ಹೊಸಮಠ ಸಿ.ಎ ಬ್ಯಾಂಕಿನಲ್ಲಿ ಸಾಲಗಾರ ಸದಸ್ಯರ ಹಾಗೂ ಜಾಮೀನುದಾರರ ಹೊಣೆಗಾರಿಕೆ ಮಾಹಿತಿ ಕಾರ್ಯಕ್ರಮ

0

ಕಡಬ: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇದರ ವತಿಯಿಂದ ‘ಸಾಲಗಾರ ಸದಸ್ಯರ ಹಾಗೂ ಜಾಮೀನುದಾರರ ಹೊಣೆಗಾರಿಕೆ ಮತ್ತು ಭಾದ್ಯತೆಗಳ ಮಾಹಿತಿ ಫೆ.06ರಂದು ಸಂಘದ ಆವರಣದಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಬೆಳ್ಳಾರೆ ಶಾಖೆಯ ವ್ಯವಸ್ಥಾಪಕ ಸಂತೋಷ್ ಕುಮಾರ್ ಎಂ.ರವರು ಕಾರ್ಯಗಾರದಲ್ಲಿ ಸದಸ್ಯರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷ ಶಿವಪ್ರಸಾದ್ ಪುತ್ತಿಲ ಅಧ್ಯಕ್ಷತೆಯನ್ನು ವಹಿಸಿದ್ದರು.


ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಶಶಾಂಕ ಗೋಖಲೆ ಮಾರ್ಗದಮನೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಸಂಘದ ಮುಖ್ಯ ಕಾರ್ಯನಿರ್ವಾಹಕ ಸೋಮಸುಂದರ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಸಂಘದ ಸದಸ್ಯರು ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಆಡಳಿತ ಮಂಡಳಿ ಉಪಾಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ, ನಿರ್ದೇಶಕರಾದ ನೀಲಯ್ಯ ಬನಾರಿ, ಜಯಚಂದ್ರ ರೈ, ಪದ್ಮಯ್ಯ ಪೂಜಾರಿ, ಸೀತಾರಾಮ ಡಿ ಪಿ, ಶ್ರೀಮತಿ ಸೀತಮ್ಮ ಹಳ್ಳಿ, ಕುಶ ಕುಮಾರ್, ಜಗನ್ನಾಥ ಗುಂಡಿಜಾಲು, ಕುಕ್ಕ ನಾಡೋಳಿ, ಶ್ರೀಮತಿ ಸವಿತಾ ಸಿಜಿ, ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಆನಂದ ಗೌಡ, ಸಂಘದ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here