ಮಂಗಳೂರು: ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಇದರ ವತಿಯಿಂದ ಮೂಡುಶೆಡ್ಡೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 45,000ರೂ. ವೆಚ್ಚದ ಮಳೆ ಕೊಯ್ಲು ಯೋಜನೆಗೆ ಫೆ.1ರಂದು ಇನ್ನರ್ ವೀಲ್ -318 ರ ಜಿಲ್ಲಾ ಚೆರ್ಮನ್ ಕವಿತಾ ನಿಯತ್‌ರವರು ಕ್ಲಬ್ಬಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಅಧ್ಯಕ್ಷೆ ವಸಂತಿ ಕಾಮತ್, ಕಾರ್ಯದರ್ಶಿ ಗೀತಾ ಬಿ ರೈ, ಜಿಲ್ಲಾ ಎಡಿಟರ್ ರಜನಿ ಭಟ್, ಕ್ಲಬ್ಬಿನ ಖಜಾಂಜಿ ಶಿವಾನಿ ಬಾಳಿಗಾ, ಕ್ಲಬ್ ಎಡಿಟರ್ ಸೀಮಾ, ಪಿ.ಡಿ.ಸಿ.ಗಳಾದ ಮಿತ್ರಾ ಪ್ರಭು, ಶಮೀಮ್ ಕುನಿಲ್, ಮಾಜಿ ಅಧ್ಯಕ್ಷೆ ಶೋಭಾ ಭಟ್, ಜೊತೆ ಕಾರ್ಯದರ್ಶಿ ಅರುಣಾ ಜಲನ್ ಹಾಗೂ ಸವಿತಾ ಶೆಟ್ಟಿ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರಾದ ಸುಬ್ರಾಯ ಪೈ, ಶಾಲೆಯ ಶಿಕ್ಷಕರೂ ಸೇರಿದಂತೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿನಾಯಕ, ಉಪಾಧ್ಯಕ್ಷೆಯಾದ ರಕ್ಷಿತಾ ಭಟ್, ಪ್ರೌಢಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಯರಾಂ ಕೊಟ್ಟಾರಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಭಾಸ್ಕರ, ಹಾಗೂ ಇಂಜಿನಿಯರ್ ವಿಜಯ್ ಶೆಣೈ ಉಪಸ್ಥಿತರಿದ್ದರು.