ಜೆ ಎನ್ ಯು ನಿವೃತ್ತ ಪ್ರಾಧ್ಯಾಪಕ ಕನ್ನಡದ ಹಿರಿಯರ ಸಾಹಿತಿ ಪುರುಷೋತ್ತಮ ಬಿಳಿಮಲೆ ಅವರ ವಿರುದ್ದ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಹಾವೇರಿಯಲ್ಲಿ ನೀಡಿರುವ ಶಾಮಿಯಾನ ಹೇಳಿಕೆ ಹೊಸ ವಿವಾದಕ್ಕೆ ಎಡೆ ಮಾಡಿದೆ. ಪತ್ರಕಾಗೋಷ್ಟಿ ನಡೆಸಿ ತಮ್ಮ ವಿರುದ್ದ ನೀಡಿದ ಶಾಮಿಯಾನ ಹೇಲಿಕೆಗೆ ಪ್ರತಿಕ್ರೀಯೆ ನೀಡಿರುವ ಬಿಳಿಮಲೆ ಜೋಷಿಯವರು ಹೇಳಿಕೆಯನ್ನು ಸಾಬೀತು ಪಡಿಸಬೇಕು ಇಲ್ಲವಾದರೆ ಕಸಾಪ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದು ಖಾರವಾಗಿ ಹೇಳಿದ್ದಾರೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪಕ್ಕೆ ಗುರುವಾರ ಪತ್ರಿಕಾ ಗೋಷ್ಟಿ ನಡೆಸಿದ ಜೋಷಿ, ಸಾಹಿತಿ ಪುರುಷೋತ್ತಮ ಬಿಳಿಮಲೆಯವರು ಹೇಳಿದ ವ್ಯಕ್ತಿಗೆ ಶಾಮಿಯಾನದ ಗುತ್ತಿಗೆ ನೀಡಿಲ್ಲ ಎನ್ನುವ ಕಾರಣಕ್ಕೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ನಡುವೆ ಸಮ್ಮೇಳನದ ದೃಶ್ಯ ಮಾದ್ಯಮ ಸಹಯೋಗ ಎಂದು ಬಲಪಂಥಿಯ ಮಾಧ್ಯಮ ಒಂದರ ಹೆಸರು ಹಾಕಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ. ಸಾಹಿತ್ಯ ಸಮ್ಮೇಳನದ ವರದಿಗೆ ಎಲ್ಲಾ ಮಾಧ್ಯಮಗಳಿಗೂ ಮುಕ್ತ ಅವಕಾಶ ನೀಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿತ್ತು.