ಬೆಂಗಳೂರು: ಸ್ಯಾಂಟ್ರೋ ರವಿಗೆ ವಿಪಕ್ಷದವರ ಜತೆಗೂ ಸಂಬಂಧ ಇದೆ. 20 ವರ್ಷಗಳಿಂದ ಎಲ್ಲಾ ರಾಜಕಾರಣಿಗಳ ಜತೆಗೂ ಸಂಪರ್ಕ ಇರಬೇಕು. ಹಾಗಾಗಿ ಆತನನ್ನು ಬಂಧಿಸಿ ತನಿಖೆ ನಡೆಸುವಂತೆ ಮೈಸೂರು ಪೊಲೀಸರಿಗೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಕಟ್ಟು ನಿಟ್ಟಿನಲ್ಲಿ ಸೂಚನೆ ನೀಡಿದ್ದಾರೆ.
ಹೆಣ್ಣು ಮಗಳೋಬ್ಬಳಿಗೆ ಕಿರುಕುಳ ನೀಡಿ ಹಿಂಸಿಸಿರುವ ಬಗ್ಗೆ ಮೈಸೂರಿನಲ್ಲಿ ಪ್ರಕರಣ ದಾಖಲಾಗಿದೆ. ಹಾಗಾಗಿ ಆತನನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಆತನ ಬಂಧನವಾದರೆ ಎಲ್ಲಾ ವಿಷಯಗಳು ಹೊರಬರಲಿದೆ ಎಂದು ಅವರು ಮೈಸೂರಿನಲ್ಲಿ ಹೇಳಿದ್ದಾರೆ. ವಿಧಾನ ಸೌಧವನ್ನು ಬಿಜೆಪಿ ಶಾಪಿಂಗ್ ಮಾಲ್ ಮಾಡಿದೆ ಎನ್ನುವ ಕಾಂಗ್ರೆಸ್ ಆರೋಪದ ಬಗ್ಗೆ ಮಾತನಾಡಿದ ಸಿ ಎಂ 2019 ರಲ್ಲಿ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಕಚೇರಿಯಲ್ಲಿ 20 ಲಕ್ಷ ಸಿಕ್ಕಿದಾಗ ಕಾಂಗ್ರೆಸ್ನವರು ಏನು ಮಾಡಿಕೊಂಡಿದ್ದರು. ತನಿಖೆ ಮಾಡದೆ ಮುಚ್ಚಿ ಹಾಕಿದ ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಇನ್ನೊಂದೆಡೆ ಸ್ಯಾಂಟ್ರೋ ರವಿಗೆ ಕುಮಾರ ಕೃಪಾದಲ್ಲಿ ರೂಮ್ ನೀಡುತ್ತಿದ್ದ ಆರೋಪದ ಮೇಲೆ ಕುಮಾರ ಕೃಪಾ ಅತಿಥಿ ಗೃಹದ ಅಧಿಕಾರಿ ದೇವರಾಜ್ ಹೆಚ್ಎಸ್ ಅವರನ್ನು KSTDC ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.