ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿರುವ ಮಧುಮೇಹ ತಜ್ಞ ಹಾಗೂ ವೈದ್ಯಕೀಯ ತಜ್ಞ ಡಾ.ನಝೀರ್ ಅಹಮದ್ ರವರ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ನಲ್ಲಿ ದ.28 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಫೈಬ್ರೋಸ್ಕ್ಯಾನ್ ತಪಾಸಣಾ ಶಿಬಿರವು ಜರಗಲಿದೆ.
ಅಧಿಕ ಬೊಜ್ಜು, ಬಿಪಿ, ಶುಗರ್ ಮತ್ತು ಕೊಲೆಸ್ಟ್ರಾಲ್ ಇರುವವರಲ್ಲಿ ಫ್ಯಾಟಿ ಲಿವರ್(ಲಿವರ್ ನಲ್ಲಿ ಕೊಬ್ಬು) ಇರುವ ಸಾಧ್ಯತೆ ಹೆಚ್ಚು. ಆರಂಭದಲ್ಲಿ ಇದನ್ನು ಕಂಡು ಹಿಡಿದು ಸೂಕ್ತ ಪರಿಹಾರ ಪಡೆಯದಿದ್ದರೆ ಇದು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಫೈಬ್ರೋಸ್ಕ್ಯಾನ್ ಎಂಬ ವಿಶೇಷ ತಪಾಸಣೆಯ ಮೂಲಕ ಇದರ ತೀವೃತೆಯನ್ನು ತಿಳಿದುಕೊಂಡು ಸೂಕ್ತ ಸಲಹೆ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ 9481451929 ನಂಬರಿಗೆ ಸಂಪರ್ಕಿಸಬಹುದು ಎಂದು ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರಿನ ಪ್ರಕಟಣೆ ತಿಳಿಸಿದೆ.
ಶುಗರ್, ಕೊಲೆಸ್ಟ್ರಾಲ್ ಮತ್ತು HBA1C ಪರೀಕ್ಷೆ ಮಾಡಲಾಗುವುದು. ಮುಂಚಿತವಾಗಿ ನೋಂದಾಯಿಸಿದ 25 ಜನರಿಗೆ ಉಚಿತವಾಗಿ ಪರೀಕ್ಷೆ ಮಾಡಲಾಗುವುದು.