ರೋಟರಿ ಯುವಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ರೋಟೆರಿಯನ್ಸ್‌ಗಳ ಸೇವಾಗುಣ, ಜೀವನ ಮೌಲ್ಯದಿಂದ ರೋಟರಿ ಉತ್ತುಂಗಕ್ಕೆ-ಪ್ರಕಾಶ್ ಕಾರಂತ್

ಪುತ್ತೂರು: ರೋಟರಿ ಧತ್ತಿನಿಧಿಗೆ ರೊಟೇರಿಯನ್ಸ್‌ಗಳು ನೀಡುವ ದೇಣಿಗೆಯು ಸಮಾಜದ ಏಳಿಗೆಗೆ ಅದು ತಲುಪುವಂತೆ ಮಾಡುತ್ತದೆ. ಆದ್ದರಿಂದ ರೊಟೇರಿಯನ್ಸ್‌ಗಳ ಸೇವಾ ಗುಣ, ಜೀವನ ಮೌಲ್ಯಗಳು, ಜಾಗತಿಕವಾದ ಮನೋಸ್ಥಿತಿ, ಧನಾತ್ಮಕತೆಯ ಸ್ವೀಕರಿಸುವ ಗುಣದಿಂದಾಗಿ ರೋಟರಿ ಎಂಬ ಸೇವಾ ಸಂಸ್ಥೆಯು ಉತ್ತುಂಗಕ್ಕೆ ತಲುಪಿದೆ ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.


ಪುತ್ತೂರು ಹೊರ ವಲಯದಲ್ಲಿರುವ ದ ಪುತ್ತೂರು ಕ್ಲಬ್‌ನಲ್ಲಿ ದ.21 ರಂದು ಸಂಜೆ ನಡೆದ ರೋಟರಿ ಕ್ಲಬ್ ಪುತ್ತೂರು ಯುವಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಕ್ಲಬ್‌ನ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ರೋಟರಿಯಲ್ಲಿ ವಿವಿಧತೆಯಲ್ಲಿ ಏಕತೆ, ವೈವಿಧ್ಯತೆ ಇದೆ.  ಪುರುಷ, ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಹೇಗೆ ನದಿಯು ಹರಿದು ಅದು ಪ್ರಕೃತಿಗೆ ನೆರವಾಗುತ್ತದೆಯೋ, ಮರದಲ್ಲಿನ ಹಣ್ಣುಗಳು ಹೇಗೆ ಮಾನವನಿಗೆ ಸಿಹಿಯನ್ನು ತಂದುಕೊಡುತ್ತದೆಯೋ ಹಾಗೆಯೇ ನಾವು ರೋಟರಿ ಧತ್ತಿನಿಧಿಗೆ ನೀಡುವ ದೇಣಿಗೆಯು ಪೋಲಿಯೋ ಉಳ್ಳವರಿಗೆ, ಡಯಾಲಿಸಿಸ್ ರೋಗಿಗಳಿಗೆ, ಸ್ತನದ ಹಾಲಿನ ಬ್ಯಾಂಕ್‌ಗೆ ಅಥವಾ ಇತರ ಅಗತ್ಯತೆಗಳಿಗೆ ನೆರವು ಸಿಗುವ ಮೂಲಕ ನಮಗೆ ಧನ್ಯತಾ ಭಾವನೆ ಉಂಟು ಮಾಡಬಲ್ಲುದು ಎಂದರು.


ರೋಟರಿ ಅಸಿಸ್ಟಂಟ್ ಗವರ್ನರ್ ಎ. ಜಗಜ್ಜೀವನ್‌ದಾಸ್ ರೈಯವರು ಸದಸ್ಯ ದೇವಿಚರಣ್ ರೈ ಸಂಪಾದಕತ್ವದ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪ್ರಪಂಚವು ಯಾವ ರೀತಿ ಬೆಳವಣಿಗೆಗೆ ಹೊಂದುತ್ತದೆ, ರೋಗ-ರುಜಿನಗಳಿಂದ ಯಾರು ದೂರವಿರುತ್ತಾರೋ ಅದುವೇ ಪ್ರಸ್ತುತ ವರ್ಷದ ಇಮ್ಯಾಜಿನ್ ರೋಟರಿ ಎಂಬ ಧ್ಯೇಯವಾಕ್ಯವಾಗಿದೆ. ಜಿಲ್ಲಾ ಪ್ರಾಜೆಕ್ಟ್‌ಗಳೆನಿಸಿದ ಆರೋಗ್ಯ ಸಿರಿ, ವಿದ್ಯಾ ಸಿರಿ, ಜಲ ಸಿರಿ, ವನ ಸಿರಿ ಇವುಗಳನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಯುವಶಕ್ತಿ ಎಂಬ ಸ್ಫೂರ್ತಿಯನ್ನು ಪಡೆದಿರುವ ಈ ಯುವ ಬಳಗ ಈಗಾಗಲೇ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ ಕ್ಲಬ್‌ನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಮುಂದೆಯೂ ಮುಂದುವರೆಯಲಿ ಎಂದರು.


ರೋಟರಿ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ ಮಾಡಾವು ಮಾತನಾಡಿ, ಯುವ ಅಂದರೆ ಅದು ಪ್ರತಿಭೆ. ಪ್ರತಿಭೆಗಳ ಗೂಡೆ  ಯುವ ಆಗಿದೆ. ಉದ್ಯಮದ ನಡುವೆ ರೋಟರಿಯ ಏಳಿಗೆಗಾಗಿ ಶ್ರಮವಹಿಸಿ ದುಡಿದಿದ್ದಾರೆ ಕ್ಲಬ್‌ನ ಪೂರ್ವಾಧ್ಯಕ್ಷರುಗಳು. ಪ್ರಸ್ತುತ ವರ್ಷ ಈರ್ವರು ಮಹಿಳಾಮಣಿಗಳು ಈ ಯುವ ಕ್ಲಬ್‌ನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ ಎಂಬುದು ನಿಜ. ರೋಟರಿಯಲ್ಲಿ ಅವಕಾಶಗಳು ಬಹಳಷ್ಟಿದೆ, ಎಲ್ಲರೂ ಪ್ರೋತ್ಸಾಹ ನೀಡಿದರೆ ಅದು ಖಂಡಿತಾ ಬೆಳೆಯುತ್ತದೆ. ಮುತ್ತಿನನಗರಿ ಪುತ್ತೂರಿನ ಈ ಯುವ ಕ್ಲಬ್‌ನಲ್ಲಿ 40 ಮಂದಿ ರತ್ನಗಳು ಇದ್ದು ಕ್ಲಬ್‌ನ ಬೆಳವಣಿಗೆಯಲ್ಲಿ ಸದಾ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.


ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ಎಪಿಎಂಸಿ ರಸ್ತೆಯ ಮಾನಾಯಿ ಆರ್ಕೇಡ್‌ನ ಐಸಿಐಸಿಐ ಬ್ಯಾಂಕ್ ಕಟ್ಟಡದಲ್ಲಿ ಚಾರ್ಟರ್ಡ್ ಎಕೌಂಟೆಂಟ್ ಆಗಿರುವ ಅನೀಶ್ ಪಿ.ಎಸ್‌ರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ಹಾಗೂ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮರವರು ನೂತನ ಸದಸ್ಯರ ಪರಿಚಯ ಮಾಡಿದರು.

ಸನ್ಮಾನ:
ಹಲವಾರು ವರ್ಷಗಳಿಂದ ಗಿರಿಜಾ ಕ್ಲಿನಿಕ್‌ನಲ್ಲಿ, ಪ್ರಸ್ತುತ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆಯಾಗಿದ್ದು ಕಳೆದ 36 ವರ್ಷಗಳ ಸೇವೆಯಲ್ಲಿ ಸಾವಿರಾರು ಯಶಸ್ವಿ ಹೆರಿಗೆಯನ್ನು ಮಾಡಿಸಿರುವ ಡಾ.ಪ್ರತಿಭಾರವರನ್ನು ವೊಕೇಶನಲ್ ಸರ್ವಿಸ್ ವತಿಯಿಂದ ಸನ್ಮಾನಿಸಲಾಯಿತು.

ವೊಕೇಶನಲ್ ಸರ್ವಿಸ್ ನಿರ್ದೇಶಕ ಭರತ್ ಪೈಯವರು ಸನ್ಮಾನಿತರ ಪರಿಚಯ ಮಾಡಿದರು. ಸಾಹಿತ್ಯ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪಾಂಗ್ಲಾಯಿ ನಿವಾಸಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಪ್ರಕೃತಿ ಎಂಬ ಬಾಲಕಿಯನ್ನು ಯೂತ್ ಸರ್ವಿಸ್ ವತಿಯಿಂದ ಸನ್ಮಾನಿಸಲಾಯಿತು.

ಯೂತ್ ಸರ್ವಿಸ್ ನಿರ್ದೇಶಕ ಸುದರ್ಶನ್ ರೈ ನೀರ್ಪಾಡಿರವರು ಸನ್ಮಾನಿತರ ಪರಿಚಯ ಮಾಡಿದರು. ಆರೋಗ್ಯ ಸಿರಿಯಡಿಯಲ್ಲಿ ಎರಡು ತಿಂಗಳು ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡ ಉಷಾ ಮೆಡಿಕಲ್ ಮತ್ತು ಪಾಲಿಕ್ಲಿನಿಕ್‌ನ ಗಣೇಶ್ ಭಟ್ ದಂಪತಿರವರಿಗೆ ಸನ್ಮಾನ ಹಾಗೂ ಹಾಗೂ ಶ್ರೀರಾಮ ಸೌಧದ ಉಮೇಶ್ ನಾಯಕ್‌ರವರಿಗೆ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರನ್ನು ಸನ್ಮಾನಿಸಲಾಯಿತು.

ಟಿಆರ್‌ಎಫ್ ದೇಣಿಗೆ:
ಇಂಟರ್‌ನ್ಯಾಷನಲ್ ಸರ್ವಿಸ್ ವತಿಯಿಂದ ಟಿಆರ್‌ಎಫ್ ಧತ್ತಿನಿಧಿಗೆ ದೇಣಿಗೆ ನೀಡಿದ ರತ್ನಾಕರ್ ರೈ, ನರಸಿಂಹ ಪೈ, ಭರತ್ ಪೈ, ಚೇತನ್ ಪ್ರಕಾಶ್, ರಾಜೇಶ್ವರಿ ಆಚಾರ್‌ರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಗೌರವಿಸಿದರು.

ಇತ್ತೀಚೆಗೆ ಆಷ್ಟ್ರೇಲಿಯಾದ ಮೆಲ್ಬರ್ನ್‌ಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ರೋಟರಿ ಯುವದ ಸ್ಥಾಪಕಾಧ್ಯಕ್ಷ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರತ್ನಾಕರ್ ರೈಯವರು ಮೆಲ್ಬರ್ನ್ ರೋಟರಿ ಕ್ಲಬ್‌ನ ಫ್ಲ್ಯಾಗ್‌ನ್ನು ರೋಟರಿ ಯುವ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಸದಸ್ಯರನ್ನು ಗುರುತಿಸಲಾಯಿತು. ಚೈತ್ರಿಕಾ ಅಭಿರಾಂ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಸ್ವಾಗತಿಸಿ, ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ ವಂದಿಸಿದರು. ಕಾರ್ಯದರ್ಶಿ ಅಶ್ವಿನಿ ಮುಳಿಯ ವರದಿ ವಾಚಿಸಿದರು. ಜಿಲ್ಲಾ ಗವರ್ನರ್‌ರವರ ಪರಿಚಯವನ್ನು ಸದಸ್ಯ ಶರತ್ ನೀಡಿದರು. ಡಾ|ಅನಿಲ ದೀಪಕ್ ಶೆಟ್ಟಿ ಹಾಗೂ ನಿಹಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಕ್ಲಬ್‌ನ್ನು ಅವಿಷ್ಮರಣೀಯಗೊಳಿಸೋಣ..
ರೋಟರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ತಿಳಿಯುತ್ತದೆ ರೋಟರಿ ಏನೆಂಬುದು ಎಂದು. ಆರೋಗ್ಯ ಸಿರಿಯಡಿಯಲ್ಲಿ ಕ್ಲಬ್ ಅನೇಕ ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿರುತ್ತದೆ. ಜೊತೆಗೆ ಜಿಲ್ಲಾ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಕ್ಲಬ್ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಕ್ಲಬ್‌ಗೆ ಹೆಸರು ಬರಲು ಕಾರಣವಾಗಿದೆ. ಕ್ಲಬ್‌ನಲ್ಲಿನ ಎಲ್ಲ ಸದಸ್ಯರ ಸಹಕಾರ ಸಹಕಾರದಿಂದ ಕ್ಲಬ್ ಸಾಧನೆ ಮಾಡಲು ಸಾಧ್ಯವಾಗಿದೆ ಮುಂದೆಯೂ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಕ್ಲಬ್ ಅನ್ನು ಅವಿಷ್ಮರಣೀಯಗೊಳಿಸೋಣ.
-ರಾಜೇಶ್ವರಿ ಆಚಾರ್, ಅಧ್ಯಕ್ಷೆ, ರೋಟರಿ ಕ್ಲಬ್ ಪುತ್ತೂರು ಯುವ

ಕೊಡುಗೆಗಳ ಅನಾವರಣ…
* ಜಲಸಿರಿ ಪ್ರಾಜೆಕ್ಟ್‌ನಡಿಯಲ್ಲಿ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಾ.ಹರ್ಷಕುಮಾರ್ ರೈಯವರ ಪ್ರಾಯೋಜಕತ್ವದಲ್ಲಿ ಕುಡಿಯುವ ನೀರಿನ ಘಟಕ

* ಬಿರುಮಲೆ ಬೆಟ್ಟದಲ್ಲಿನ ಪ್ರಜ್ಞಾ ಆಶ್ರಮಕ್ಕೆ ಭಿನ್ನ ಸಾಮರ್ಥ್ಯದ ಮಕ್ಕಳ ದೈನಂದಿನ ಓಡಾಟದ ಅನುಕೂಲಕ್ಕಾಗಿ ಮಾರುತಿ ಓಮ್ನಿ ವಾಹನ ಕೊಡುಗೆ

* ಸಾಲ್ಮರ ಅಂಗನವಾಡಿಯ ಹೊರಾಂಗಣದ ಉನ್ನತೀಕರಣ ಮೂಲಭೂತ ಸೌಕರ್ಯಗಳ ಕೊಡುಗೆ

* ನೆಲ್ಲಿಕಟ್ಟೆ ರಾಮಕೃಷ್ಣ ಸೇವಾಶ್ರಮಕ್ಕೆ ಕೆ.ಆರ್ ಶೆಣೈರವರ ಪ್ರಾಯೋಜಕತ್ವದಲ್ಲಿ ಒಂದು ವರ್ಷದ ಖರ್ಚಿನ ಧನ ಸಹಾಯ

* ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕು|ವೈಷ್ಣವಿರವರ ಚಿಕಿತ್ಸಾ ವೆಚ್ಚಕ್ಕಾಗಿ ರೂ.25 ಸಾವಿರ ಧನ ಸಹಾಯ ” ಹಾರಾಡಿ ಸರಕಾರಿ ಬಾಲಕಿಯರ ವಸತಿನಿಲಯಕ್ಕೆ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರ ಅತ್ತಿಗೆ ಯು.ಎಸ್.ಎಯಲ್ಲಿನ ಲಾವಣ್ಯರವರಿಂದ ಅಡುಗೆ ಸಾಮಾಗ್ರಿಗಳ ಕೊಡುಗೆ

* ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕು|ವೈಷ್ಣವಿರವರ ಚಿಕಿತ್ಸಾ ವೆಚ್ಚಕ್ಕೆ ರೂ.25 ಸಾವಿರ ಕೊಡುಗೆಯ ಹಸ್ತಾಂತರ
* ಕಮ್ಯೂನಿಟಿ ಸರ್ವಿಸ್‌ಗೆ ಕ್ಲಬ್ ಸದಸ್ಯ, ಪ್ರಸ್ತುತ ವೆಸ್ಟ್ ಆಫ್ರಿಕಾದಲ್ಲಿರುವ ಅನಿಲ್ ಮುಂಡೋಡಿರವರಿಂದ ರೂ.40 ಸಾವಿರ ದೇಣಿಗೆಯ ಹಸ್ತಾಂತರ

 

LEAVE A REPLY

Please enter your comment!
Please enter your name here