ಪುತ್ತೂರು: ಸವಣೂರು ಮೆದು ಮನೆಯಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಜ. ೧೪ ರಂದು ಆರಂಭಗೊಂಡಿತು.
ಜ. 14 ರಂದು ಬೆಳಿಗ್ಗೆ ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಕಾರ್‍ಯಕ್ರಮ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಕುಟುಂಬ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ಸತ್ಯದೇವತೆ ಮತ್ತು ಧರ್ಮದೈವ ಮಲರಾಯಿ ನೇಮೋತ್ಸವ ನಡೆಯಿತು.
ಜ. 15 ರಂದು ಬೆಳಿಗ್ಗೆ ಪಿಲಿಭೂತ, ಪಂಜುರ್ಲಿ,ರುದ್ರ ಚಾಮುಂಡಿ ಮತ್ತು ಶಿರಾಡಿ ದೈವಗಳಿಗೆ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ್ ಸುಳ್ಯ, ಪ್ರಮುಖರಾದ ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಜಗದೀಶ್ ಅಧಿಕಾರಿ ಮೂಡಬಿದಿರೆ, ಬೂಡಿಯಾರ್ ರಾಧಾಕೃಷ್ಣ ರೈ, ಸವಣೂರು ಕೆ.ಸೀತಾರಾಮ ರೈ, ಸವಣೂರು ಎನ್.ಸುಂದರ ರೈ, ಸತೀಶ್ ಕುಮಾರ್ ಕೆಡೆಂಜಿ, ರಾಜ್‌ದೀಪಕ್ ಜೈನ್ ಕುದ್ಮಾರುಗುತ್ತು, ವೆಂಕಟ್ರಮಣ ಭಟ್ ದೇರ್ಕಾಜೆ, ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮ್‌ದಾಸ್ ಗೌಡ ನೆಲ್ಲಿಕಟ್ಟೆ, ಬಾಲಕೃಷ್ಣ ಬಾಣಿಜಾಲು ಸಹಿತ ಸಾವಿರಾರು ಮಂದಿ ಭಾಗವಹಿಸಿದರು. ಪ್ರಭಾಚಂದ್ರ ಮೆದು, ಪೂವಣಿ ಗೌಡ ಮೆದು, ಗಿರಿಧರ್ ಗೌಡ ಮೆದು, ದಿನೇಶ್ ಮೆದು, ಚಿದಾನಂದ ಮೆದು, ಚಂದ್ರಶೇಖರ್ ಮೆದು, ಮೋಹನ್ ಮೆದು, ಪ್ರೇಮಚಂದ್ರ ಮೆದು, ಗಣೇಶ್ ಮೆದು, ನವೀನ್ ಮೆದು, ಯತೀಶ್ ಮೆದು, ಸತೀಶ್ ಮೆದು, ಚೇತನ್ ಮೆದು, ತೇಜಕುಮಾರ್ ಕಲ್ಮಕಾರು, ಸುಧೀರ್ ಮಡಿಕೇರಿ ಮತ್ತು ಮೆದು ಮನೆ ಕುಟುಂಬಸ್ಥರು ಅತಿಥಿಗಳನ್ನು ಗೌರವಿಸಿದರು.