ಪುತ್ತೂರು:ಎಳೆಯರ ಪ್ರತಿಭೆಯ ಪತ್ರಿಕೆಯಾದ ಮಕ್ಕಳ ಜಗಲಿಯವರು ಆಯೋಜಿಸಿದ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಸುಶ್ಮಿತಾ ಬಿ. ಆರ್ ಮಕ್ಕಳ ಜಗಲಿಯ ಮೆಚ್ಚುಗೆ ಬಹುಮಾನವನ್ನು ಪಡೆದಿರುತ್ತಾರೆ.
ಇವರು ಶಿವಮೊಗ್ಗದ ಹೊಸನಗರದ ರಾಘವೇಂದ್ರ ಬಿ ಪಿ ಮತ್ತು ಶ್ಯಾಮಲ ಭಟ್ ದಂಪತಿ ಪುತ್ರಿ.
ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತುಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.