ಪುತ್ತೂರು: ಯಾವುದೇ ಹಬ್ಬ ಆಚರಣೆಗಳಿರಲಿ ಪೊಲೀಸ್ ಇಲಾಖೆ ಇಲ್ಲಸಲ್ಲದ ಕಟ್ಲೆ ಹಾಕಿ ಅಡೆತಡೆ ಮಾಡುತ್ತಿದ್ದಾರೆ ಎಂಬ ಅಪವಾದ ಬೇಡ. ಪಾರಂಪರಿಕೆ ಆಚರಣೆಗೆ ಯಾವುದೆ ಅಡ್ಡಿ ಪಡಿಸುವುದಿಲ್ಲ. ಕೆಲವೊಂದು ನಿಬಂಧನೆ ಪಾಲಿಸುವುದು ಅಗತ್ಯ ಎಂದು ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಬೂಮಾರೆಡ್ಡಿ ಅವರು ಹೇಳಿದರು.

ಮುಂದಿನ ದಿನ ಬರುವ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಸಲುವಾಗಿ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಪುತ್ತೂರು ಪೊಲೀಸ್ ಉಪ ವಿಭಾಗ ಮಟ್ಟದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಗಣೆಶ ಹಬ್ಬ, ಈದ್ ಮಿಲಾದ್ ಹಬ್ಬ ಜೊತೆಜೊತಗೆ ಬರುತ್ತಿದೆ. ಎಲ್ಲರು ಬಾತೃತ್ವದಿಂದ ಬಾಳಿ ನಮ್ಮ ಊರಿಗೆ ಒಳ್ಳೆಯ ಸಂದೇಶ ತರಬೇಕು. ನಿಮ್ಮ ಪಾರಂಪರಿಕ ಆಚರಣೆಗಳಿಗೆ ಯಾವುದೇ ರೀತಿ ಅಡ್ಡಿ ಪಡಿಸುವುದಿಲ್ಲ ಕೆಲವೊಂದು ನಿಬಂಧನೆ ಯಾಕೆ ಹಾಕುತ್ತೇವೆ ಎಂದರೆ ಸಮಾಜದಲ್ಲಿರುವ ಎಲ್ಲರು ಒಂದೇ ರೀತಿ ಇರುವುದಿಲ್ಲ. ಕೆಲವೊಂದು ಕಿಡಿಗೇಡಿಗಳಿಂದ ಎನಾದರೂ ಆದರೆ ಎಂಬ ಭಯ ಇರುತ್ತದೆ. ಹಾಗಾಗಿ ಹಬ್ಬಗಳು ಯತೇಚವಾಗಿ ನಡೆಯಬೇಕಾದರೆ ಕೆಲವೊಂದು ನಿಯಮ ಹಾಕಲೇ ಬೇಕು. ನನಗೆ ನಿಮ್ಮ ಮನಸ್ಥಿತಿ ಗೊತ್ತಿದೆ. ನಾವು ಸಂವಿದಾನ ಹುದ್ದೆಯಲ್ಲಿ ಕಾನೂನು ಪಾಲನೆ ಮಾಡಬೇಕು. ಈ ಸಭೆಯಲ್ಲಿ ನಾನು ಎರ್ಗಿಮೆಂಟ ಮಾಡಲು ಸಾಧ್ಯವಿಲ್ಲ. ಲೋಕಲ್ ಆಪಿಸರ್ ನಲ್ಲಿ ಚರ್ಚೆ ಮಾಡಿ ತಿಳಿಸುವ ಕಾರ್ಯ ಮಾಡುತ್ತೇವೆ. ಕಾನೂನು ಪ್ರಕಾರ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೦ ಗಂಟೆಯ ತನಕ ಮಾತ್ರ ಮೈಕ್ ಹಾಕಬಹುದು. ಇದು ನಾವು ಮಾಡಿದ ಕಾನೂನು ಅಲ್ಲ ೨೦೦೦ ದ ಇಸವಿಯಲ್ಲಿ ನೋಯ್ಸ್ ಫೊಲಿಷನ್ ಕಂಟ್ರೋಲ್ ಆರ್ಡರ್ ಇದೆ. ನಿಮ್ಮ ಮೆಲೆ ವಿಶ್ವಾಸವಿಲ್ಲ ಅಪನಂಬಿಕೆಯಿಂದ ಹೇಳುತ್ತಿಲ್ಲ. ನೀವೆಲ್ಲ ಶಾಂತಿ ಸೌಹಾರ್ದತೆಯಿಂದಲೇ ಕಾರ್ಯಕ್ರಮ ಮಾಡುತ್ತೀರಿ. ಇಲ್ಲಿ ನಾವು ಸಮವಸ್ತ್ರ ಧರಿಸಿ ನಿಮ್ಮಕಾರ್ಯಕ್ರಮದಲ್ಲಿ ಪಾಲು ಪಡೆಯುತ್ತೇವೆ. ಕಾರ್ಯಕ್ರಮಕ್ಕೆ ಸಂಬಂಧಿಸಿ ಸಿ ಸಿ ಕ್ಯಾಮರ, ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಗೆ ತೆಗೆದುಕೊಳ್ಳಿ ಮತ್ತು ವಿವಿಧ ಇಲಾಖೆಯಿಂದ ಎನ್.ಒ.ಸಿ ಪಡೆದುಕೊಳ್ಳಿ. ಸಂಶಯಾಸ್ಪದ ಮತ್ತು ಕಿರಿಕ್ ಮಾಡುವವರಿದ್ದರೆ ಮೊದಲೇ ಮಾಹಿತಿ ನೀಡಿ ಎಂದು ಹೇಳಿದರು.
ಡಿವೈಎಸ್ಪಿ ಅರುಣ್ ನಾಗೇ ಗೌಡ, ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಜಾನ್ಸನ್ ಡಿ ಸೋಜ, ಮಹಿಳಾ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನಿಲ್ ಕುಮಾರ್, ಸುಳ್ಯ ಠಾಣೆ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತೆ ವಿದ್ಯಾ ಎಮ್ ಕಾಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಪ್ ಕಲ್ಲೇಗ, ಎಸ್ ಡಿ ಪಿ ಐ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಅಬೂಬಕರ್ ಸಿದ್ದಿಕ್, ಲೊಕೇಶ್ ಹೆಗ್ಡೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಸಹಿತ ಹಲವಾರು ಮಂದಿ ಮಾತನಾಡಿದರು.