ಪುತ್ತೂರು: ಮಾಡನ್ನೂರು ಮಸೀದಿಯಲ್ಲಿ ವಾರಕ್ಕೊಮ್ಮೆ ನಡೆಸಿಕೊಂಡು ಬರುವ ಸ್ವಲಾತ್ ಮಜ್ಲಿಸ್‌ನ ವಾರ್ಷಿಕೋತ್ಸವ ಫೆ.7ರಿಂದ ಫೆ.9ರ ವರೆಗೆ ಧಾರ್ಮಿಕ ಪ್ರವಚನದೊಂದಿಗೆ ಮಾಡನ್ನೂರು ಶಹೀದಿಯಾ ನಗರದಲ್ಲಿ ನಡೆಯಲಿದೆ.
ಫೆ.7ರಂದು ಮಗ್ರಿಬ್ ನಮಾಜಿನ ಬಳಿಕ ದರ್ಗಾ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಮತ ಪ್ರವಚನ ಕಾರ್ಯಕ್ರಮವನ್ನು ನೂರುಲ್ ಹುದಾ ಅಕಾಡೆಮಿಯ ಉಪಪ್ರಾಂಶುಪಾಲ ಸಯ್ಯದ್ ಬುರ್ಹಾನ್ ತಂಙಳ್ ಉದ್ಘಾಟಿಸಲಿದ್ದಾರೆ. ಸ್ಥಳೀಯ ಖತೀಬ್ ಸಿರಾಜುದ್ದೀನ್ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು ನೂರುಲ್ ಹುದಾದ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ಇಸ್ಮಾಯಿಲ್ ವಾಫಿ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ಫೆ.8ರಂದು ಸ್ಥಳೀಯ ಮದ್ರಸದ ಮುಖ್ಯೋಪಾಧ್ಯಾಯರು, ಮಸೀದಿಯ ಸಹಾಯಕ ಖತೀಬರೂ ಆದ ಅಮೀರ್ ಅರ್ಶದಿ ಪ್ರಾಸ್ತಾವಿಕ ಭಾಷಣ ನಡೆಸಲಿದ್ದು ಖ್ಯಾತ ಪ್ರಭಾಷಣಗಾರ ಅಬ್ದುಲ್ ಅಝೀಝ್ ದಾರಿಮಿ ಚೆರುಪ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಫೆ.9ರಂದು ಮಗ್ರಿಬ್ ನಮಾಜಿನ ಬಳಿಕ ಸ್ವಲಾತ್ ಮಜ್ಲಿಸ್ ನಡೆಯಲಿದ್ದು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ನೇತೃತ್ವ ನೀಡಲಿದ್ದಾರೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ನೂರುಲ್ ಹುದಾದ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಪ್ರಾಸ್ತಾವಿಕ ಭಾಷಣ ನಡೆಸಲಿದ್ದು ಖ್ಯಾತ ಮೋಟಿವೇಶನ್ ಭಾಷಣಗಾರ ಅಬ್ದುಲ್ ಸಲೀಂ ವಾಫಿ ಕೋಝಿಕ್ಕೋಡ್ ಅವರಿದ ಮತ ಪ್ರವಚನ ನಡೆಯಲಿದೆ.
ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ ಅಧ್ಯಕ್ಷತೆ ವಹಿಸಲಿದ್ದು ಹಲವು ಉಲಮಾ, ಉಮರಾ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೊನೆಯಲ್ಲಿ ಅನ್ನದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.