ಪುತ್ತೂರು:ದ.ಕ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಉತ್ಪನ್ನಗಳ ಫ್ರಾಂಚೈಸಿ ‘ಆಳ್ವಾ ನಂದಿನಿ ಪಾರ್ಲರ್’ ಜ.13ರಂದು ಅಪರಾಹ್ನ 2 ಗಂಟೆಗೆ ಮುಖ್ಯರಸ್ತೆಯ ನಗರಸಭಾ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.
ಕಳೆದ ಸುಮಾರು 25 ವರ್ಷಗಳಿಂದ ನಂದಿನಿ ಹಾಲಿನ ಉತ್ಪನ್ನಗಳ ವಿತರಕರಾಗಿರುವ ಆಳ್ವಾ ನಂದಿನಿ ಪಾರ್ಲರ್ ಹಾಲು, ಮೊಸರು, ಮಜ್ಜಿಗೆ ಹಾಗೂ ಇನ್ನಿತರ ಹಾಲಿನ ಉತ್ಪನ್ನಗಳ ಮಾರಾಟಗಾರರಾಗಿದ್ದರು. ಇವರು 2020-21ನೇ ಸಾಲಿನಲ್ಲಿ ನಂದಿನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಅತೀ ಹೆಚ್ಚು ಮಾರಾಟ ಮಾಡುವ ಮೂಲಕ ತಾಲೂಕು ಉತ್ತಮ ಡೀಲರ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಇದೀಗ ದ.ಕ ಹಾಲು ಉತ್ಪಾದಕರ ಒಕ್ಕೂಟದಿಂದ ಅಧಿಕೃತ ನಂದಿನಿ ಪ್ರಾಂಚೈಸಿ ಆಗಿ ನೇಮಕಗೊಂಡಿದೆ. ಅಲ್ಲದೆ ಭಾರತ ಸರಕಾರದ ಆಹಾರ ಸುರಕ್ಷತೆಯ ಕಾಯ್ದೆಯಡಿ ನೋಂದಣಿ ಮಾಡಿಕೊಂಡು ವ್ಯವಹರಿಸಲಿದೆ. ಮಳಿಗೆಯಲ್ಲಿ ನಂದಿನಿ ಹಾಲು ಹಾಗೂ ಹಾಲಿನ ಎಲ್ಲಾ ರೀತಿಯ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ.
ನೂತನ ಮಳಿಗೆಯನ್ನು ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಉದ್ಘಾಟಿಸಲಿದ್ದಾರೆ. ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳೆಜ್ಜ, ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಆಡಳಿತ ನಿರ್ದೇಶಕ ಡಿ.ಅಶೋಕ್, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಪೌರಾಯುಕ್ತ ಮಧು ಎಸ್.ಮನೋಹರ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಫ್ರಾಂಚೈಸಿ ನಿರ್ವಾಹಕ ಕೃಷ್ಣಪ್ರಸಾದ್ ಆಳ್ವ ತಿಳಿಸಿದ್ದಾರೆ.