ಕಬಕ: ಕಬಕ ಸರಕಾರಿ ಪಿ.ಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತಿದ್ದ ಪ್ರೇಮಲತಾ ರೈ ಎಂ.ರವರು ಜ.31ರಂದು ವಯೋನಿವೃತ್ತಿ ಹೊಂದಿದ್ದು ಇವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಟಿ.ಎಸ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಲತಾ ರೈ ಎಂ. ದಂಪತಿಯನ್ನು ಶಾಲು, ಸ್ಮರಣಿಕೆ, ಅಭಿನಂದನಾಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿದಾಯಕೂಟ ಸಮಾರಂಭ ನಡೆಯಿತು. ಕಬಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಕಾಲೇಜಿನ ಶಿಕ್ಷಣತಜ್ಞ ರುಕ್ಮಯ ಗೌಡ, ಕಬಕ ಹಿ.ಪ್ರಾ ಶಾಲೆಯ ನಿವೃತ್ತ ಮುಖ್ಯಗುರು ಸುಲೋಚನ, ನಿವೃತ್ತಿಯಾದ ಆರೋಗ್ಯ ಇಲಾಖಾ ಸಹಾಯಕಿ ಕಸ್ತೂರಿ, ಶ್ರೀನಿವಾಸ ಬಡೆಕ್ಕಿಲಾಯ, ವನಿತಾ, ಚಂದ್ರಹಾಸ ರೈ ಶುಭಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲೆ ಶ್ರೀಧರ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಜೇತ ವಿ.ಬಿ. ವಂದಿಸಿದರು. ನಯನ ಕುಮಾರಿ ಇ. ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.