ಬೆಳಗಾವಿ: ಸರಕಾರ ವೃದ್ಧಾಪ್ಯ, ವಿಧವಾ ವೇತನ, ವಿಶೇಷ ಚೇತನರಿಗೆ ನೀಡುತ್ತಿದ್ದ ಮಾಸಾಶನ ಯೋಜನೆಯಲ್ಲಿ 2 ವರ್ಷದಲ್ಲಿ 2 ಲಕ್ಷ ಅನರ್ಹರು ಪತ್ತೆಯಾಗಿದ್ದು ಅವರಿಗೆ ನೀಡುತ್ತಿದ್ದ ಮಾಸಾಶನವನ್ನು ರದ್ದುಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಮಾಸಾಶನ ನೀಡುವ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದ್ದು ಪ್ರತೀ ತಿಂಗಳ 25ರಂದು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. 8 ತಿಂಗಳ ಒಳಗಾಗಿ ಖಾತೆಯಲ್ಲಿ ವಹಿವಾಟು ನಡೆಯದಿದ್ದರೆ ಅಂತಹ ಖಾತೆಯನ್ನು ನಿಷ್ಕ್ರಿಯ ಖಾತೆಯೆಂದು ಪರಿಗಣಿಸಲಾಗುತ್ತದೆ ಮತ್ತು ಆ ಖಾತೆಗೆ ಹಣ ವರ್ಗಾವಣೆಯನ್ನು ತಡೆಹಿಡಿಯಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.