ಕೆದಂಬಾಡಿ ಯುವರಂಗ ವತಿಯಿಂದ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ್ಯಾಟ:ಕ್ರೀಡೆಯಲ್ಲಿಯೂ ಭಾರತ ಸಾಧನೆಯ ಹಾದಿಯಲ್ಲಿದೆ – ಮಠಂದೂರು

0

ಪುತ್ತೂರು: ಕೆದಂಬಾಡಿ ಯುವರಂಗ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಮತ್ತು ಪುತ್ತೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ ಇದರ ಸಹಭಾಗಿತ್ವದಲ್ಲಿ ೩ನೇ ವರ್ಷದ ಪುರುಷರ ೬೨ ಕೆ.ಜಿ. ವಿಭಾಗದ ಹೊನಲು ಬೆಳಕಿನ ಮ್ಯಾಟ್‌ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು ವಲಯ ಮಟ್ಟದ ಪುರುಷರ ಮ್ಯಾಟ್‌ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ ಮತ್ತು ಮನೋರಂಜನಾ ಕಾರ್ಯಕ್ರಮಗಳು ಕೆದಂಬಾಡಿ ಶಾಲಾ ಮೈದಾನದಲ್ಲಿ ಫೆ. ೧೧ ರಂದು ಸಂಜೆ ನಡೆಯಿತು.

ಪಂದ್ಯಾಟವನ್ನು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ʻಯಾವುದೇ ಕ್ಷೇತ್ರದಲ್ಲಿನ ಸಾಧನೆಯ ಆಧಾರದಲ್ಲಿ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಯುವಕ ಮಂಡಲಗಳು ಚಟುವಟಿಕೆಯಿಂದ ಇದ್ದಾಗ ಅಲ್ಲಿ ರಾಷ್ಟ್ರದ ಬಗ್ಗೆ ಚಿಂತನೆ ನಡೆಯುತ್ತದೆ. ಇದು ರಾಷ್ಟ್ರೋನ್ನತಿಗೆ ಕೊಂಡೊಯ್ಯುತ್ತದೆ. ಜಗತ್ತಿನಲ್ಲಿ ಭಾರತದ ಸ್ಥಾನಮಾನವನ್ನು ವಿಸ್ತರಿಸುವ ಕಾರ್ಯ ಯುವಜನತೆಯಿಂದ ಆಗುತ್ತಿದೆ. ಈ ಮೂಲಕ ಪ್ರಪಂಚದಲ್ಲಿ ಭಾರತವು ಕ್ರೀಡಾ ಕ್ಷೇತ್ರದಲ್ಲಿಯೂ ಸಾಧಕ ರಾಷ್ಟ್ರವಾಗುವ ಹಾದಿಯಲ್ಲಿದೆʼ ಎಂದು ಹೇಳಿ ಶುಭ ಹಾರೈಸಿದರು.

ಯುವರಂಗದ ಅಧ್ಯಕ್ಷ ನಿತೇಶ್‌ ರೈ ಕೋರಂಗ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ʻಕಳೆದ ೩೦ ವರ್ಷಗಳಿಂದ ವಿದ್ಯೆ ನಿಷ್ಠೆ ಮತ್ತು ಧ್ಯೇಯ ವನ್ನು ಇಟ್ಟುಕೊಂಡು ಸಾಂಸ್ಕೃತಿಕ, ಕ್ರೀಡೆ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಪಂದ್ಯಾಟದಲ್ಲಿ ಉಳಿದ ಹಣವನ್ನು ಇತರ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದೇವೆʼ ಎಂದ ಅವರು ಎರಡು ತಿಂಗಳಿನಿಂದ ನಿರಂತರ ಶ್ರಮ ವಹಿಸಿ ಪಂದ್ಯಾಟವನ್ನು ಯಶಸ್ವಿಗೊಳಿಸಿದ ಯುವರಂಗ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಹೇಳಿದರು.

ರಾಷ್ಟ್ರೀಯ ಕ್ರೀಡಾಪಟು, ನಿವೃತ್ತ ರೈಲ್ವೇ ಟಿಕೆಟ್ ಇನ್ಸ್‌ಪೆಕ್ಟರ್‌ ಚಂದ್ರಶೇಖರ ರೈ ನಡುಬೈಲು ರವರು ಮಾತನಾಡಿ ʻಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪೋಷಕರು ಹೆಚ್ಚು ಮುತುವರ್ಜಿ ವಹಿಸಬೇಕುʼ ಎಂದರು.

ಅಂಕಣ ಉದ್ಘಾಟಿಸಿದ ಉದ್ಯಮಿ ಬೆದ್ರುಮಾರ್‌ ಬಾಲಚಂದ್ರ ರೈ ರವರು ಮಾತನಾಡಿ ʻಪಂದ್ಯವನ್ನು ಕ್ರೀಡಾಪಟುವಾಗಿ ಚೈತನ್ಯದಾಯಕವಾಗಿ ಆಡಿʼ ಎಂದು ಕರೆ ನೀಡಿದರು.

ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ರತನ್‌ ರೈ ಕುಂಬ್ರ, ಅರಿಯಡ್ಕ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್‌ ರೈ ಅಮೈ, ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಅಧ್ಯಕ್ಷ ಬೆದ್ರುಮಾರ್‌ ಜೈಶಂಕರ ರೈ, ಕೆದಂಬಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಶೀರ್‌ ಬೂಡಿಯಾರ್‌, ಶ್ರೀ. ಕ್ಷೇ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆದಂಬಾಡಿ ಒಕ್ಕೂಟದ ಅಧ್ಯಕ್ಷ ಸೀತಾರಾಮ ಗೌಡ ಇದ್ಯಪೆ, ತಾಲೂಕು ನಲಿಕೆ ಸಂಘದ ಸ್ಥಾಪಕಾಧ್ಯಕ್ಷ ಚಂದ್ರ ನಲಿಕೆ ಇದ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.  ಕ್ರೀಡಾ ಕಾರ್ಯದರ್ಶಿ ರಕ್ಷಿತ್‌ ಗೌಡ ಇದ್ಯಪೆ, ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ್‌ ಬಾರಿಕೆ ವೇದಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ

ಕೃಷಿ ಮತ್ತು ಹೈನುಗಾರಿಕೆಯಲ್ಲಿ ಮುಂಡಾಳಗುತ್ತು ಸುರೇಶ್‌ ರೈ ಮಾನಿಪ್ಪಾಡಿ, ಯುವ ಉದ್ಯಮಿ ನೀಲಪ್ಪ ನಾಯ್ಕ ಅಜಕ್ಕುರಿ, ಕ್ರೀಡಾಕ್ಷೇತ್ರದಲ್ಲಿನ ಸಾಧಕ ಬಾಲಚಂದ್ರ ಕೋರಂಗರವರನ್ನು ಯುವರಂಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಯದೀಪ್‌ ರೈ ಕೋರಂಗ, ಅಕ್ಷತ್‌ ಇದ್ಯಪೆ, ಅಭಿಷೇಕ್‌ ಇದ್ಯಪೆ ಸನ್ಮಾನ ಪತ್ರ ವಾಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಬಶೀರ್‌ ಬೂಡಿಯಾರ್‌ ರವರನ್ನು ಗೌರವಿಸಲಾಯಿತು.

ಜೆರ್ಸಿ ಅನಾವರಣ:

ಉದ್ಯಮಿ ಅಕ್ಷಯ್‌ ರೈ ದಂಬೆಕಾನ ಕೊಡಮಾಡಿದ ಕ್ರೀಡಾಪಟುಗಳ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು.

ಯುವರಂಗದ ಸ್ಥಾಪಕಾಧ್ಯಕ್ಷ ಐ.ಸಿ. ಕೈಲಾಸ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಮೃತಿ ಇದ್ಯಪೆ ಮತ್ತು ಸಿಂಚನಾ ಇದ್ಯಪೆ  ಪ್ರಾರ್ಥಿಸಿದರು. ಪ್ರಶಾಂತ್‌ ಪೂಜಾರಿ, ಪ್ರ. ಕಾರ್ಯದರ್ಶಿ ಲಿಖಿತ್‌ ಗೌಡ ಇದ್ಯಪೆ, ಮಾಜಿ ಅಧ್ಯಕ್ಷ ವಿಜಯ ಕುಮಾರ್‌ ರೈ ಕೋರಂಗ, ಕಿರಣ್‌ ಬೋಳೋಡಿ, ಮಹೇಶ್‌ ಇದ್ಯಪೆ, ಪ್ರಜ್ವಲ್‌ ಗೌಡ ಕೆರೆಮೂಲೆ, ಪ್ರಶಾಂತ್‌ ಕೋಡಿಯಡ್ಕ, ನೇಮಣ್ಣ ಗೌಡ, ಪುನೀತ್‌ ಕೆ.ಎನ್‌. ಗೌಡ ಇದ್ಯಪೆ, ದೀಕ್ಷಿತ್‌ ಇದ್ಯಪೆ ಅತಿಥಿಗಳನ್ನು ಗೌರವಿಸಿದರು. ಯುವರಂಗದ ಸಂಚಾಲಕ ಕೃಷ್ಣಕುಮಾರ್‌ ಗೌಡ ಇದ್ಯಪೆ ಸ್ವಾಗತಿಸಿ, ರಕ್ಷಿತ್‌ ಇದ್ಯಪೆ ವಂದಿಸಿದರು. ಕಬಡ್ಡಿ ಪಂದ್ಯಾಟದ ವೀಕ್ಷಕ ವಿವರಣೆಗಾರ ಬಾಲಕೃಷ್ಣ ರೈ ಪೊರ್ದಾಳ್‌ ನಿರೂಪಿಸಿದರು.

ಫೆ. ೧೨ ರಂದು ಬೆಳಿಗ್ಗೆ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಿತು.

ಹುಟ್ಟುಹಬ್ಬ ಆಚರಣೆ

ಯುವರಂಗದ ಅಧ್ಯಕ್ಷ ನಿತೇಶ್‌ ರೈ ಕೋರಂಗವರ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸುವುದರ ಮೂಲಕ ಆಚರಿಸಲಾಯಿತು.

ಸಮಾರೋಪ ಸಮಾರಂಭ ಬಹುಮಾನ ವಿತರಣೆ

ಫೆ. ೧೨ ರಂದು ಬೆಳಿಗ್ಗೆ ನಡೆದ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕೆದಂಬಾಡಿ ಶ್ರೀರಾಮ ಮಂದಿರದ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮುಂಡಾಳ ಮೋಹನ ಆಳ್ವ ಮತ್ತು ಯುವರಂದ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ನ ರೆಫ್ರಿ ಬೋರ್ಡ್‌ ಅಧ್ಯಕ್ಷ ಆಸೀಫ್‌ ತಂಬುತ್ತಡ್ಕ, ಅಶೋಕ್‌ ಕೌಡಿಚ್ಚಾರ್‌, ಸಿದ್ದೀಕ್‌ ನಿಡ್ಪಳ್ಳಿ,  ವಿಜಿತ್‌ ನಿಡ್ಪಳ್ಳಿ ತೀರ್ಪುಗಾರರಾಗಿ ಸಹಕರಿಸಿದರು.

ಬಹುಮಾನ 62 ಕೆ.ಜಿ. ವಿಭಾಗ

ಪ್ರಥಮ – ಹೊಳ್ಳ ಕ್ರ್ಯಾಕರ್ಸ್‌ ಪುತ್ತೂರು

ದ್ವಿತೀಯ – ಶ್ರೀ ದುರ್ಗಾ ಅರಿಯಡ್ಕ

ತೃತೀಯ – ಬಿ.ಕೆ. ಬ್ರದರ್ಸ್‌ ಸಾಲ್ಮರ

ಚತುರ್ಥ – ಪಂಚಶ್ರೀ ಸ್ಪೋರ್ಟ್ಸ್‌ ಕ್ಲಬ್‌ ಪಂಜ

ಸವ್ಯಸಾಚಿ ಆಟಗಾರ – ಇಶಾಂತ್‌ ಶ್ರೀದುರ್ಗಾ  ಅರಿಯಡ್ಕ

ಉತ್ತಮ ದಾಳಿಗಾರ – ವಿತೇಶ್‌ ಹೊಳ್ಳ ಕ್ರ್ಯಾಕರ್ಸ್‌ ಪುತ್ತೂರು

ಉತ್ತಮ ಹಿಡಿತಗಾರ – ರೂಪೇಶ್‌ ಹೊಳ್ಳ ಕ್ರ್ಯಾಕರ್ಸ್‌ ಪುತ್ತೂರು

ನೇರ ಪ್ರಸಾರ

ಕಬಡ್ಡಿ ಪಂದ್ಯಾಟವು ʻಸುದ್ದಿ ಪುತ್ತೂರು ಲೈವ್ʼ ಯುಟ್ಯೂಬ್‌ ಚಾನೆಲ್‌ ನಲ್ಲಿ ನೇರ ಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here