ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದ ವೇಳೆ ಯುವಕನೊಬ್ಬನಿಂದ ಲೈಂಗಿಕ ಕಿರುಕುಳ ಆರೋಪ – ಪೋಕ್ಸೋ ಪ್ರಕರಣ ದಾಖಲು

0

ಪುತ್ತೂರು: ವಿದ್ಯಾರ್ಥಿನಿಯೊಬ್ಬರು ಅಪ್ರಾಪ್ತ ವಯಸ್ಕಳಾಗಿದ್ದ ಸಂದರ್ಭ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೋಡಿಯಡ್ಕ ನಿವಾಸಿಯ ಯುವಕನೊಬ್ಬನ ವಿರುದ್ಧ ಸಂಪ್ಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ಕೋಡಿಯಡ್ಕ ಬೆಳ್ಳಿಯಪ್ಪ ಗೌಡರ ಪುತ್ರ ಪರ್ಲಡ್ಕದಲ್ಲಿ ಕೋಳಿ ಅಂಗಡಿ ಹೊಂದಿರುವ ರಾಹುಲ್ ಆರೋಪಿ. ಆತನ ವಿರುದ್ಧ ಪುತ್ತೂರು ನಿವಾಸಿ ಮಂಗಳೂರು ಕಾಲೇಜೊಂದರ ವಿದ್ಯಾರ್ಥಿನಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ರಾಹುಲ್ ಅವರು ವಿದ್ಯಾರ್ಥಿನಿ ಅಪ್ರಾಪ್ತೆ ವಯಸ್ಕಳಾಗಿದ್ದ ಸಂದರ್ಭ ಆಕೆಗೆ ಕೋಳಿ ಫಾರಂನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮತ್ತು ಆಕೆಗೆ ಬೆದರಿಕೆಯೊಡ್ಡಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದೀಗ ರಾಹುಲ್ ಅವರು ಆಕೆಯ ಚಾರಿತ್ರ್ಯ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಕುರಿತು  ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿನಿ ತಡವಾಗಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here