ಪುತ್ತೂರು: ಸವಣೂರು ಗ್ರಾ.ಪಂ. ವತಿಯಿಂದ 5 ವರ್ಷಗಳ ದೂರದೃಷ್ಠಿ ಯೋಜನೆಯ ವಿಶೇಷ ಗ್ರಾಮ ಸಭೆಯು ಜ. 9 ರಂದು ಸವಣೂರು ಗ್ರಾ.ಪಂ. ಕುಮಾರಧಾರಾ ಸಭಾಭವನದಲ್ಲಿ ಜರಗಿತು.
ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ- ರಾಜೀವಿ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಕೆಡೆಂಜಿರವರು ಮಾತನಾಡಿ ಸವಣೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಸವಣೂರು,ಪುಣ್ಚಪ್ಪಾಡಿ ಹಾಗೂ ಪಾಲ್ತಾಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ 5 ವರ್ಷಗಳ ದೂರದೃಷ್ಟಿ ಯೋಜನೆಯ ಬಗ್ಗೆ ಕರೆಯಲಾದ ಗ್ರಾಮ ಸಭೆಯಲ್ಲಿ ಬೇಡಿಕೆಗಳ ಪಟ್ಟಿಯನ್ನು ತಯಾರಿಸಲಾಗಿದೆ.ಇದನ್ನು ಹಂತಹಂತವಾಗಿ ವಿವಿಧ ಯೋಜನೆಗಳ ಮುಖಾಂತರ ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿ, ಗ್ರಾಮದ ಅಭಿವೃದ್ಧಿಯಾದರೆ ಮಾತ್ರ ಜನರು ನೆಮ್ಮದಿಯ ಜೀವನವನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಚರ್ಚಾನಿಯಂತ್ರಣಾಧಿಕಾರಿಯಾಗಿದ್ದ ಪಂಚಾಯತ್ರಾಜ್ ಇಂಜಿನಿಯರ್ ಇಲಾಖೆಯ ಇಂಜಿನಿಯರ್ ಎಸ್ಎನ್ ಹುಕ್ಕೇರಿರವರು ಗ್ರಾಮ ಸಭೆಯನ್ನು ನಡೆಸಿಕೊಟ್ಟರು.
ಗ್ರಾಮ ಸಭೆಯಲ್ಲಿ ನೂರಾರು ಬೇಡಿಕೆಗಳು
ಸವಣೂರಿನಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ, ಪಾಳು ಬಿದ್ದಿರುವ ಶುದ್ಧ ನೀರಿನ ಘಟಕವನ್ನು ಕಾರ್ಯರೂಪಕ್ಕೆ ತರುವುದು, ಪರಣೆಯಿಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ ಡಾಮರೀಕರಣ,ಅರೇಲ್ತಡಿ ಶಾಲೆಗೆ ಸ್ವಂತ ಬೋರ್ವೆಲ್, ಸವಣೂರು ಶಾಲಾ ರಸ್ತೆಗೆ ಡಾಮರೀಕರಣ, ಪಣೆಮಜಲು-ಪೆರಿಯಡ್ಕ ರಸ್ತೆ ಡಾಮರೀಕರಣ, ಸವಣೂರು ಕಾಲೇಜ್ ಕ್ರೀಡಾಂಗಣಕ್ಕೆ ದಾರಿ ದೀಪದ ವ್ಯವಸ್ಥೆ, ಕುಮಾರಮಂಗಲ ಶಾಲೆಯನ್ನು ವಸತಿ ಶಾಲೆಯಾಗಿ ಪರಿವರ್ತನೆ ಮಾಡುವುದು, ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯ ಒದಗಿಸುವುದು, ಪಾಲ್ತಾಡಿ ಗ್ರಾಮದ ರಸ್ತೆ ಅಭಿವೃದ್ದಿ ಸಹಿತ ವಿವಿಧ ಅಭಿವೃದ್ಧಿಗಳು, ಶಾಲೆಗಳಲ್ಲಿ ಅಡಿಕೆ ಕೃಷಿಗೆ ಬೇಡಿಕೆ ಹೀಗೆ ನೂರಾರು ಬೇಡಿಕೆಗಳನ್ನು ಗ್ರಾಮ ಸಭೆಯಲ್ಲಿ ಸಲ್ಲಿಸಲಾಯಿತು.
ಗ್ರಾ.ಪಂ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಗ್ರಾ.ಪಂ. ಸದಸ್ಯರುಗಳಾದ ಗಿರಿಶಂಕರ್ ಸುಲಾಯ ದೇವಸ್ಯ, ಚಂದ್ರಾವತಿ, ಇಂದಿರಾ, ರಫೀಕ್ ಎಂ.ಎ, ಅಬ್ದುಲ್ ರಜಾಕ್, ಬಾಬು, ಯಶೋದ, ಜಯಶ್ರೀ, ಹರಿಕಲಾ ರೈ, ಸುಂದರಿ, ವಿನೋದ ರೈ, ಭರತ್ ರೈ ಪಾಲ್ತಾಡಿ, ಚೇತನಾ ಪಾಲ್ತಾಡಿ, ತಾರಾನಾಥ ಬೊಳಿಯಾಲ, ಹರೀಶ್, ಮುಖ್ಯಗುರುಗಳಾದ ಸವಣೂರು ಶಾಲೆಯ ಬಾಲಕೃಷ್ಣ ಕೆ, ಸವಣೂರು ಮೊಗರು ಶಾಲೆಯ ಕವಿತಾ ಎನ್, ಪುಣ್ಚಪ್ಪಾಡಿ ಶಾಲೆಯ ರಶ್ಮಿತಾ, ಕುಮಾರಮಂಗಲ ಶಾಲೆಯ ಜಾನಕಿ, ಆರೇಲ್ತಡಿ ಶಾಲೆಯ ಜಗನ್ನಾಥ ಎಸ್, ಸವಣೂರು ಸ.ಪ.ಪೂ.ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್, ಮಂಜುನಾಥ ನಗರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುಲೋಚನಾ, ಅಂಗನವಾಡಿ ಕಾರ್ಯಕರ್ತೆಯರಾದ ಶೇಷಮ್ಮ ಪುಣ್ಚಪ್ಪಾಡಿ, ಸುಮಂಗಳಾ ಬಂಬಿಲ, ಜಾನಕಿ ಕುಮಾಮಂಗಲ, ಆಶಾ ಕಾರ್ಯಕರ್ತೆಯರಾದ ಸುಮತಿ, ಅನಿತಾ, ಸರಸ್ವತಿ, ಗೀತಾ, ವೇದಾವತಿ, ಸವಣೂರು ಗ್ರಾ.ಪಂ. ಮಾಜಿ ಸದಸ್ಯ ಸತೀಶ್ ಬಲ್ಯಾಯ ಕನಡಕುಮೇರುರವರುಗಳು ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಸ್ವಾಗತಿಸಿ, ಗ್ರಾ.ಪಂ. ಸಿಬ್ಬಂದಿ ದಯಾನಂದ ಮಾಲೆತ್ತಾರು ವಂದಿಸಿದರು. ಸಿಬ್ಬಂದಿಗಳಾದ ಪ್ರಮೋದ್ ಕುಮಾರ್ ರೈ, ಯತೀಶ್ ಕೊಂಬಕೆರೆ, ಜಯಶ್ರೀ ಪಾಲ್ತಾಡಿ ಕಾರ್ಯಕ್ರಮದಲ್ಲಿ ಸಹಕರಿಸಿದರು.