ಪುತ್ತೂರು : ನಗರಸಭಾ ವ್ಯಾಪ್ತಿಯ ಕೇಪುಳು-ಉರಮಾಲು ರಸ್ತೆಗೆ 34 ಲಕ್ಷ ರೂ. ಅನುದಾನದಲ್ಲಿ ಇತ್ತೀಚೆಗೆ ಕಾಂಕ್ರೀಟೀಕರಣ ನಡೆಸಲಾಗಿದ್ದು ಈ ಕಾಂಕ್ರೀಟ್ ಕಾಮಗಾರಿ ಇತ್ತೀಚೆಗೆ ಸುರಿದ ಒಂದೇ ಒಂದು ಅಕಾಲಿಕ ಮಳೆಗೆ ಕರಗಲು ಪ್ರಾರಂಭವಾಗಿದೆ.
ಈ ಕುರಿತು ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ದ.ಕ.ಜಿಲ್ಲಾಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ಹಾಗೂ ನಗರಸಭೆಗೆ ದೂರು ಸಲ್ಲಿಸಿ ಒತ್ತಾಯಿಸಲಾಗಿದೆ. ಅಕಾಲಿಕ ಮಳೆಬಾರದೇ ಇದ್ದಲ್ಲಿ ಗುತ್ತಿಗೆದಾರರು ಕಾಮಗಾರಿಯ ಬಿಲ್ಲು ಪಾವತಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು. ಮುಂದೆ ಮರು ಕಾಂಕ್ರಿಟೀಕರಣ ಕೂಡ ಕಷ್ಟ ಸಾಧ್ಯವಾಗುತ್ತಿತ್ತು. ಈ ರೀತಿ ಸರಕಾರಿ ಅನುದಾನಗಳನ್ನು ಪೋಲುಮಾಡಿ ಸಾರ್ವಜನಿಕ ರಸ್ತೆಗಳಿಗೆ ತೊಂದರೆ ಉಂಟು ಮಾಡುತ್ತಿರುವ ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಯಲ್ಲಿ ಸೇರಿಸುವಂತೆ ಹಾಗೂ ಗುತ್ತಿಗೆದಾರರಿಗೆ ಕಾಮಗಾರಿಗಳ ಗುತ್ತಿಗೆ ನೀಡದಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.