ಪುತ್ತೂರು: ಸಾಲ್ಮರ ರೈಲ್ವೇ ಗೇಟ್ ಬಳಿಯ ಧ್ಯಾನಗಿರಿಯ ಶ್ರೀ ಅಭಯ ಆಂಜನೇಯ ಸನಿಧಿಯಲ್ಲಿ ಶ್ರೀ ಅಭಯ ಆಂಜನೇಯ ದೇವರ ವಾರ್ಷಿಕ ಜಾತ್ರೆಯು ಡಿ.29 ರಂದು ವಿಜೃಂಭಣೆಯಿಂದ ಜರುಗಲಿದೆ.
ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರ ನೇತೃತ್ವದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯಲಿದ್ದು, ಬೆಳಿಗ್ಗೆ ಗಣಪತಿ ಹೋಮ, ಕಲಶಾಭಿಷೇಕ, ರಂಗಪೂಜೆ, ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ಬಲಿ ಹೊರಟು ಉತ್ಸವ, ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅಶ್ವಥ ಕಟ್ಟೆ ಪೂಜೆ, ಬರೆಕರೆವರೆಗೆ ಶ್ರೀ ದೇವರ ಪೇಟೆ ಸವಾರಿ ಜರುಗಲಿದ್ದು, ಮಂತ್ರಾಕ್ಷತೆ ಬಳಿಕ ಪ್ರಸಾದ ಭೋಜನ ನಡೆಯಲಿದೆ ಎಂದು ಶ್ರೀಮತಿ ಕೃಪಾ ಕೆದಿಲಾಯ ಮನೆಯವರು ತಿಳಿಸಿದ್ದಾರೆ.
ಆಂಜನೇಯ ದೇವರಿಗೆ ರಜತ ಕಿರೀಟ ಸಮರ್ಪಣೆ
ಜಾತ್ರೋತ್ಸವ ಸಂದರ್ಭ ಬೆಳಿಗ್ಗೆ ಬರೆಕರೆ ಮನೆಯವರಿಂದ ಬೆಳಿಗ್ಗೆ ಆಂಜನೇಯ ದೇವರಿಗೆ ರಜತ ಕಿರೀಟ ಸಮರ್ಪಣೆ ನಡೆಯಲಿದೆ. ಸಂಜೆ ಗಂಟೆ 5 ರಿಂದ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.