ಜೈ ಭೀಮ್ ಟ್ರಸ್ಟ್‌ ವತಿಯಿಂದ ಮುಂಡೂರು, ನಿಡ್ಪಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆಯ ಪ್ರತ್ಯೇಕ ಕಾರ್ಯಕ್ರಮ

0

ಪುತ್ತೂರು: ನಿಡ್ಪಳ್ಳಿಯ ಜೈ ಭೀಮ್ ಟ್ರಸ್ಟ್ ನಿಡ್ಪಳ್ಳಿ ವತಿಯಿಂದ ಮುಂಡೂರು ಮತ್ತು ನಿಡ್ಪಳ್ಳಿ ದ.ಕ.ಜಿ.ಪಂ ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಗುರುತಿನ ಚೀಟಿ ವಿತರಣೆ ಪ್ರತ್ಯೇಕ ಕಾರ್ಯಕ್ರಮ ಡಿ.16ರಂದು ಆಯಾ ಶಾಲೆಯಲ್ಲಿ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಗುರುತಿನ ಚೀಟಿ ವಿತರಣೆ ಮಾಡಿದರು. ಮುಂಡೂರು ಶಾಲೆಯ ಮುಖ್ಯಗುರು ಆಶಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಕರ್ಕೆರ, ಜೈಭೀಮ್ ಟ್ರಸ್ಟ್‌ನ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಶೇಖರ್ ಬಿ, ಕಾರ್ಯದರ್ಶಿ ಗುರುವ ಬಿ, ಸದಸ್ಯ ಗುರುವ ಎನ್, ಟ್ರಸ್ಟಿನ ನಿರ್ದೇಶಕರಾದ ಸುಂದರ್ ನಿಡ್ಪಳ್ಳಿ, ಸದಸ್ಯರಾದ ಮೋನಪ್ಪ ಬಿ, ಬಾಬು ಕೆ, ಸುಂದರ ನುಳಿಯಾಲು, ಹಿಲಾರ ಮೊಂತೇರೊ, ಪೊಡಿಯ ಡಿ, ಶಾಲಾ ಶಿಕ್ಷಕರಾದ ಸೌಮ್ಯ, ಸೌವಿತ್ರಿ, ಅತಿಥಿ ಶಿಕ್ಷಕರಾದ ಚಿತ್ರಲೇಖ, ರಶ್ಮಿತಾ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕರನ್ನು ನೇಮಕಕ್ಕೆ ಮನವಿ:

ಮುಂಡೂರು ಮತ್ತು ನಿಡ್ಪಳ್ಳಿ ಹಾಗು ಚೂರಿಪದವು ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇರುವುದಿಲ್ಲ. ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ತಮ್ಮ ಕ್ರೀಡಾ ಸಾಮಾರ್ಥ್ಯವನ್ನು ಸಾಬಿತು ಪಡಿಸಲು ಅವಕಾಶ ವಂಚಿತರಾಗಿದ್ದಾರೆ. ಆದ್ದರಿಂದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡುವಂತೆ ಸರಕಾರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here