ಮರಿಲ್ ಈ. ಎಸ್. ಆರ್. ಪ್ರೆಸಿಡೆನ್ಸಿ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ಸಭೆ

0

ಪುತ್ತೂರು: ಮರಿಲ್ ಈ. ಎಸ್. ಆರ್. ಪ್ರೆಸಿಡೆನ್ಸಿ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ಸಂಚಾಲಕರಾದ ಜಾಕೀರ್ ಹುಸೇನ್ ರವರ ಅಧ್ಯಕ್ಷತೆಯಲ್ಲಿ ನೂತನ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಭೆ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಪ್ರತಿಷ್ಠಿತ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಶೈಕ್ಷಣಿಕ ಪರಿವೀಕ್ಷಕ ಮತ್ತು ತರಬೇತಿ ನಿರ್ದೇಶಕ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಮನೋಶಾಸ್ತ್ರ ಉಪನ್ಯಾಸಕರಾದ ರಘುರಾಜ್ ಭಟ್ ಉಬಾರಡ್ಕ ರವರು ಆಗಮಿಸಿ ಮಾತನಾಡಿ ನಮ್ಮ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಬೇಕಾದರೆ ಅವರನ್ನು ಬಾಲ್ಯದಿಂದಲೇ ಶಿಸ್ತುಬದ್ದರನ್ನಾಗಿ ಬೆಳೆಸಬೇಕು ಎಂದರು. ಮುಖ್ಯ ಅತಿಥಿಯಾಗಿ ಪತ್ರಕರ್ತ  ಹಮೀದ್ ಕೆ.ಎ.ರವರಯ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ತಾಜನ್ನಿಸ ರವರು ಸ್ವಾಗತಿಸಿ, ಸಹ ಶಿಕ್ಷಕಿ ಸುಶಾಂತಿ ರವರು ವರದಿವಾಚಿಸಿದರು.

ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಮಿತಿಯನ್ನು ರಚಿಸಲಾಯಿತು. ಅದ್ಯಕ್ಷರಾಗಿ ಹಮೀದ್, ಉಪಾಧ್ಯಕ್ಷರಾಗಿ ಫಾತಿಮತ್ ನಾಝಿಯಾ ಗೌರವಾಧ್ಯಕ್ಷರಾಗಿ ಹಮೀದ್ ಕೆ. ಎ. ಹಾಗೂ ಕಾರ್ಯದರ್ಶಿಯಾಗಿ ಶಾಲಾ ಶಿಕ್ಷಕಿ ಸುಶಾಂತಿ ಹಾಗೂ ಏಳು ಜನರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾ ಕೀರ್ತಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟಿನ ಸದಸ್ಯರಾದ ಮತ್ಸೂದು, ವಿ.ಕೆ ಶರೀಫ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ. ಎಸ್. ಆರ್. ಟ್ರಸ್ಟಿನ ಸದಸ್ಯರಾದ ವಿ.ಕೆ ಶರೀಫ್ ವಂದನಾರ್ಪಣೆಗೈದರು. ಸಹ ಶಿಕ್ಷಕಿ ರಾಹಿಲ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here