ವನ-ಜನ-ವನ್ಯ ಇವು ಸಮತೋಲದಲ್ಲಿರುವುದೇ ಪೃಕೃತಿ: ಮಠಂದೂರು
ಪುತ್ತೂರು; ಪೃಕೃತ್ತಿಯಿಂದರೆ ಎಲ್ಲವುಗಳನ್ನು ಒಳಗೊಂಡ ಒಂದು ಪ್ರಪ್ರಂಚ, ಇದರಲ್ಲಿ ವನ, -ಜನ ಮತ್ತು ವನ್ಯ ಇವು ಸಮತೋಲದಲ್ಲಿಯೇ ಸಾಗಬೇಕು ಆಗ ಮಾತ್ರ ಅದು ಪೃಕೃತಿ ಎನಿಸಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ ಮೇರಿ ದೇವಾಸಿಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕರಿಗಳ ಸಂಘ ಮಂಗಳೂರು ವಿಭಾಗ ಇದರ ವಾರ್ಷಿಕ ಮಹಾಸಭೆ ಮತ್ತು ಡೈರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪೃಕೃತಿ ಮುನಿದರೆ ಅಪಾಯವಿದೆ, ಒಲಿದರೆ ನಾವು ಧನ್ಯರಾಗುತ್ತೇವೆ, ಇಂದಿನ ಐಶಾರಾಮಿ ಜೀವನದ ನಡುವ ಎ ಕಾಡುಗಳ ನಾಶವಾಗುತ್ತಿದೆ, ಪರಿಣಾಮ ಆಹಾರಕ್ಕಾಗಿ ವನ್ಯಮೃಗಗಳು ಜನವಾಸವನ್ನು ಅಕ್ರಮಿಸುತ್ತಿದೆ ಇದಕ್ಕೆ ನಾವೇ ಕಾರಣಕರ್ತರಾಗಿದ್ದೇವೆ. ಯಥೇಚ್ಚವಾಗಿ ಕಾಡುಗಳಿದ್ದಲ್ಲಿ, ಸುಂದರ ಪರಿಸರ ಇದ್ದಲ್ಲಿ ಸಾಂಕ್ರಾಮಿಕ ರೋಗಗಳು ಉಂಟಾಗುವುದಿಲ್ಲ. ಪ್ರತೀಯೊಂದು ಇಲಾಖೆಯೂ ಜನರ ವಿಶ್ವಾಸ ಗಳಿಸುವಲ್ಲಿ ಮೊದಲ ಆಧ್ಯತೆ ನೀಡಬೇಕು. ಜನತೆ ಇಲಾಖೆಯ ಮೇಲಿನ ವಿಶ್ವಾಸ ಕಳೆದುಕೊಂಡರೆ ಅದು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸಕ್ಕೆ ಕೊರತೆಯುಂಟಾಗುತ್ತದೆ. ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಪ್ರತೀಯೊಂದು ಇಲಾಖೆಯೂ ಹಮ್ಮಿಕೊಳ್ಳುವ ಮೂಲಕ ಜನಸ್ನೇಹಿಯಾಗಬೇಕು. ಕಾಡು ಸಂರಕ್ಷಿಸುವಲ್ಲಿ ನಾವು ಪ್ರತೀಯೊಬ್ಬರೂ ಮುತುವರ್ಜಿವಹಿಸಬೇಕು ಎಂದು ಹೇಳಿದರು.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್‌ಕುಮಾರ್ ವೈ ಕೆ ಮಾತನಾಡಿ ಅರಣ್ಯ ಇಲಾಖೆಯ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಕಾಡನ್ನೊಳಗೊಂಡ ಪರಿಸರದಿಂದ ಮಾತ್ರ ನಾವು ಪೃಕೃತ್ತಿಯ ಸಮತೋಲವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ, ಉಪ ವಮಯ ಅರಣ್ಯಾಧಿಕಾರಿಗಳಿಂದ ಗ್ರಾಮೀಣ ಭಾಗದಲ್ಲಿ ಕಾಡುಗಳನ್ನು ಬೆಳೆಸಿ ಉಳಿಸುವ ಕಾರ್ಯಕ್ಕಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು.
ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಮಾತನಾಡಿ ಅರಣ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ , ಕಾಡುಪ್ರಾಣಿಗಳ ಆಹಾರಕ್ಕಾಗಿ ಹಲಸಿನ ಮರವನ್ನು ನೆಡುವ ಮೂಲಕ ಪರಿಸರ ಪ್ರೇಮಿಯಾದ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಪುತ್ತೂರು ಉಪವಿಭಾಗ ಸಯಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ ಪಿ ಕಾರ್ಯಪ್ಪ ಮಾತನಾಡಿ ಇಲಾಖೆಗಳಲ್ಲಿ ಸಿಬಂದಿಗಳ ಕೊರತೆಇದೆ, ವೇತನ ತಾರತಮ್ಯವೂ ಇದೆ. ವೇತನ ತಾರತಮ್ಯವನ್ನು ಪರಿಹರಿಸುವಂತೆ ಹಲವು ವರ್ಷಗಳ ಮುಂದೆ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದು ಈಡೇರಿಲ್ಲ, ಸಿಬಂದಿಗಳ ಸೌಲಭ್ಯವನ್ನು ಹೆಚ್ಚಿಸುವಂತೆ ಶಾಸಕರಿಗೆ ಮನವಿ ಮಾಡಿದರು.ಉಡುಪಿ ಅರಣ್ಯ ಸಂಛಾರಿದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ ಮಾತನಾಡಿ ಇಲಾಖೆಯಲ್ಲಿ ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕರ ಕೊರತೆ ಇದೆ ಇದನ್ನು ಬಗೆಹರಿಸಬೇಕಿದೆ. ಅರಣ್ಯ ಇಲಾಖೆಯ ಎಲ್ಲಾ ಸಿಬಂದಿಗಳು ಸಾರ್ವಜನಿಕರ ಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಳ್ಳುವ ಮೂಲಕ ಅವರಲ್ಲಿ ಪರಿಸರದ ಬಗ್ಗೆ ಮುತುವರ್ಜಿವಹಿಸುವಂತೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಸಂತೋಷ್ ರೈ ಕೆ ಮಾತನಾಡಿ ನಇಲಾಖೆಯಲ್ಲಿ ಸಿಬಂದಿಗಳ ಕೊರತೆ ಇದೆ. ಇಲಾಖೆಯ ಸಇಬಂದಿಗಳಿಗೆ ಭದ್ರತೆಯನ್ನು ಸರಕಾರ ನೀಡಬೇಕು, ಇಲಾಖೆಗೆಂದೇ ಸರಕಾರ ಪ್ರತ್ಯೇಕ ವೆಟರ್ನರಿ ವೈದ್ಯರನ್ನು ನೇಮಿಸಬೇಕು, ಶಾಸಕರು ಅಥವಾ ಸರಕಾರ ಆರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆಯನ್ನು ಏರ್ಪಡಿಸಿ ಇಲಾಖೆಯಲ್ಲಿನ ಸೇವೆಗೆ ಇನ್ನಷ್ಟು ಭದ್ರತೆಯನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಕರ್ನಾಟಕ ಸರಕಾರಿ ನೌಕರರ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ , ಬಲ್ನಾಡು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ಶುಭ ಹಾರೈಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರೈ ಬಿ ಟಿ ಸ್ವಾಗತಿಸಿದರು.ಉಪಾಧ್ಯಕ್ಷರಾದ ಕುಮಾರಸ್ವಾಮಿ ವಂದಿಸಿದರು. ಲಿಟ್ಲ್ ಫಲ್ವರ್ ಶಾಲೆಯ ಧೈಹಿಕ ಶಿಕ್ಷಕ ಭಾಲಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ೨೦೨೨ ರ ದಿನಚರಿಯನ್ನು ಶಾಸಕರು ಬಿಡುಗಡೆ ಮಾಡಿದರು. ಉಪವಲಯ ಅರಣ್ಯಾಧಿಕಾರಿಗಳಿಗೆ ಜಾಕೆಟ್ ಮತ್ತು ಶೂ ವಿತರಣೆ ಮಾಡಲಾಯಿತು.