ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ಅ ಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀನಾರಾಯಣಗುರು ಅಧ್ಯಯನ ಪೀಠ ಇದರ ಸಂಯೋಜನೆಯಲ್ಲಿ ಹಾಗೂ ಅಕ್ಷಯ ಕಾಲೇಜು ಪುತ್ತೂರು ರಾಷ್ಟೀಯ ಸೇವಾ ಯೋಜನ ಸಹಯೋಗದಲ್ಲಿ ಅಕ್ಷಯ ಸಂತ ನಾರಾಯಣಗುರು ವಿಚಾರಧಾರೆ ಡಿ.6ರಂದು ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಕಾಟಿಪಳ್ಳ ಇದರ ಅಧ್ಯಕ್ಷ ಪಿ. ದಯಾಕರ್ ದೀಪ ಪ್ರಜ್ವಲಿಸಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ನಾರಾಯಣಗುರು ಆಂಗ್ಲಮಾಧ್ಯಮ ಪ್ರೌಢಶಾಲೆ ಕಾಟಿಪಳ್ಳ ಇದರ ಮುಖ್ಯೋಪಾಧ್ಯಾಯಿನಿ ಗುಣವತಿ ರಮೇಶ್ ಅಕ್ಷಯ ಸಂತ ಸತ್ವ ನಾರಾಯಣಗುರು ವಿಷಯದ ಕುರಿತು ನಾರಾಯಣಗುರುಗಳ ಸಾಮಾಜಿಕ ಸುಧಾರಣೆ ಹಾಗೂ ಅವರ ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿದರು.
ನಾರಾಯಣಗುರು ಅಧ್ಯಯನ ಪೀಠದ ಸಂಯೋಜಕ ಡಾ. ಗಣೇಶ್ ಅಮೀನ್ ಸಂಕಮಾರ್ ನಾರಾಯಣಗುರುಗಳ ತತ್ವದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲುರವರು ವಿಶ್ವವಿದ್ಯಾನಿಲಯದವರು ನಮ್ಮ ಕಾಲೇಜನ್ನು ಗುರುತಿಸಿ, ನಾರಾಯಣಗುರುಗಳ ವಿಚಾರಧಾರೆ ನಡೆಸಲು ಅವಕಾಶ ನೀಡಿದ ಬ್ರಹ್ಮಶ್ರೀನಾರಾಯಣಗುರು ಅಧ್ಯಯನ ಪೀಠಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಕಾಟಿಪಳ್ಳ ಇದರ ಸದಸ್ಯರಾದ ಭೋಜ ಅಂಚನ್ ಮಧ್ಯ ಹಾಗೂ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿಯಾದ ಕಲಾವತಿ, ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿಯಾದ ಅರ್ಪಿತ್ ಟಿ. ಎ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಗನ್ ದೀಪ್ ಎ, ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಂಥಾಪಾಲಕಿ ಪ್ರಭಾವತಿ ಸ್ವಾಗತಿಸಿ, ಉಪನ್ಯಾಸಕಿ ರಶ್ಮಿ. ಕೆ ವಂದಿಸಿದರು. ಉಪನ್ಯಾಸಕಿಆಶಿಕಾ ಫರ್ಝಾನ ಕೆ. ಎ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.