ಪುತ್ತೂರು: ಬಯಲು ಕಸಮುಕ್ತ ಗ್ರಾಮ ಅಭಿಯಾನ -2022 ಪ್ರಯುಕ್ತ ಬನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಎ.6ರಂದು ನಡೆಸಲಾಯಿತು.
ಕೆಮ್ಮಾಯಿಂದ ದಾರಂದಕುಕ್ಕು ತನಕ ರಸ್ತೆ ಬದಿಯಲ್ಲಿ ಕಸ ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ಜಯ ಎ, ನೋಡೆಲ್ ಅಬಕಾರಿ ಕೃಷಿ ಇಲಾಖೆಯ ಭರಮಣ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ ಉಪಾಧ್ಯಕ್ಷೆ ಗೀತಾ ಕೊಡಂಗೆ, ಸದಸ್ಯರಾದ ತಿಮ್ಮಪ್ಪ ಪೂಜಾರಿ, ಶೀನಪ್ಪ ಕುಲಾಲ್, ಸ್ಮಿತಾ, ರಾಘವೇಂದ್ರ ಗೌಡ, ಅಂಗನವಾಡಿ ಕಾರ್ಯಕರ್ತೆಯರಾದ ಅರುಣಾ ಬೀರಿಗ, ಅರುಣಾ ಬೀರ‍್ನಹಿತ್ಲು, ಭಾರತಿ ಗುಂಡಿಜಾಲು, ರೇಖಾ ಕಜೆ, ಆಶಾ ಕಾರ್ಯಕರ್ತೆಯರಾದ ಸಂಧ್ಯಾ, ಚಂದ್ರಾವತಿ, ಪದ್ಮಾವತಿ, ಸಂಜೀವಿನಿ ಒಕ್ಕೂಟದ ಎಮ್.ಬಿ.ಕೆ ಅನಿತಾ, ಎಲ್.ಸಿ.ಆರ್.ಎಫ್‌ಗಳಾದ ಧನಲಕ್ಷ್ಮೀ, ಭ್ಯವ್ಯ, ಬೀರ‍್ನಹಿತ್ಲು ಶಾಲೆಯ ಸಹಶಿಕ್ಷಕಿ ಶಶಿಕಲಾ, ಸಿಎಚ್‌ಒ ಸುಶ್ಮ, ಗ್ರಾಮಸ್ಥರಾದ ಕಾರ್ತಿಕ್ ಗೌಡ, ಚಂದ್ರಾಕ್ಷ, ಗ್ರಂಥಾಲಯ ಮೇಲ್ವಿಚಾರಕಿ ಮಮತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬನ್ನೂರು ಗ್ರಾ.ಪಂ ಲೆಕ್ಕ ಸಹಾಯಕಿ ಜಯಂತಿ ಸ್ವಾಗತಿಸಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಸಿಬ್ಬಂದಿಗಳಾದ ನಾರಾಯಣ ನಾಯ್ಕ, ರಮೇಶ್, ಸುನಂದ ಸಹಕರಿಸಿದರು.