ ಎರಡು ಮುಖಗಳು. ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂಬ ಮಾಹಿತಿ ನೀಡಿದರು.


ಸಂಪ್ಯ ಆರಕ್ಷಕ ಠಾಣೆಯ ಪ್ರೊಬೇಷನರಿ ಪೊಲೀಸ್ ಉಪ ನಿರೀಕ್ಷಕ ಕಾರ್ತಿಕ್ ಕೆ ಇವರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ, ವಿದ್ಯಾರ್ಥಿಗಳಿಂದ ಗೌರವ ವಂದನೆಯನ್ನು ಸ್ವೀಕರಿಸಿ, ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಸೋಲನ್ನು ಸ್ವೀಕರಿಸಿ, ಗೆಲುವನ್ನು ಸಂಭ್ರಮಿಸಿ, ದೇಶವನ್ನೇ ಪ್ರತಿನಿಧಿಸುವಂತಹ ಕ್ರೀಡಾಪಟುಗಳಾಗಿ ಹೊರಹೊಮ್ಮುವಂತಾಗಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಶಿವರಾಮ ಪಿ ಇವರು ಕ್ರೀಡಾಕೂಟದಲ್ಲಿ ಶ್ರೀ ಗಜಾನನ ವಿದ್ಯಾಸಂಸ್ಥೆಯು ಬೆಳಗುವಂತಾಗಲಿ, ಅಂತಹ ಉತ್ಸಾಹವನ್ನು ಶ್ರೀ ಪಂಚಮುಖಿ ಅಂಜನೇಯನು ಕರುಣಿಸಲಿ ಎಂದರು.

ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯ ಶಿವರಾಮ ಬೀರ್ನಕಜೆ, ಸೂರ್ಯನಾರಾಯಣ ಭಟ್, ನಿವೃತ್ತ ದೈಹಿಕ ಶಿಕ್ಷಕ ಆನಂದ, ಸಂಪ್ಯ ಆರಕ್ಷಕ ಠಾಣೆಯ ಸಿಬ್ಬಂದಿ ಮತ್ತು ಸಂಸ್ಥೆಯ ಎಲ್ಲಾ ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ ಶಾಮಣ್ಣ ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಉತ್ತಮ್ ಪಿ ವಿ ಸ್ವಾಗತಿಸಿ, ಧೈಹಿಕ ಶಿಕ್ಷಕ  ಪ್ರಸಾದ್ ವಂದಿಸಿ ಶಿಕ್ಷಕಿಸೌಮ್ಯ ಎ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here