ಗಲ್ಫ್ ಟೂರ್‍ಸ್ ಆಂಡ್ ಟ್ರಾವೆಲ್ಸ್: 2023 ನೇ ಹಜ್‌ಯಾತ್ರೆ ಪಾಸ್‌ಪೋರ್ಟು ಸ್ವೀಕಾರ ಸಮಾರಂಭ

0

ಅವಕಾಶ ಇದ್ದವರು ಪವಿತ್ರ ಹಜ್‌ಯಾತ್ರೆಯಿಂದ ನುಣುಚಿಕೊಳ್ಳಬೇಡಿ: ಪುತ್ತೂರು ತಂಙಳ್

ಪುತ್ತೂರು: ಆರ್ಥಿಕವಾಗಿ, ಆರೋಗ್ಯವಾಗಿ ಸದೃಡವಾಗಿರುವ ಪ್ರತೀಯೊಬ್ಬರಿಗೂ ಹಜ್ ಕರ್ಮ ಕಡ್ಡಾಯವಾಗಿದೆ ಅದರಿಂದ ನುಣುಚಿಕೊಳ್ಳಲು ಯಾರಿಗೂ ಅವಕಾಶವಿಲ್ಲ, ನುಣುಚಿಕೊಂಡದ್ದೇ ಆದಲ್ಲಿ ಅದು ಅಲ್ಲಾಹನ ಆಜ್ಞೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅಸ್ಸಯ್ಯದ್ ಅಹ್ಮದ್ಪೂಕೋಯಾ ತಂಙಳ್ ಪುತ್ತೂರು ರವರು ಹೇಳಿದರು.


ಅವರು ಪುತ್ತೂರಿನ ಪ್ರತಿಷ್ಠಿತ ಗಲ್ಫ್ ಟೂರ್ಸ್ ಆಂಡ್ ಟ್ರಾವೆಲ್ಸ್ ಇದರ ವತಿಯಿಂದ 2023 ನೇ ಸಾಲಿನ ಪವಿತ್ರ ಹಜ್‌ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಂದ ಪಾಸ್‌ಪೋರ್ಟು ಸ್ವೀಕರಿಸಿ ದುವಾ ನೆರವೇರಿಸಿ ಮಾತನಾಡಿದರು.


ಪುತ್ತೂರು ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾರಂಭವನ್ನು ಉದ್ಘಾಟಿಸಿದ ತಂಙಳ್‌ರವರು ಹಜ್‌ಕರ್ಮ ಇಸ್ಲಾಮಿನ ಕಡ್ಡಾಯ ಆರಾಧನೆಯಾಗಿದೆ. ಈ ಆರಾಧನೆಗೆ ಅಲ್ಲಾಹನು ಕೆಲವೊಂದು ನಿಬಂಧನೆಗಳನ್ನು ವಿಧಿಸಿದ್ದಾನೆ. ಆರ್ಥಿಕವಾಗಿ, ಆರೋಗ್ಯವಾಗಿ ಶಕ್ತನಾಗಿರಬೇಕಾಗುತ್ತದೆ. ಬಹುತೇಕ ಮಂದಿ ವಯಸ್ಸಾದವರು ಹಜ್‌ಯಾತ್ರೆ ಕೈಗೊಳ್ಳುತ್ತಾರೆ. ಮುದಿ ಪ್ರಾಯವಾದಾಗ ಮಾತ್ರ ಹಜ್‌ಯಾತ್ರೆ ಕೈಗೊಳ್ಳಬೇಕು ಎಂಬ ನಿಯಮ ಇಸ್ಲಾಮಿನಲ್ಲಿ ಇಲ್ಲ. ತನ್ನ ಕುಟುಂಬವನ್ನು ಸಲಹುವ ಸಂಪತ್ತು ಉಳಿಸಿ ಬಾಕಿ ಇದ್ದರೆ ಆ ಸಂಪತ್ತನ್ನು ತನ್ನ ಯಾತ್ರೆಗೆ ಬಳಸಬೇಕು. ಹಣ ಇದ್ದರೆ ಅದನ್ನು ಕೂಡಿಟ್ಟು ಮುಂದಿನ ತಲೆಮಾರಿಗೆ ಶೇಖರಿಸಿಡುವ ಬದಲು ಆ ಸಂಪತ್ತನ್ನು ಬಳಸಿ ತನ್ನ ಕಡ್ಡಾಯ ಕರ್ಮವನ್ನು ತೀರಸಲು ಎಲ್ಲರೂ ಕಾರ್ಯಪೃವೃತ್ತರಾಗಬೇಕು. ಪವಿತ್ರ ಮಕ್ಕಾ ಮತ್ತು ಮದೀನಾಗೆ ತೆರಳುವ ಸೌಭಾಗ್ಯ ಎಲ್ಲರಿಗೂ ಕೂಡಿ ಬರುವುದಿಲ್ಲ. ಅವಕಾಶ ಇದ್ದವರು ಅದರಿಂದ ಜಾರಿಕೊಳ್ಳಲೇಬಾರದು ಎಂದು ಹೇಳಿದರು. ಹಜ್‌ಗೆ ಪ್ರತಿಫಲವಾಗಿ ಅಲ್ಲಾಹನು ಸ್ವರ್ಗವನ್ನೇ ವಾಗ್ದಾನ ಮಾಡಿರುವಾಗ ನಾವು ಆ ಕರ್ಮವನ್ನು ಮಾಡಲು ಹಿಂಜರಿಯಬಾರದು ಎಂದು ಹೇಳಿದರು. ಗಲ್ಫ್ ಟೂರ್‍ಸ್ ಮೂಲಕ ಪ್ರತೀ ವರ್ಷ ಹಜ್ ಮತ್ತು ಪ್ರತೀ ತಿಂಗಳು ಉಮ್ರಾ ಯಾತ್ರೆ ಹೊರಡುತ್ತಿದ್ದು ಯತ್ರಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಅಲ್ಲಾಹನು ಪಾಪಗಳನ್ನು ಮನ್ನಿಸುತ್ತಾನೆ; ಸಿರಾಜುದ್ದೀನ್ ಫೈಝಿ

ಹಜ್ ಅಥವಾ ಉಮ್ರಾ ಯಾತ್ರೆ ಏನು ಎಂಬುದು ಮತ್ತು ಎರಡು ಸ್ಥಳಗಳ ಪಾವಿತ್ರ್ಯತೆಯನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಜೀವನದಲ್ಲಿ ಒಂದು ಬಾರಿಯಾದರೂ ಪವಿತ್ರ ಮಕ್ಕಾ ಮತ್ತು ಮದೀನಾ ಕಾಣಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ ಆದರೆ ಕೆಲವರು ತನ್ನ ತಿಳುವಳಿಕೆಯ ಕೊರತೆಯಿಂದಲೇ ಯಾತ್ರೆಯಿಂದ ದೂರ ಉಳಿಯುತ್ತಾರೆ ಎಂದು ಗಲ್ಫ್ ಟೂರ್ರ್‍ ಆಂಡ್ ಟ್ರಾವೆಲ್ಸ್‌ನ ಅಮೀರ್ ಸಿರಾಜುದ್ದೀನ್ ಫೈಝಿ ಹೇಳಿದರು. ಗಲ್ಫ್ ಟೂರ್ರ್‍ಸ್ ಮೂಲಕ ಯಾತ್ರೆ ಕೈಗೊಳ್ಳುವ ಪ್ರತೀಯೊಬ್ಬ ಯಾತ್ರಾರ್ಥಿಯ ಜವಾಬ್ದರಿಯನ್ನು ಹೊತ್ತುಕೊಳ್ಳುತ್ತದೆ. ಸರಿಯಾದ ಕ್ರಮದಲ್ಲಿ ಹಜ್ ಮತ್ತು ಉಮ್ರಾ ಕೈಗೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ.ಈಗಾಗಲೇ ಸಂಸ್ಥೆಯಿಂದ ಸಾವಿರಾರು ಮಂದಿ ಉಮ್ರಾ ಯಾತ್ರೆ ಕೈಗೊಂಡಿದ್ದು ಹಜ್ ಯಾತ್ರೆಯಲ್ಲೂ ಭಾಗಿಯಾಗಿದ್ದಾರೆ. ಕೆಲವರು ಸಣ್ಣ ಪುಟ್ಟ ಆರ್ಥಿಕ ಉದ್ದೇಶಗಳನ್ನು ಮುಂದಿಟ್ಟು ಯಾತ್ರೆಯಿಂದ ದೂರ ಉಳಿಯುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ. ಆರೋಗ್ಯ ಇರುವ ಸಂದರ್ಭದಲ್ಲೇ ನಾವು ಯಾತ್ರೆಯನ್ನು ಕೈಗೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ಸೌಭಾಗ್ಯ ಕರುಣಿಸಲಿ: ಓಲೆಮುಂಡೋವು ಉಸ್ತಾದ್


ಮಕ್ಕಾ ಮತ್ತು ಮದೀನಾ ಕಾಣುವ ಸೌಭಾಗ್ಯ ಎಲ್ಲರಿಗೂ ಒದಗಿ ಬರಲಿ. ಉತ್ತಮ ಅಮೀರ್‌ರವರನ್ನೊಳಗೊಂಡ ಗಲ್ಫ್ ಟೂರ್‍ಸ್ ಮತ್ತು ಟ್ರಾವೆಲ್ಸ್ ಸಂಸ್ಥೆಯ ವತಿಯಿಂದ ನಡೆಯುವ ಈ ಬಾರಿಯ ಹಜ್‌ಯತ್ರೆ ಯಸಶ್ವಿಯಾಗಲಿ, ಅಲ್ಲಾಹನು ಮೆಚ್ಚುವ ರೀತಿಯಲ್ಲಿ ತನ್ನ ಕರ್ಮಗಳನ್ನು ನೆರವೇರಿಸಲು ಸರ್ವಶಕ್ತನು ಕರುಣಿಸಲಿ ಎಂದು ಹಿರಿಯ ಸುನ್ನಿ ವಿದ್ವಾಂತ ಓಲೆಮುಂಡೋವು ಮಹ್‌ಮೂದುಲ್ ಫೈಝಿ ಹೇಳಿದರು.


ಕೂರ್ನಡ್ಕ ಜುಮಾ ಮಸೀದಿ ಖತೀಬ್ ಉನೈಸ್ ಫೈಝಿ , ಅಬ್ಬಾಸ್ ದಾರಿಮಿ ಕೆಲಿಂಜ ರವರು ಸಂಧರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶರೀಫ್ ದಾರಿಮಿ ಅಡ್ಡೂರು, ಮುಕ್ರಾಂಪಾಡಿ ಖತೀಬ್ ಅಹ್ಮದ್ ಬಾಖವಿ, ಸೀರತ್ ಕಮಿಟಿ ಅಧ್ಯಕ್ಷರಾದ ಸುರಯ್ಯಾ ಖಾದರ್ ಹಾಜಿ, ಸುಳ್ಯ ಹಸನ್‌ಹಾಜಿ, ಬಲ್ನಾಡು ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ನಾಟೆಕಲ್, ಅಬ್ದುಲ್ ರಹಿಮಾನ್ ಆಝಾದ್ ದರ್ಬೆ, ಆಸಿಫ್ ಕಬಕ, ಹಸನ್ ಹಾಜಿ ಸಿಟಿ ಬಜಾರ್, ಪುತ್ತೂರು ಬದ್ರಿಯಾ ಮದ್ರಸ ಮುಅಲ್ಲಿಂ ಅಬ್ದುಲ್‌ರಹಿಮಾನ್ ಕುಂಬ್ರ ಉಪಸ್ಥಿತರಿದ್ದರು.


ಸಂಸ್ಥೆಯ ಮಾಲಕರಾದ ಸುಲೈಮಾನ್ ಹಾಜಿ ಅತಿಥಿಗಳನ್ನು ಸ್ವಾಗತಿಸಿದರು.ಗಲ್ಫ್ ಟೂರ್‍ಸ್ ಆಂಡ್ ಟ್ರಾವೆಲ್ಸ್ ಅಮೀರ್‌ನಝೀರ್ ಅಹ್ಮದ್ ಸಅದಿ ವಂದಿಸಿದರು. ಸಿಬಂದಿಗಳಾದ ನಾಝಿಂ , ಹಾಫಿಲ್ ಅರ್ಮಾನ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here