ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಜರುಗುವ ಸಂಪಾಜೆ ಯಕ್ಷೋತ್ಸವ 2022 ಕಾರ್ಯಕ್ರಮವು ಮಾ.12ರಂದು ಸಂಜೆ ಉದ್ಘಾಟನೆಗೊಂಡಿತು. ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ದೀಪಬೆಳಗಿಸಿ, ಯಕ್ಷೋತ್ಸವವನ್ನು ಉದ್ಘಾಟಿಸಿದರು. ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಅವರು ಡಾ. ಕೀಲಾರು ಸಂಸ್ಮರಣೆ ಕುರಿತು ಮಾತನಾಡಿ, ಶುಭಹಾರೈಸಿದರು. ಪ್ರಸಿದ್ಧ ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ ಅವರು ಅಭಿನಂದನಾ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಮೇಳದ ಅನುಭವೀ ವ್ಯವಸ್ಥಾಪಕ ದಿವಾಕರ ಕಾರಂತ ಹಾಗೂ ಪ್ರಸಿದ್ದ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರಿಗೆ ಸಚ್ಚಿದಾನಂದ ಸ್ವಾಮೀಜಿಯವರು ಸಂಪಾಜೆ ಯಕ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ದಿವಾಕರ ಕಾರಂತ ಹಾಗೂ ಪೆರ್ಲ ಜಗನ್ನಾಥ ಶೆಟ್ಟಿ ಅವರು ತಮ್ಮ ಯಕ್ಷಗಾನದ ಕೊಡುಗೆಯ ಕುರಿತು ಮಾತನಾಡಿ, ಕೃತಜ್ಞತೆ ಸಲ್ಲಿಸಿದರು. ಎಂ.ಜಿ. ಮುರಳಿ ಸ್ವಾಗತಿಸಿದರು.