ಫಿಲೋಮಿನಾದಲ್ಲಿ ರೋಟರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಉದ್ಘಾಟನೆ: ಕ್ರೀಡೆಯಿಂದ ಗೆಳೆತನ, ಒಡನಾಟ, ಬಾಂಧವ್ಯ ವೃದ್ಧಿಸುತ್ತದೆ-ಪ್ರಕಾಶ್ ಕಾರಂತ್

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಸಮಾಜಸೇವೆಯ ಮೂಲಕ ವಿಶ್ವದಲ್ಲಿಯೇ ಗುರುತಿಸಬಹುದಾದ ಸಂಸ್ಥೆಯಾಗಿ ಹೆಗ್ಗಳಿಕೆ ಪಡೆದಿದೆ. ಪ್ರಸ್ತುತ ಫಿಲೋಮಿನಾ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಈ ಕ್ರಿಕೆಟ್ ಕೂಟದಿಂದ ನಮ್ಮಲ್ಲಿ ಗೆಳೆತನ, ಒಡನಾಟ, ಬಾಂಧವ್ಯ, ಪರಿಚಯ, ಪ್ರೀತಿ, ಸಮಾನತೆ, ಒಗ್ಗಟ್ಟು ವೃದ್ಧಿಸುತ್ತದೆ ಎಂದು ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ಆಗಿರುವ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.


ದ.೧೭ ಹಾಗೂ ೧೮ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಕಾಲೇಜು ಕ್ರೀಡಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವುಗಳ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಕಾಲ ನಡೆಯುವ ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ ೩೧೮೧ ಇದರ ಎರಡನೇ ವರ್ಷದ ರೋಟರಿ ಪ್ರೀಮಿಯರ್ ಲೀಗ್(ಆರ್.ಪಿ.ಎಲ್)-೨೦೨೨ ಓವರ್‌ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಬಳಿಕ ಪ್ರಶಸ್ತಿ ಫಲಕಗಳ ಅನಾವರಣಗೊಳಿಸಿ ಅವರು ಮಾತನಾಡಿದರು. ಯಾವುದೇ ವ್ಯಕ್ತಿಯಲ್ಲಿ ಕ್ರೀಡಾ ಮನೋಭಾವನೆಯಿದ್ದಾಗ ಅಲ್ಲಿ ಯಾವುದೇ ಮನಸ್ತಾಪಕ್ಕೆ ಎಡೆ ಮಾಡಿಕೊಡುವುದಿಲ್ಲ. ರೋಟರಿಯ ಆಸ್ಕರ್ ಆನಂದ್ ಹಾಗೂ ಸಂತೋಷ್ ಶೆಟ್ಟಿಯವರು ಈ ಕೂಟವನ್ನು ಏರ್ಪಡಿಸುವಲ್ಲಿ ಸಫಲತೆಯನ್ನು ಕಂಡುಕೊಂಡಿದ್ದಾರೆ. ಸೋಲು ಎನ್ನುವುದು ಗೆಲ್ಲುವುದಕ್ಕೆ ಮೆಟ್ಟಿಲು ಆಗಬೇಕೇ ಹೊರತು ಬೇಸರ ಪಡಲು ಅಲ್ಲ ಎಂದರು.


ರೋಟರಿ ಜಿಲ್ಲೆ ೩೧೮೧ ಇದರ ಮಾಜಿ ಜಿಲ್ಲಾ ಗವರ್ನರ್ ಎಂ.ರಂಗನಾಥ್ ಭಟ್‌ರವರು ಮಾತನಾಡಿ, ಕ್ರಿಕೆಟ್ ಕೂಟ ಏರ್ಪಡಿಸುವುದರಿಂದ ರೊಟೇರಿಯನ್ಸ್‌ಗಳಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ಬಾಂಧವ್ಯ ವೃದ್ಧಿಸಿದಾಗ ಅಲ್ಲಿ ಸೇವಾ ಕಾರ್ಯವೂ ದ್ವಿಗುಣಗೊಳ್ಳುತ್ತದೆ ಎಂದರು.

ರೋಟರಿ ಜಿಲ್ಲೆ ೩೧೮೧ ಇದರ ನಿಯೋಜಿತ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ಮಾತನಾಡಿ, ರೋಟರಿ ವಲಯದಲ್ಲಿ ಇಂತಹ ಕ್ರಿಕೆಟ್ ಕೂಟವನ್ನು ಹಮ್ಮಿಕೊಳ್ಳಬೇಕು ಎಂದು ರೋಟರಿ ಮಾಜಿ ಗವರ್ನರ್ ರಂಗನಾಥ್ ಭಟ್‌ರವರು ಭಿತ್ತಿದ ಭೀಜ ಇಂದು ನನಸಾಗಿದೆ. ಈ ಕೂಟ ಏರ್ಪಡಿಸಿರುವುದರಿಂದ ರೊಟೇರಿಯನ್ಸ್‌ಗಳ ಮಧ್ಯೆ ಏಕತೆ, ವೈವಿಧ್ಯತೆ ಮೇಳೈಸಿದೆ ಎಂದರು.

ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಇವೆಂಟ್ಸ್ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ ಮಾತನಾಡಿ, ರೊಟೇರಿಯನ್ಸ್‌ಗಳ ನಡುವೆ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲು ನಾಂದಿ ಹಾಡಿದವರು ಮಾಜಿ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು. ಅದನ್ನ ಸಾಕಾರಗೊಳಿಸಿದವರು ಆಸ್ಕರ ಆನಂದ್ ಹಾಗೂ ಸಂತೋಷ್ ಶೆಟ್ಟಿಯವರು ಎಂದರು.

ತಂಡದ ಮಾಲಕರಿಗೆ ಗೌರವ:
೧೦ ತಂಡಗಳಾದ ಮಂಗಳೂರು ಸೂಪರ್ ಕಿಂಗ್ಸ್ ಮಾಲಕ ಆನಂದ ಶೆಟ್ಟಿ, ರೋಟರಿ ರಾಯಲ್ಸ್ ಮಾಲಕ ಎಲ್ಯಾಸ್ ಸಾಂತೀಸ್, ಭದ್ರ ಚಾಲೆಂಜರ್‍ಸ್ ಮಾಲಕ ಮಂಜುನಾಥ್ ಆಚಾರ್ಯ, ಮುಳಿಯ ಟೈಗರ್‍ಸ್ ಮಾಲಕ ಕೃಷ್ಣನಾರಾಯಣ ಮುಳಿಯ, ಯುವರತ್ನ ರೈಡರ್‍ಸ್ ಮಾಲಕ ಡಾ|ಹರ್ಷ ಕುಮಾರ್ ರೈ ಮಾಡಾವು, ರೆಡ್ ಮಾನ್‌ಸ್ಟರ್‍ಸ್ ಮಾಲಕ ಮನ್ಸೂರ್, ಕೂರ್ಗ್ ಬ್ಲಾಸ್ಟರ್‍ಸ್ ಮಾಲಕ ರವಿ ಬಿ.ಕೆ, ರೋಯಲ್ ಚಾಲೆಂಜರ್‍ಸ್ ಮೈಸೂರು ಮಾಲಕ ಜಗದೀಶ್, ಸೆವೆನ್ ಬ್ಲಾಸ್ಟರ್‍ಸ್ ಮಾಲಕ ಎಸ್.ಬಾಲಚಂದರ್, ಮೆಟ್ರೋ ರಾಯಲ್ಸ್ ಮಾಲಕ ಚಂದ್ರಶೇಖರ್ ಭಟ್‌ರವರುಗಳಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಸ್ಮರಣಿಕೆ ನೀಡಿ ಗೌರವಿಸಿದರು.

ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಆಡಳಿತ ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್‌ದಾಸ್ ರೈಯವರು ಸಂದರ್ಭೋಚಿತವಾಗಿ ಮಾತನಾಡಿದರು. ರೋಟರಿ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ರೈ, ರೋಟರಿ ವಲಯ ಐದರ ವಲಯ ಸೇನಾನಿ ಪುರಂದರ ರೈ, ಡಾ|ಹರ್ಷ ಕುಮಾರ್ ರೈ, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯ, ಎಲ್ಯಾಸ್ ಸಾಂತಿಸ್, ಇವೆಂಟ್ ಚೇರ್‌ಮ್ಯಾನ್ ಎಸ್.ಸಂತೋಷ್ ಶೆಟ್ಟಿ, ಆರ್‌ಪಿಎಲ್ ಲೀಗ್ ಸಲಹೆಗಾರ ಮನೋಹರ್ ಅಮೀನ್ ಹಾಗೂ ಎಸ್.ಬಾಲಚಂದರ್, ಇವೆಂಟ್ ಕಾರ್ಯದರ್ಶಿ ಎಲ್ಯಾಸ್ ಪಿಂಟೋ, ಆರ್‌ಪಿಎಲ್ ವೈಸ್ ಚೇರ್‌ಮ್ಯಾನ್ ಸಂತೋಷ್ ಶೆಟ್ಟಿ, ಇವೆಂಟ್ ಕೋಶಾಧಿಕಾರಿ ನರಸಿಂಹ ಪೈ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ, ರೋಟರಿ ಪುತ್ತೂರು ಸ್ವರ್ಣ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ಸಹಿತ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್‌ಪಿಎಲ್ ಚೇರ್‌ಮ್ಯಾನ್ ಆಸ್ಕರ್ ಆನಂದ್ ಸ್ವಾಗತಿಸಿ, ಕಾರ್ಯದರ್ಶಿ ನಾಗಾರಾಜ್ ಬಿ ವಂದಿಸಿದರು. ರೋಟರಿ ಸೆಂಟ್ರಲ್ ಕಾರ್ಯದರ್ಶಿ ಚಂದ್ರಹಾಸ ರೈ ಕಾರ್ಯಕ್ರಮ ನಿರೂಪಿಸಿದರು.

೧೦ ತಂಡಗಳು..
*ಮಂಗಳೂರು ಸೂಪರ್ ಕಿಂಗ್ಸ್
*ರೋಟರಿ ರಾಯಲ್ಸ್ *ಭದ್ರ ಚಾಲೆಂಜರ್‍ಸ್
*ಮುಳಿಯ ಟೈಗರ್‍ಸ್ *ಯುವರತ್ನ ರೈಡರ್‍ಸ್
*ರೆಡ್ ಮಾನ್‌ಸ್ಟರ್‍ಸ್ *ಕೂರ್ಗ್ ಬ್ಲಾಸ್ಟರ್‍ಸ್
*ರೋಯಲ್ ಚಾಲೆಂಜರ್‍ಸ್ ಮೈಸೂರು
*ಸೆವೆನ್ ಬ್ಲಾಸ್ಟರ್‍ಸ್ *ಮೆಟ್ರೋ ರಾಯಲ್ಸ್

ಬ್ರೋಶರ್ ಬಿಡುಗಡೆ..
೨೦೨೩ರ ಮೇ ತಿಂಗಳಿನಲ್ಲಿ ಆಷ್ಟ್ರೇಲಿಯದ ಮೆಲ್ಬರ್ನ್‌ನಲ್ಲಿ ಅಂತರ್ರಾಷ್ಟ್ರೀಯ ರೋಟರಿ ಅಧ್ಯಕ್ಷೆ ಜೆನಿಫರ್ ಜೋನ್ಸ್‌ರವರ ನೇತೃತ್ವದಲ್ಲಿ ಎಂಟು ದಿನಗಳ ರೋಟರಿ ಇಂಟರ್‌ನ್ಯಾಷನಲ್ ಕನ್ವೆನ್ಷನ್ `ಡಿಸ್ಕವರ್ ಆಷ್ಟ್ರೇಲಿಯಾ’ ಜರಗಲಿದ್ದು, ಇದರ ಆಹ್ವಾನ ಪತ್ರಿಕೆಯ ಬ್ರೋಶರ್ ಅನ್ನು ಡಿಸ್ಕವರ್ ಆಷ್ಟ್ರೇಲಿಯಾ ಇದರ ಕನ್ವೆನ್ಷನ್ ಕನ್ವೀನರ್ ಆಗಿರುವ ಡಾ|ಹರ್ಷ ಕುಮಾರ್ ರೈಯವರು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರಲ್ಲಿ ಹಸ್ತಾಂತರಿಸಿ ಬಳಿಕ ಡಿಜಿಪ್ರಕಾಶ್ ಕಾರಂತ್‌ರವರು ಅನಾವರಣಗೊಳಿಸಿದರು.

LEAVE A REPLY

Please enter your comment!
Please enter your name here