ಕಾಂಗ್ರೆಸ್‌ನಿಂದ ಬೂತ್ ಅಧ್ಯಕ್ಷರು, ಬಿಎಲ್‌ಎಗಳಿಗೆ ತರಬೇತಿ

0

25-30ವರ್ಷ ಬಿಜೆಪಿಯವರೇ ಶಾಸಕರಾಗಿದ್ದರೂ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ- ವಕ್ತಾರ ಎಂ.ಜಿ ಹೆಗಡೆ

ಪುತ್ತೂರು:ಸುಳ್ಯದಲ್ಲಿ ಕಳೆದ 30 ವರ್ಷಗಳಿಂದ ಶಾಸಕರಾಗಿದ್ದ ಬಿಜೆಪಿಯ ಅಂಗಾರರವರು ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಮಂಗಳೂರುಲ್ಲಿ ಯೋಗೀಶ್ ಭಟ್, ಉಡುಪಿಯಲ್ಲಿ ರಘುಪತಿ ಭಟ್ ಮೊದಲಾದವರು ಹಲವು ವರ್ಷಗಳಿಂದ ಬಿಜೆಪಿಯಿಂದ ಶಾಸಕರಾಗಿದ್ದರೂ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ದೇಶದಲ್ಲಿ ಸುಮಾರು ಶೇ.50 ಕಾಲ ಕಾಂಗ್ರೆಸ್ಸೇತರ ಪಕ್ಷಗಳು ಆಡಳಿತ ನಡೆಸಿದೆ, ನಮ್ಮ ಹೋರಾಟ ಬಿಜೆಪಿ ವಿರುದ್ದವಲ್ಲ, ಕೋಮುವಾದದ ವಿರುದ್ಧ. ಬಿಜೆಪಿ ಆರೋಪಗಳಿಗೆ ಪೂರಕವಾದ ಉತ್ತರ ನಮ್ಮಲ್ಲಿರಬೇಕು. ಕಾಂಗ್ರೆಸ್ ಸಾಧನೆಗಳನ್ನು ತಿಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ.ಜಿ ಹೆಗ್ಡೆ ಹೇಳಿದರು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ವತಿಯಿಂದ ಪುತ್ತೂರು ಪುರಭವನದಲ್ಲಿ ಫೆ.14ರಂದು ನಡೆದ ಬೂತ್ ಅಧ್ಯಕ್ಷರು, ಬಿಎಲ್‌ಎಗಳ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಪಕ್ಷದ ಸಂಘಟನೆಯು ವಾರ್ಡ್, ಬೂತ್ ಮಟ್ಟದಲ್ಲಿ ಬಲಪಡಿಸಬೇಕು. ಜನಪ್ರತಿನಿಧಿಗಳು ಹಾಗೂ ಪಕ್ಷಗಳೆರಡರ ಮಧ್ಯೆ ಸ್ಪಷ್ಟತೆಯಿರಬೇಕು. ಸಂಘಟನೆ ಸುಭದ್ರವಾಗಿರಬೇಕು. ಮೊದಲು ಪಕ್ಷ ನಂತರ ಜನಪ್ರತಿನಿಧಿಗಳು ಎಂಬ ಭಾವನೆ ಪ್ರತಿಯೊಬ್ಬರಲ್ಲಿರಬೇಕು ಎಂದರು. ಬಿಜೆಪಿಯ ಹಿಂದುತ್ವಕ್ಕೆ ಮಾತ್ರವೇ ಕಾಂಗ್ರೆಸ್ ಸೋತಿರುವುದು ಕಾರಣವಲ್ಲ. ಇದರ ಹೊರತಾಗಿ ಹಲವು ಕಾರಣಗಳಿವೆ. ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರೂ ಬೂತ್ ಗೆ ಜನವಿಲ್ಲ ಎನ್ನುವ ಸ್ಥಿತಿಯಲ್ಲಿದೆ. ಸಂಪರ್ಕ, ಸಂವಹನ, ಸಂಘಟನೆಯಾಗಬೇಕು.ಚುನಾವಣೆಯ ಸಮಯದಲ್ಲಿ ಮಾತ್ರ ಬೂತ್‌ಗೆ ಹೊಗುವುದಲ್ಲ, ನಿರಂತರ ಸಂಪರ್ಕ ವಿರಬೇಕು. ಕಾರ್ಯಕರ್ತರೇ ಪಕ್ಷದ ಜೀವಾಳ ಭಾಷಣಕ್ಕೆ ಸೀಮಿತವಾಗಿರಬಾರದು. ಚುನಾವಣೆ ಸಮೀಪಿಸಿದಾಗ ವಿವಿಧ ಸಂಘಟನೆಗಳು ಸಹಾಯಕ್ಕಾಗಿ ಬರುತ್ತಾರೆ. ಆದರೆ ನಾವು ಖರ್ಚು ಮಾಡುವ ನೋಟು ಓಟಾಗುವುದಿಲ್ಲ. ನಗರ ಪ್ರದೇಶದಲ್ಲಿ ಪ್ಲಾಟ್ ನಿವಾಸಿಗಳ ಪರಿವರ್ತಿಸಬೇಕು. ನ್ಯೂಟ್ರಲ್ ಓಟರ್ ಗುರುತಿಸಬೇಕು. ಬೂತ್ ಮಟ್ಟದಲ್ಲಿ ಸಭೆ ನಡೆಸಬೇಕು. ಬೂತ್ ಕಡೆಗೆ ನಮ್ಮ ನಡಿಗೆಯಾಗಬೇಕು. ಬೂತ್‌ನಲ್ಲಿರುವ ಎಲ್ಲಾ ಮನೆಗಳನ್ನು ಸಂಫರ್ಕಿಸಬೇಕು. ಹತ್ತು ಬೂತ್‌ಗಳಿಗೆ ಒಬ್ಬ ಮೇಲ್ವೀಚಾರಕರನ್ನು ನೇಮಿಸಬೇಕು. ಮತದಾರರನ್ನು ವಿವಿಧ ವಿಭಾಗಗಳಾಗಿ ವರ್ಗೀಕರಣ. ಪಕ್ಷಸಂಘಟನೆ ಮಾಡಿದರೆ ವಿಧಾನ ಸಭೆ ಮಾತ್ರವಲ್ಲ ಲೋಕಸಭಾ ಸ್ಥಾನ ಗೆಲ್ಲಬಹುದು ಎಂದರು.


ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತ ನೆನೆಯುವಾಗಲೇ ಮೈ ರೋಮಾಂಚನ ಆಗುತ್ತದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ದೇಶಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ಇದನ್ನು ಮನೆ ಮನೆ ತಲುಪಿಸಬೇಕು. ಕಾಂಗ್ರೆಸ್ ಪಕ್ಷ ಸೋತಿಲ್ಲ. ಪಕ್ಷದ ಸಾಧನೆಯನ್ನು ಮುಟ್ಟಿಸುವಲ್ಲಿ ವಿಫಲವಾಗಿದೆ. ಧರ್ಮಾಧಾರಿತ ವಿಂಗಡನೆಯಿಂದ ದೇಶದಲ್ಲಿ ಏನೆಲ್ಲಾ ನಡೆಯುತ್ತಿದೆ. ಪಕ್ಷದ ಸಿದ್ದಾಂತ ಮನೆ ಮನೆಗೆ ತಲುಪಬೇಕು. ಮತದಾರರನ್ನು ಪಟ್ಟಿಗೆ ಸೇರಿಸಬೇಕು. ಪಕ್ಷದ ಪ್ರಣಾಳಿಕೆ ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆಯ ಬಗ್ಗೆ ಮನೆ ಮನೆಗೆ ತಿಳಿಸುವ ಮೂಲಕ ಕಾಂಗ್ರೆಸ್‌ನ ಗತ ವೈಭವ ಮತ್ತೆ ಮರುಕಲಿಸಬೇಕು ಎಂದರು.


ಕೊಪ್ಪ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಾಜ್ಯ ಮಟ್ಟದ ತರಬೇತುದಾರ ಸುಧೀರ್ ಕುಮಾರ್ ಮರೋಳಿ ಪಕ್ಷ ಸಂಘಟನೆ, ಬಲಪಡಿಸುವ ಬಗ್ಗೆ ಮಾಹಿತಿ ನೀಡಿದರು. ತರಬೇತಿಯನ್ನು ಮಾಜಿ ಶಾಸಕಿ ಶಕುಂತಾಳಾ ಟಿ.ಶೆಟ್ಟಿ ದೀಪ ಬೆಳಗಿಸಿ,ಉದ್ಘಾಟಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ,ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮರಳಿಧರ ರೈ ಮಠಂತಬೆಟ್ಟು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ರಾಜ್ಯ ವಕ್ತಾರ ಅಮಳ ರಾಮಚಂದ್ರ ಭಟ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಗರ ಕಾಂಗ್ರೆಸ್ ಆಧ್ಯಕ್ಷ ಮಹಮ್ಮದ್ ಆಲಿ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಮಹಿಳಾ ಘಟಕ ರಾಜ್ಯ ನಾಯಕಿ ಶಾಹಿರಾ ಝುಬೈರ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ್ ಅಧ್ಯಕ್ಷೆ ಶಾರದಾ ಅರಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಕೌಶಲ್ ಪ್ರಸಾದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ನ ಘಟಕಗಳು, ವಿವಿಧ ಬೂತ್ ಅಧ್ಯಕ್ಷರು, ಬಿ.ಎಲ್.ಎಗಳು ತರಬೇತಿಯಲ್ಲಿ ಭಾಗವಹಿಸಿದರು.


ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ ಹಾಗೂ ನಗರ ಸಭಾ ಸದಸ್ಯ ರಿಯಾಝ್ ವಂದೇ ಮಾತರಂ ಹಾಡಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here