ಪುತ್ತೂರು: ಮೂಡಂಬೈಲು ಎಂಬ ಕರ್ನಾಟಕದ ಕೊನೆಯ ಹಳ್ಳಿಯಲ್ಲೊಂದು ಸರಕಾರಿ ಶಾಲೆ. ದಿನಕ್ಕೆ ಕೇವಲ ಒಂದು ಬಸ್ಸು ಮಾತ್ರ ಹೋಗುವ ಈ ಕುಗ್ರಾಮದಲ್ಲೊಂದು ಸರಕಾರಿ ಶಾಲೆ ತೊಂಭತ್ತು ವರ್ಷಗಳನ್ನು ಪೂರ್ಣಗೊಳಿಸಿ ಶತಮಾನದತ್ತ ಹೆಜ್ಜೆ ಇರಿಸುತ್ತಿದೆ.
ಡಿ. 10 ರಂದು ಶಾಲೆ ತನ್ನ ತೊಂಭತ್ತನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ವೇದಿಕೆಯಲ್ಲಿ ಆಸೀನರಾದ 11 ಗಣ್ಯರಲ್ಲಿ 8 ಜನ ಶಾಲೆಯ ಹಳೆವಿದ್ಯಾರ್ಥಿಗಳೇ ಇದ್ದುದು ವಿಶೇಷವಾಗಿತ್ತು. ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ವಿದ್ಯಾನಂದ ಎನ್ ಮತ್ತು ಅಬ್ದುಲ್ಲಾ ಮಾದುಮೂಲೆ ಇವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪಾ ಇಲಾಖೆಯ ಪರವಾಗಿ ಶಾಲೆಯನ್ನು ಅಭಿನಂದಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಪ್ರಾಧ್ಯಾಪಕ ಹರಿಪ್ರಸಾದ್ ಎನ್ ಉಪನ್ಯಾಸ ನೀಡಿದರು.
ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಪೂಜಾರಿ ಮೂಡಂಬೈಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರುಗಳಾದ ಅಶೋಕ ಸುವರ್ಣ, ರಾಜೇಶ ನಾಯ್ಕ, ವಾಣಿಶ್ರೀ, ಶಾರದ ಉಪಸ್ಥಿತರಿದ್ದರು. ಶಿಕ್ಷಕಿ ಶೃತಿ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಆನಂದ ನಾಯ್ಕ ವಂದಿಸಿದರು. ಮುಖ್ಯಶಿಕ್ಷಕ ಅರವಿಂದ ಕುಡ್ಲ ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.