ರಾಮಕುಂಜ: ಕಡಬ ತಾಲೂಕಿನ ಹಳೆನೇರಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲಾ ’ಶತಮಾನೋತ್ಸವ ಸಂಭ್ರಮ-2025’ ದ.5 ರಿಂದ 7ರ ತನಕ ಶಾಲೆಯ ರಾಮಮಜಲು ಗುತ್ತು ಲಕ್ಷ್ಮೀ ಕರಿಯಪ್ಪ ರೈ ರಂಗಮಂಟಪದಲ್ಲಿ ನಡೆಯಲಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ ರೈ ರಾಮಮಜಲು, ಶಾಲಾಮುಖ್ಯಗುರು ವೈ.ಸಾಂತಪ್ಪ ಗೌಡ, ಎಸ್ಡಿಎಂಸಿ ಅಧ್ಯಕ್ಷ ವೀರೇಂದ್ರ ಪಾಲೆತಡ್ಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ಶಾಲಾ ವಿದ್ಯಾರ್ಥಿ ನಾಯಕ ಚೇತನ್ ಕೆ.ಹಾಗೂ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ.5ರಂದು ಪೂರ್ವಾಹ್ನ 9ಕ್ಕೆ ಶತ ಮೆರವಣಿಗೆ ವಾಹನ ಜಾಥಾ ಮತ್ತು ಹಸಿರು ಹೊರೆಕಾಣಿಕೆ ಸಂಭ್ರಮ ನಡೆಯಲಿದೆ. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ನಿವೃತ್ತ ಉಪನ್ಯಾಸಕ ಹರಿನಾರಾಯಣ ಆಚಾರ್ಯ ಎರಟಾಡಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಛದ್ಮವೇಷ ಸ್ಪರ್ಧೆ ನಡೆಯಲಿದೆ. ದ.6ರಂದು ಪೂರ್ವಾಹ್ನ 9ಕ್ಕೆ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ನಿವೃತ್ತ ಉಪನ್ಯಾಸಕ ಮಾಧವ ಆಚಾರ್ಯ ಇಜ್ಜಾವು ಶತ ಸಂಭ್ರಮ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಕಡಬ ವಲಯ ಶಿಕ್ಷಣ ಸಂಯೋಜಕ ಹರಿಪ್ರಸಾದ್, ರಾಮಕುಂಜ ಕ್ಲಸ್ಟರ್ ಪ್ರಭಾರ ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್ ಎಂ. ಭಾಗವಹಿಸಲಿದ್ದಾರೆ. ಬೆಳಿಗ್ಗೆ 10ಕ್ಕೆ ದೀಪ ಪ್ರಜ್ವಲನೆ ಹಾಗೂ ರಾಮಮಜಲುಗುತ್ತು ಲಕ್ಷ್ಮೀ ಕರಿಯಪ್ಪ ರೈ ಸ್ಮರಣಾರ್ಥ ನವೀಕರಣಗೊಂಡ ರಂಗಮಂಟಪ ಉದ್ಘಾಟನೆಯನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟ ನೆರವೇರಿಸಲಿದ್ದಾರೆ. ಅಧ್ಯಕ್ಷತೆ ವಹಿಸಲಿರುವ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಊರ ದಾನಿಗಳಿಂದ ನಿರ್ಮಾಣಗೊಂಡ ಶತಮಾನೋತ್ಸವ ಸಭಾಂಗಣ ಉದ್ಘಾಟಿಸಲಿದ್ದಾರೆ. ಎಂಆರ್ಪಿಎಲ್ ಸಿಎಸ್ಆರ್ ಅನುದಾನದಲ್ಲಿ ನಿರ್ಮಾಣಗೊಂಡ ಶಾಲಾ ನೂತನ ತರಗತಿ ಕೊಠಡಿಗಳ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಕಿಶೋರ್ಕುಮಾರ್ ಬಿ.ಉದ್ಘಾಟಿಸಲಿದ್ದಾರೆ. ಗ್ರಾ.ಪಂ.ಅನುದಾನದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳನ್ನು ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತ ಬಿ.ಉದ್ಘಾಟಿಸಲಿದ್ದಾರೆ. ಚಿತ್ರ ವಿನ್ಯಾಸಗೊಂಡಿರುವ ತರಗತಿ ಕೊಠಡಿಗಳನ್ನು ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ್ ಗಾಂಧಿಪೇಟೆ ಉದ್ಘಾಟಿಸಲಿದ್ದಾರೆ. ರಾಮಕುಂಜ ಗ್ರಾ.ಪಂ.ಸದಸ್ಯೆ ಮಾಲತಿ ಎನ್.ಕೆ. ಅವರು ಕಂಪ್ಯೂಟರ್ ಲ್ಯಾಬ್, ರಾಮಕುಂಜ ಗ್ರಾ.ಪಂ.ಸದಸ್ಯ ಕುಶಾಲಪ್ಪ ಎಂ. ಅವರು ಗ್ರಂಥಾಲಯವನ್ನು ಉದ್ಘಾಟಿಸಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ್ ಜಿ.ಎಸ್.ಅವರು ಮಹಾ ದಾನಿಗಳಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ.
ರಾಮಕುಂಜ ಗ್ರಾ.ಪಂ.ಸದಸ್ಯರಾದ ವಸಂತ ಪರಕ್ಕಾಲು, ಸುಜಾತ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ., ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂಆರ್ಪಿಎಲ್ನ ಹೆಚ್ಆರ್ ಜಿಜಿಎಂ ಕೃಷ್ಣ ಹೆಗಡೆ ಎಂ., ಬೆಂಗಳೂರಿನ ಉದ್ಯಮಿ ಸತೀಶ್ಕುಮಾರ್ ರೈ ರಾಮಮಜಲು, ಬೆಂಗಳೂರು ವಾಲ್ಸ್ಪರ್ ಇಂಡಿಯಾ ಕಾರ್ಪೊರೇಷನ್ ಪ್ರೈವೆಟ್ ಲಿಮಿಟೆಡ್ನ ಹೆಚ್.ಆರ್.ಮ್ಯಾನೇಜರ್ ರತನ್ ರೈ ಬಾಕ್ರಬೈಲ್, ಬೆಂಗಳೂರು ಜೆ.ಪಿ.ನಗರ ರೋಟರಿಯ ಸುರೇಶ್ ರಾಬರ್ಟ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ವಿಭಾಗ, ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಕ್ರೀಡಾ ಸಾಧಕರಿಗೆ ದಿ| ಬಾಳಪ್ಪ ಗೌಡ ಕಟ್ಟಪುಣಿ ದತ್ತಿನಿಧಿ ಪ್ರಾಯೋಜಕತ್ವದ ಸನ್ಮಾನ ನಡೆಯಲಿದೆ.
ಪುಟಾಣಿ ಸಂಭ್ರಮ;
ದ.6ರಂದು ಸಂಜೆ 5.30ಕ್ಕೆ ಪುಟಾಣಿ ಸಂಭ್ರಮ ನಡೆಯಲಿದೆ. ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಕದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ., ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ಕುಮಾರ್ ಪಾಲೇರಿ, ಕೆಎಸ್ಆರ್ಟಿಸಿ ಮಂಗಳೂರು ಘಟಕದ ನಿವೃತ್ತ ಸಂಚಾರ ನಿಯಂತ್ರಕ ವಿಶ್ವನಾಥ ರೈ ಎರಟಾಡಿ, ಆಲಂತಾಯ ಶಾಲಾ ನಿವೃತ್ತ ಶಿಕ್ಷಕಿ ರಾಜೇಶ್ವರ ಪಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗುರುವಂದನಾ ಸಮಾರಂಭ;
ದ.7ರಂದು ಬೆಳಿಗ್ಗೆ 9ಕ್ಕೆ ಗುರುವಂದನಾ ಸಮಾರಂಭ ನಡೆಯಲಿದೆ. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವೀರೇಂದ್ರ ಪಾಲೆತಡ್ಡ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಗುರುವಂದನೆ ಮತ್ತು ಶಾಲಾ ಉದ್ಯಾನವನ ಉದ್ಘಾಟಿಸಲಿದ್ದಾರೆ. ಡಾ| ಜಿನಚಂದ್ರ ಜೈನ್ ಹಳೆನೇರೆಂಕಿ, ಕಡಬ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್ಕುಮಾರ್ ನೆಲ್ಯಾಡಿ, ದ.ಕ.ಜಿಲ್ಲಾ ಪ್ರಾಥಮಿಕ ಶಾಲಾ ಕೇಡರ್ ಹಾಗೂ ಪದವಿಯೇತರ ಮುಖ್ಯಗುರುಗಳ ಸಂಘದ ಅಧ್ಯಕ್ಷ ನಿಂಗರಾಜು ಕೆ.ಪಿ., ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ;
ದ.7ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ್ ರೈ ರಾಮಮಜಲು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬೆಂಗಳೂರು ದಾಕ್ಷಾಯಿಣಿ ಗ್ರೂಪ್ಸ್ ಆಡಳಿತ ವ್ಯವಸ್ಥಾಪಕ ತೇಜ್ಕುಮಾರ್ ರೈ, ಬೆಂಗಳೂರು ದೇವನಹಳ್ಳಿ ಓಂ ಶಕ್ತಿ ಎಂಟರ್ಪ್ರೈಸಸ್ ಮೈನಿಂಗ್ ಡೆವಲರ್ಸ್ನ ಆರ್.ಕಣ್ಣನ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ, ಶಾಲಾ ನಿವೃತ್ತ ಮುಖ್ಯಗುರು ಸುಗಂಧಿ ಕೆ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಲಾ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷೆ ಶಶಿಕಲಾ ಮಾಧವ ಆಚಾರ್ಯ ಇಜ್ಜಾವು, ಪುತ್ತೂರು ಮಾಸ್ಟರ್ ಪ್ಲಾನರಿಯ ಆನಂದ ಎಸ್.ಕೆ., ರೋಷನ್ ಬಲ್ಲಾಳ್ ಹಳೆನೇರೆಂಕಿ, ಎನ್.ಆದಂ ಮೇಸ್ತ್ರಿ ಹಳೆನೇರೆಂಕಿ, ನಿವೃತ್ತ ಮುಖ್ಯಗುರು ಸಂಜೀವ ಬಿ., ಶಾಲಾ ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಸಂತೋಷ್ಕುಮಾರ್ ಕುಂಞಕ್ಕು, ಧರ್ಣಪ್ಪ ಗೌಡ ಅಲೆಪ್ಪಾಡಿ, ಕಿರಣ್ಕುಮಾರ್ ಪಾದೆ, ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ವಸಂತಿ ಕನೆಮಾರು, ಪುರುಷೋತ್ತಮ ಬರೆಂಬೆಟ್ಟು, ಪ್ರಧಾನ ಕಾರ್ಯದರ್ಶಿ, ಶಾಲಾ ಮುಖ್ಯಶಿಕ್ಷಕರೂ ಆದ ವೈ.ಸಾಂತಪ್ಪ ಗೌಡ, ಜೊತೆ ಕಾರ್ಯದರ್ಶಿ ಶೇಖರ ಗೌಡ ಹಿರಿಂಜ, ಪ್ರೇಮನಾಥ ಪದ್ಮುಂಜ, ನವೀನ ಎ., ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು;
ದ.6ರಂದು ಮಧ್ಯಾಹ್ನ 1.30ರಿಂದ ಆರಟಿಗೆ, ಮೇಲೂರು ಹಾಗೂ ಇಂದ್ರಾಂಡ ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಂದ ನೃತ್ಯ ಕಲರವ ಮತ್ತು ಶಾಲಾ ಕಿರಿಯ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ. ಸಂಜೆ 5.30ಕ್ಕೆ ಶಾಲಾ ಮಕ್ಕಳಿಂದ ನೃತ್ಯ ರೂಪಕ ಬೇಲಿ ದೆವ್ವ, ಗೋಕುಲ ನಿರ್ಗಮನ ನಾಟಕ ನಡೆಯಲಿದೆ. ದ.7ರಂದು ಅಪರಾಹ್ನ 1.30ಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಊರಿನ ಮಹಿಳೆಯರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಸಂಜೆ ೬.೩೦ಕ್ಕೆ ಶಾಲಾ ಹಿರಿಯ ವಿದ್ಯಾರ್ಥಿಗಳಿಂದ ’ಬಾಡಂದಿ ಪೂ’ ತುಳು ಸಾಮಾಜಿಕ ನಾಟಕ ನಡೆಯಲಿದೆ.
1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸ;
ಹಳೆನೇರಂಕಿ ಸರಕಾರಿ ಶಾಲೆಯಲ್ಲಿ ಶತಮಾನೋತ್ಸವದ ಸವಿನೆನಪಿಗಾಗಿ ಸುಮಾರು ರೂ.1 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದಿದೆ. ರಾಮಮಜಲುಗುತ್ತು ಲಕ್ಷ್ಮೀ ಕರಿಯಪ್ಪ ರೈ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಂದ ರಂಗಮಂಟಪ, ಊರ ದಾನಿಗಳ ನೆರವಿನಿಂದ ಶತಮಾನೋತ್ಸವ ಸಭಾಂಗಣ, ಎಂಆರ್ಪಿಎಲ್ ಸಿಎಸ್ಆರ್ ನಿಧಿಯಿಂದ ನೂತನ ತರಗತಿ ಕೊಠಡಿ, ಗ್ರಾ.ಪಂ.ಅನುದಾನದಿಂದ ಹೆಣ್ಣು ಮಕ್ಕಳ ಶೌಚಾಲಯ, ತರಗತಿ ಕೊಠಡಿಗಳ ಚಿತ್ರ ವಿನ್ಯಾಸ, ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಗ್ರಂಥಾಲಯ, ಉದ್ಯಾನವನ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.
