ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಸೂಚಿಸಿದಂತೆ ದೇವಳದ ಆಗ್ನೇಯ ಭಾಗದಲ್ಲಿ ಸಪ್ತಋಷಿ ಯಾಗಶಾಲೆ ನಿರ್ಮಾಣವಾಗಿದ್ದು, ಎ.8ರಂದು ಅದರ ಪ್ರಾರಂಭೋತ್ಸವ ನಡೆಯಲಿದೆ. ಬೆಳಿಗೆ ಗಂಟೆ 9.18ಕ್ಕೆ ಗಣಪತಿ ಹವನದ ಮೂಲಕ ಯಾಗಶಾಲೆಯ ಪ್ರಾರಂಭೋತ್ಸವ ನಡೆಯಲಿದೆ. ಎ.10ರಿಂದ 11 ದಿನಗಳ ಕಾಲ ರುದ್ರಯಾಗ ಈ ಯಾಗಶಾಲೆಯಲ್ಲಿ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಅವರು ತಿಳಿಸಿದ್ದಾರೆ.