ನೆಮ್ಮದಿ ವೆಲ್ನೆಸ್ ಸೆಂಟರ್ ವತಿಯಿಂದ 100 ನೇ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಉದ್ಘಾಟನೆ

0

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಪ್ರಾರಂಭಗೊಂಡಿರುವ ಶಿಬಿರ…
ಆರಂಭದ ದಿನದಿಂದಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ , ಭಾಗವಹಿಸಿ , ಶಿಬಿರದ ಲಾಭ ಪಡೆದುಕೊಂಡ ಜನತೆ…

ಪುತ್ತೂರು : ನೆಮ್ಮದಿ ವೆಲ್ನೆಸ್ ಸೆಂಟರ್ ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಇದರ ಜಂಟಿ ಆಶ್ರಯದಲ್ಲಿ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮಹಾಲಿಂಗೇಶ್ವರ ಸಭಾಂಗಣದಲ್ಲಿ ಪ್ರಾರಂಭಗೊಂಡಿತ್ತು. ಶಿಬಿರ ಉದ್ಘಾಟಿಸಿ ಮಾತನಾಡಿದ ದೇವಾಲಯದ ವ್ಯವಸ್ಥಾಪನ‌ ಸಮಿತಿ ಸದಸ್ಯ ಮಹಾಬಲ ರೈ ಒಳತ್ತಡ್ಕ, 100ನೇ ಶಿಬಿರ ಉದ್ಘಾಟನೆಗೊಂಡಿದೆ. ಶಿಬರಗಳನ್ನು ಆಯೋಜಿಸಬೇಕೆಂದರೆ ಜನರ ಸಮಸ್ಯೆಯನ್ನು ಅರಿತಿರಬೇಕು. ಸಾಲ್ಯಾನ್ ಬಾಕಿಲಗುತ್ತು ಅವರು ಜನರ ಸಮಸ್ಯೆಗಳನ್ನು ಅರಿತಿದ್ದರಿಂದ 99 ಶಿಬಿರಗಳನ್ನು ಯಶಸ್ವಿಯಾಗಿ ನೆರವೇರಿಸಿ 100ನೇ ಶಿಬಿರವನ್ನು ಆಯೋಜನೆ ಮಾಡಿದ್ದಾರೆ. ಅವರಿಂದ ಇನ್ನಷ್ಟೂ ಶಿಬಿರಗಳು ಆಯೋಜಿಸುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.


ನೆಮ್ಮದಿ ವೆಲ್ ನೆಸ್ ಸೆಂಟರ್ ಮಾಲಕ ಕೆ.ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ಮಾತನಾಡಿ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ನಾನು ಇಂತಹ ಶಿಬಿರಗಳನ್ನು ಆಯೋಜಿಸುತ್ತೇನೆಯೆಂದೂ ಭಾವಿಸಿರಲಿಲ್ಲ. ಈ ವರೆಗೆ ಸಾವಿರಾರು ಮಂದಿಗೆ ಶಿಬಿರಗಳಲ್ಲಿ ಉಚಿತವಾಗಿ ಥೆರಪಿ ಮಾಡಲಾಗಿದೆ ಎಂದು ಹೇಳಿದ ಅವರು ,
ಈ ಥೆರಪಿ ಪಡೆಯುವ ಪ್ರಾರಂಭದ ಕೆಲವು ದಿನಗಳಲ್ಲಿ ವಾಂತಿ, ಜ್ವರ, ನೋವು ಹೆಚ್ಚಳ ಇತ್ಯಾದಿ ಸಮಸ್ಯೆಗಳು ಕಂಡುಬರಬಹುದು. ಆದರೆ ಇದನ್ನು ನಿರಂತರವಾಗಿ ಮಾಡುತ್ತಾ ಹೋದಂತೆ ಅವೆಲ್ಲವೂ ಕಡಿಮೆಯಾಗುತ್ತದೆಯೆಂದರು. ಯಾವುದೇ ಔಷಧಿ‌ ಇಲ್ಲದೇಯೆ ವೆರಿಕೋಸ್, ಮಂಡಿ ನೋವು, ಸ್ಕಿನ್ ಪ್ರಾಬ್ಲೆಂ, ಲಿವರ್ ಸಮಸ್ಯೆ, ಆನೆಕಾಲು ರೋಗ, ಪಾದ ಉರಿ, ಕಾಲಿನಲ್ಲಿ ಆನಿ, ಬ್ಯಾಲೆನ್ಸ್ ತಪ್ಪುವುದು, ಪಿರಿಯಡ್ಸ್ ಸಮಸ್ಯೆ, ಕೀಲು ನೋವು, ತೂಕದಲ್ಲಿ ಇಳಿಕೆ, ನಿದ್ರಾ ಹೀನತೆ, ಅನಿಮೀಯಾ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆಲ್ಲಾ ಯಾವುದೇ ಔಷಧಿಯ ಅಗತ್ಯವಿಲ್ಲದೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿ , ಎಲ್ಲರೂ ಈ ಶಿಬಿರದ ಪ್ರಯೋಜನ ಪಡೆಯುವಂತೆ ವಿನಂತಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ಇಂತಹ ಶಿಬಿರಗಳ ಪ್ರಯೋಜನಗಳನ್ನು ಜನರು ಪಡೆಯಬಹುದು ಮತ್ತು ಶಿಬಿರದ ಸದುಪಯೋಗ ಪಡೆದುಕೊಂಡವರು ತಮ್ಮವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.


ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ನಾಯ್ಕ ಸಾಮೆತ್ತಡ್ಕ ಮಾತನಾಡಿ, ಮನುಷ್ಯನ ದೇಹಕ್ಕೆ ವ್ಯಾಯಾಮ ಅತ್ಯವಶ್ಯಕವಾಗಿದೆ. ಫೂಟ್ ಫಲ್ಸ್ ಥೆರಪಿ ರಕ್ತದ ಚಲನೆಗೆ ಪರಿಣಾಮಕಾರಿಯಾಗಿದ್ದು , ಈ ಥೆರಪಿಯನ್ನು ಯಾರು ಕೂಡ ಪಡೆದುಕೊಳ್ಳಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ , ಯಂತ್ರವನ್ನು ಖರೀದಿಸಿ ಮನೆಯಲ್ಲೇ ಥೆರಪಿ ಮಾಡಿಕೊಳ್ಳಬಹುದೆಂದು ಮಾಹಿತಿ ನೀಡಿದರು. ಕಾರ್ಯಕ್ರಮ ನಿರೂಪಿಸಿದ ಪತ್ರಕರ್ತ ವಿಷ್ಣುಗುಪ್ತ ಪುಣಚ್ಚ ಅವರು ಸ್ವಾಗತಿಸಿ, ಕೆ.ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ವಂದಿಸಿದರು. ಆ ಬಳಿಕ ಉಚಿತ ಫೂಟ್ ಪಲ್ಸ್ ಥೆರಪಿ ಪ್ರಾರಂಭಗೊಂಡಿತು , ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here