ವಿಟ್ಲ: ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಷನ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ ಕರ್ನಾಟಕ ಜನಪರ ವೇದಿಕೆಯ ಸ್ಥಾಪಕ ಅಧ್ಯಕ್ಷ ಬೆಳ್ಳಿ ಪಾಡಿ ಗುಣರಂಜನ್ ಶೆಟ್ಟಿರವರು ಡಿ.7ರಂದು ದೆಹಲಿಯಲ್ಲಿ ಅಧೀಕೃತವಾಗಿ ಅಧಿಕಾರ ಸ್ವೀಕರಮಾಡಿದರು.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ, ಉತ್ತರಪ್ರದೇಶದ ಕೇಶರ್ ಗಂಜ್ನ ಲೋಕಸಭಾ ಸದಸ್ಯ ಬ್ರಿಜ್ ಭೂಷಣ್ ಶರಣ್ ಸಿಂಗ್ ರವರು ಅಧಿಕಾರ ಹಸ್ತಾಂತರ ಮಾಡಿದರು.
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿಮುಂಚೂಣಿಯಲ್ಲಿರುವ ಪರಿಸರವಾದಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿರವರು ಜಯಕರ್ನಾಟಕ ಜನಪರ ವೇದಿಕೆ, ಐಕೇರ್ ಬ್ರಿ ಗೇಡ್ ಮತ್ತು ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷರಾಗಿದ್ದಾರೆ.
ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ಉರಮಾಲು ಗುತ್ತು ನಿವಾಸಿಯಾಗಿರುವ ಗುಣರಂಜನ್ ಶೆಟ್ಟಿ ಬೆಳ್ಳಿಪ್ಪಾಡಿ ಮನೆತನದವರಾಗಿದ್ದಾರೆ. ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಯವರ ಸಹೋದರನಾಗಿರುವ ಗುಣರಂಜನ್ ಶೆಟ್ಟಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ಅಭಿಮಾನಿಬಳಗದ ವ್ಯಾಪಕ ಕುಶಿಗೆ ಕಾರಣವಾಗಿದೆ.