ಸವಣೂರು :ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ನಿಗ್ರಹ ಘಟಕ ಹಾಗೂ ಸಾಮಾಜಿಕ ಕಾರ್ಯ, ಸ್ನಾತ್ತಕೋತ್ತರ ವಿಭಾಗ ಆಳ್ವಾಸ್ ಮೂಡಬಿದ್ರೆ ಇದರ ಸಹಭಾಗಿತ್ವದಲ್ಲಿ ಕಾರ್ಯಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಎನ್ನುವ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಡಾ. ಮೂಕಾಂಬಿಕ ಜಿ.ಎಸ್‌ರವರು ಮಾತನಾಡಿ 2 ವರ್ಷದ ಮಗುವಿನಿಂದ ಹಿಡಿದು 80 ವರ್ಷದ ವೃದ್ದೆಯರ ಮೇಲೆ ನಮ್ಮ ದೇಶದಲ್ಲಿ ಹೇಗೆ ದೌರ್ಜನ್ಯ ನಡೆಯುತ್ತಿದೆ ಎನ್ನುವುದನ್ನು ತಿಳಿಸುವುದರೊಂದಿಗೆ 2013 ರಲ್ಲಿ ಮಹಿಳೆಯರ ರಕ್ಷಣೆಗಾಗಿ ಜಾರಿಗೆ ಬಂದ ಕಾನೂನು ಎಷ್ಟು ಉಪಯುಕ್ತ ಎಂಬುದನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ. ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಅರಿವಿದ್ದು ಅದರ ಸದುಪಯೋಗವನ್ನು ಪಡೆಯುವಂತೆ ಸಲಹೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಸಾಮಾಜಿಕ ಕಾರ್ಯ ಸ್ನಾತ್ತಕೋತ್ತರ ವಿಭಾಗದ ಪ್ರೊ. ಕೃಷ್ಣಮೂರ್ತಿ ಬಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಎಂ. ಐಕ್ಯುಎಸಿ ಸಂಘಟಕಿ ಸುಮಾ ಎಸ್, ಮಹಿಳಾ ದೌರ್ಜನ್ಯ ನಿಗ್ರಹ ಘಟಕದ ಸಂಘಟಕಿ ಪ್ರತಿಭಾ ಎಸ್ ಉಪಸ್ಥಿತರಿದ್ದರು.
ಮಹಿಳಾ ದೌರ್ಜನ್ಯ ನಿಗ್ರಹ ಘಟಕದ ವಿದ್ಯಾರ್ಥಿ ಉಪ ಸಂಘಟಕಿ ಸಫಾ ಅಬ್ದುಲ್ಲಾ ಸ್ವಾಗತಿಸಿ, ಸಂಘಟಕಿ ಕೌಸಲ್ಯ ಕೆ .ವಂದಿಸಿದರು. ಗಾಯತ್ರಿ ಪ್ರಾರ್ಥಿಸಿ, ಬುಶ್ರಾಕಾರ್ಯಕ್ರಮ ನಿರೂಪಿಸಿದರು.