ಪುತ್ತೂರು: ಅನಾರೋಗ್ಯದಿಂದ ನಿಧನರಾದ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕಾವು ನಿವಾಸಿ ಅನುಶ್ರೀಯವರ ಕನಸು ಕನಸಾಗಿಯೇ ಉಳಿಯಿತು ಎಂದು ಆಕೆಯ ತಂದೆ ಧರ್ಮಲಿಂಗಮ್ ದುಖಃದಿಂದ ಹೇಳಿಕೊಂಡಿದ್ದಾರೆ.
ನನ್ನ ಪುತ್ರಿ ಅನುಶ್ರೀಗೆ ಪೊಲೀಸ್ ಆಗುವ ಆಸೆ ಇತ್ತು. ಹಾಗಾಗಿ ಆಕೆ ಸ್ಥಳೀಯ ಕುಂಬ್ರ ಶಾಲೆಗೆ ಸೇರ್ಪಡೆಗೊಳ್ಳದೆ ಪುತ್ತೂರು ಕೊಂಬೆಟ್ಟು ಸರಕಾರಿ ಪ್ರೌಢಶಾಲೆಗೆ ದಾಖಲಾಗಿದ್ದಳು. ಯಾಕೆಂದರೆ ಅಲ್ಲಿ ಪೊಲೀಸ್ ಕೆಡೆಟ್ ತರಬೇತಿ ಇದ್ದುದರಿಂದ ಮುಂದೆ ಪೊಲೀಸ್ ಕೆಲಸಕ್ಕೆ ಸೇರಲು ಸುಲಭವಾದೀತು ಎಂಬುದು ಆಕೆಯ ಆಸೆಯಾಗಿತ್ತು. ಆದರೆ ಇದೀಗ ಆಕೆಯ ಕನಸು ಕನಸಾಗಿಯೇ ಉಳಿದಿದೆ ಎಂದು ಆಕೆಯ ತಂದೆ ಧರ್ಮಲಿಂಗಮ್ ಅವರು ದುಖಃದಿಂದ ಹೇಳಿಕೊಂಡಿದ್ದಾರೆ.
ಕೊಂಬೆಟ್ಟು ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಶಾಲೆಯ ಗುರುಗಳು ಮೃತಪಟ್ಟ ಅನುಶ್ರೀಯವರ ಮನೆಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳುವ ಸಂದರ್ಭ ಆಕೆಯ ತಂದೆ ಧರ್ಮಲಿಂಗಮ್ ಅನುಶ್ರೀಯ ಕನಸ್ಸನ್ನು ಹೇಳಿಕೊಂಡಿದ್ದಾರೆ.