- ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ನೈಜತೆಯನ್ನು ಅನಾವರಣಗೊಳಿಸಿ ಚಲನಚಿತ್ರವನ್ನು ಎಲ್ಲರು ನೋಡಬೇಕು – ಸಂಜೀವ ಮಠಂದೂರು
ಪುತ್ತೂರು: ಹಿಂದೆ ರಾಜಕೀಯ ಪರಿಸ್ಥಿತಿಗಳು ಹೇಗಿತ್ತು ಮತ್ತು ರಾಜಕೀಯ ಹೇಗೆ ಗುಲಾಮಗಿರಿಗೆ ಒಳಗಾಗಿತ್ತು ಅನ್ನೋದನ್ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೋರಿಸುತ್ತಿದೆ. ಅದನ್ನು ಭಾರತೀಯ ನಾಗರಿಕರು ನೋಡಬೇಕು ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.
ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ಮಾ.೨೦ರಂದು ಬೆಳಗ್ಗಿನ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ದಿ ಕಾಶ್ಮೀರಿ ಫೈಲ್ಸ್ ಚಲನಚಿತ್ರವನ್ನು ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಆರಂಭದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಳಿಕ ಅವರು ಮಾತನಾಡಿ ‘ಕಾಶ್ಮೀರ್ ಫೈಲ್ಸ್’ ಕಾಶ್ಮೀರದ ಸತ್ಯ ಘಟನೆಗಳ ಆಧಾರಿತ ಸಿನಿಮಾ. ಕಾಶ್ಮೀರ ಪಂಡಿತರ ಕಷ್ಟದ ದಿನಗಳನ್ನು ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಸುಧೀರ್ಘ ಅವಧಿ ಬಳಿಕ ಆಗಿದೆ. ನಾಗರಿಕ ಬಂದುಗಳು ಚಲನಚಿತ್ರ ನೋಡುವ ಮೂಲಕ ಜಿಹಾದಿ ಬಗ್ಗೆ ಜಾಗೃತಿ ಗೊಳ್ಳಬೇಕು ಎಂದ ಅವರು ಚಲನ ಚಿತ್ರವನ್ನು ನಮ್ಮ ಕಾರ್ಯಕರ್ತರು ವೀಕ್ಷಣೆ ಮಾಡಬೇಕೆಂದು ಇವತ್ತು ಉಚಿತವಾಗಿ ಟಿಕೇಟ್ ಅವಕಾಶ ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸೇರಿದಂತೆ ಮಂಡಲದ ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಚಲನ ಚಿತ್ರ ವೀಕ್ಷಣೆ ಮಾಡಿದರು.