ಪುತ್ತೂರು: ಮೊಡಪ್ಪಾಡಿ ಗುತ್ತು ತರವಾಡು ಮನೆ ಮತ್ತು ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಜಠಾಧಾರಿ ಮಹಿಮೆ ಮತ್ತು ಪರಿವಾರ ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ. ೧೦ರಂದು ಆರಂಭಗೊಂಡಿತು.
ಫೆ. ೧೦ ರಂದು ಸಂಜೆ ಮಹಾಸುದರ್ಶನ ಹೋಮ, ಫೆ. ೧೧ ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನಾಗತಂಬಿಲ, ದೈವಗಳಿಗೆ ತಂಬಿಲ ಸೇವೆ ನಡೆದು ಶ್ರೀ ವೆಂಕಟರಮಣ ದೇವರ ಹರಿಸೇವೆ ಜರಗಿತು. ರಾತ್ರಿ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ಜಠಾಧಾರಿ ದೈವದ ಮಹಿಮೆ ನೆರವೇರಿತು.
ಫೆ. ೧೨ ರಂದು ಬೆಳಿಗ್ಗೆ ಪಂಜುರ್ಲಿ ದೈವದ ನೇಮ ನಡೆಯಿತು. ದೈವಸ್ಥಾನದ ಯಜಮಾನ ತಿಮ್ಮಪ್ಪ ರೈ ಮೊಡಪ್ಪಾಡಿ ಗುತ್ತು ಹಾಗೂ ಮೊಡಪ್ಪಾಡಿ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಊರ ಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡರು.