ಉಪ್ಪಿನಂಗಡಿ: ನ್ಯಾಷನಲ್ ವುಮೆನ್ಸ್ ಫ್ರಂಟ್ ಉಪ್ಪಿನಂಗಡಿ ವಲಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾ. ೬ರಂದು ಹಿರ್ತಡ್ಕ ಸರ್ಕಾರಿ ಶಾಲೆಯಲ್ಲಿ ಜರಗಿತು.
ವಲಯ ಅಧ್ಯಕ್ಷೆ ಸಾಜಿದಾ ನೆಲ್ಯಾಡಿ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಝರೀನಾ ಇಕ್ಬಾಲ್ ಉದ್ಘಾಟಿಸಿದರು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಗಾಯತ್ರಿ ಆರೋಗ್ಯ ಮಾಹಿತಿ ನೀಡಿದರು. ಉಪ್ಪಿನಂಗಡಿಯ ವೈದ್ಯರಾದ ನಾಝಿರಾ ಮತ್ತು ಆಯಿಷಾ ಆರೋಗ್ಯ ತಪಾಸಣೆ ನಡೆಸಿದರು. ಮಮ್ತಾಝ್ ಸ್ವಾಗತಿಸಿ, ವಂದಿಸಿದರು.