ಸೇಡಿಯಾಪು ಕೋಸ್ಟಲ್ ಕೋಕೊನಟ್ ಇಂಡಸ್ಟ್ರೀಯಲ್ಲಿ ಕಜೆ ಬೇರಿಕೆ ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆ

0
  • ಸಮಾಜಕ್ಕೆ ಉತ್ತಮ ಸಂದೇಶ – ವಿಶ್ವಪ್ರಕಾಶ್ ಸೇಡಿಯಾಪು
  • ಬದಲಾವಣೆಯ ಮನೋಭಾವ ಜನರಲ್ಲಿ ಬರಬೇಕು – ಜಲಜಾಕ್ಷಿ

ಪುತ್ತೂರು: ಬನ್ನೂರು ಪಂಚಾಯತ್ ವ್ಯಾಪ್ತಿಯ ಕಜೆ ಬೇರಿಕೆ ಅಂಗನವಾಡಿಯ ಮಕ್ಕಳ ಮತ್ತು ಪೋಷಕರ ಸಮ್ಮಿಲನ ಹಾಗು ಮಕ್ಕಳ ಕಲಿಕಾ ಸಾಮಾಗ್ರಿಗಳ ವಿತರಣೆಯು ಡಿ.17ರಂದು ಸೇಡಿಯಾಪು ಕೋಸ್ಟಲ್ ಕೋಕೊನಟ್ ಇಂಡಸ್ಟ್ರಿಯಲ್ಲಿ ನಡೆಯಿತು. ಅಂಗನವಾಡಿ ಬಾಲವಿಕಾ ಸಮಿತಿ, ಅಂಗನವಾಡಿ ಅಭಿವೃದ್ಧಿ ಸಮಿತಿ ಮತ್ತು ಮಕ್ಕಳ ಪೋಷಕರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಕೋಸ್ಟಲ್ ಕೋಕೊನಟ್ ಇಂಡಸ್ಟ್ರೀಯ ಮಾಲಕರ ತಾಯಿ ವೆನ್ನಿಸ್ ಮಸ್ಕರೇನಸ್ ಮತ್ತು ಅಂಗನವಾಡಿ ಪುಟಾಣಿಗಳು ಉದ್ಘಾಟಿಸಿದರು.
ಸಮಾಜಕ್ಕೆ ಉತ್ತಮ ಸಂದೇಶ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕರು ಮತ್ತು ಉದ್ಯಮಿಯಾಗಿರುವ ವಿಶ್ವಪ್ರಕಾಶ್ ಸೇಡಿಯಾಪು ಅವರು ಮಾತನಾಡಿ ಪೇಟೆಯ ಶಾಲೆಯಲ್ಲಿ ಸಿಗುವ ಸೌಲಭ್ಯ ಹಳ್ಳಿಯ ಶಾಲೆಯಲ್ಲಿ ಸಿಕ್ಕಾಗ ಮಕ್ಕಳನ್ನು ಪೇಟೆಯ ಶಾಲೆಗೆ ಅವಶ್ಯಕತೆ ಇಲ್ಲ. ಈ ವಿಚಾರವನ್ನು ಮನಗಂಡ ಡೆನ್ನಿಸ್ ಅವರು ಹಳ್ಳಿಯ ಶಾಲೆ, ಅಂಗನವಾಡಿ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ಕಾರ್ಯಗಳು ಊರಿನ ದಾನಿಗಳಿಗೆ ಪ್ರೇರಣೆ ಮತ್ತು ಊರಿನಲ್ಲಿ ಒಗ್ಗಟ್ಟು ಬರುತ್ತದೆ ಎಂದರು.
ಬದಲಾವಣೆಯ ಮನೋಭಾವ ಜನರಲ್ಲಿ ಬರಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೇಲ್ಚಿಚಾರಕಿ ಜಲಜಾಕ್ಷಿ ಅವರು ಮಾತನಾಡಿ ಹಿಂದಿನ ದಿನಗಳಲ್ಲಿ ನಾವೆಲ್ಲ ಶಾಲೆಗೆ ಹೋಗುವಾಗ ಶೌಚಾಲಯವೇ ಇರಲಿಲ್ಲ. ಇವತ್ತು ಮೂಲಭೂತ ಸೌಕರ್ಯ ಇದ್ದರೂ ಜನರಲ್ಲಿ ವಿದ್ಯಾಭ್ಯಾಸದ ಮಟ್ಟ ಜಾಸ್ತಿಯಾಗಿ ಯಾರಿಗೂ ಸರಕಾರಿ ಶಾಲೆ ಕಾಣಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರಲ್ಲಿ ಸರಕಾರಿ ಶಾಲೆಯ ಬಗ್ಗೆ ಪ್ರೀತಿಯನ್ನು ತೋರಿಸುವ ಬದಲಾವಣೆಯ ಮನೋಭಾವವನ್ನು ಡೆನ್ನಿಸ್ ಅವರ ಸಮಾಜದ ಮುಂದಿಟ್ಟಿದ್ದಾರೆ. ಮಂದಿನ ದಿನ ರಾಷ್ಟ್ರೀಯ ಶಿಕ್ಷಣ ಪದ್ಧತಿ ಬರುವಾಗ ಇನ್ನಷ್ಟು ಜನರ ಸಹಕಾರ ಬೇಕು ಎಂದರು. ಬನ್ನೂರು ಪಂಚಾಯತ್ ಸಮುದಾಯ ಆರೋಗ್ಯಾಧಿಕಾರಿ ನಾಗೇಶ್ ಅವರು ಮಾತನಾಡಿ ಮಕ್ಕಳಿಗೆ ಇಂತಹ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದಾಗ ಅವರ ಬೆಳವಣಿಗೆ ಅರಿವಿನ ಜ್ಞಾನ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಊರಿನ ಜನರ ಸಹಕಾರ ಇರಬೇಕೆಂದರು. ಕಜೆ ಬೇರಿಕೆ ಅಂಗನವಾಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಮತ್ತು ಕೋಸ್ಟಲ್ ಕೋಕೊನಟ್ ಇಂಡಸ್ಟ್ರೀ ಮಾಲಕ ಡೆನ್ನಿಸ್ ಮಸ್ಕರೇನಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಕಾರ್ಯಕರ್ತೆ ಜಯಂತಿ, ಅಂಗನವಾಡಿ ಮೇಲ್ವಿಚಾರಕರಾದ ಉಮಾವತಿ, ನಾಗರತ್ನ, ಕಜೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅಂಗನಾಡಿ ಮಕ್ಕಳು ಪ್ರಾರ್ಥಿಸಿದರು. ಪಿಲೋಮಿನಾ ಮಸ್ಕರೇನಸ್ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ರೇಖಾ ವಂದಿಸಿದರು. ಕೋಸ್ಟಲ್ ಕೋಕೊನಟ್ ಇಂಡಸ್ಟ್ರೀಯ ಸಿಬ್ಬಂದಿ ಜಯಮಾಲ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಮಾಲತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಪಂಚಾಯತ್ ಸಿಬಂದಿ ನಾರಾಯಣ ಸಹಿತ ಅಂಗನವಾಡಿ ಪುಟಾಣಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಮಕ್ಕಳಿಗೆ ಕಲಿಕಾ ಸೌಲಭ್ಯ ಬೆಳವಣಿಗೆಗೆ ಪೂರಕ
ಕೆಜೆ ಬೇರಿಕೆಯಲ್ಲಿ ಹೊಸ ಅಂಗನವಾಡಿ ಒದಗಿ ಬಂದಿದೆ. ಇಂತಹ ಸಂದರ್ಭದಲ್ಲಿ ಒಳ್ಳೆಯ ಕಲಿಕೆ, ಸಂಸ್ಕಾರ ಸಿಗುವಾಗ ಅದಕ್ಕೆ ಪೂರಕವಾಗಿ ಮಕ್ಕಳ ಕಲಿಕೆ ಸೌಲಭ್ಯ ಸಿಗಬೇಕು. ಆ ಸೌಲಭ್ಯವನ್ನು ಒದಗಿಸುವಲ್ಲಿ ಸಣ್ಣ ಪ್ರಯತ್ನ ಮಾಡಿದ್ದೇವೆ. ಅಂಗನವಾಡಿ ಉತ್ತಮವಾದಾಗ ಇಲ್ಲಿನ ಮಕ್ಕಳು ಪೇಟೆಗೆ ಹೋಗುವುದನ್ನು ಬಿಟ್ಟು ಇಲ್ಲಿನ ಅಂಗನವಾಡಿಗೆ ಹೋಗುತ್ತಾರೆ. ಇದರ ಜೊತೆಗೆ ಅಂಗನವಾಡಿಗೆ ಅಗತ್ಯ ಸೌಲಭ್ಯ ಒದಗಿಸುವ ಉತ್ಸಾಹ ಇತರರ ಮನದಲ್ಲೂ ಮೂಡಿ ಬರುತ್ತದೆ.
– ಡೆನ್ನಿಸ್ ಮಸ್ಕರೇನಸ್, ಮಾಲಕರು ಕೋಸ್ಟಲ್ ಕೋಕೊನಟ್ ಇಂಡಸ್ಟ್ರಿ ಸೇಡಿಯಾಪು

LEAVE A REPLY

Please enter your comment!
Please enter your name here