ಕಾಣಿಯೂರು: ಶ್ರೀ ಜಗದ್ಗುರು ಶ್ರೀ ಮನ್ಮಧ್ವಾರ್ಯಮೂಲ ಮಹಾಸಂಸ್ಥಾನಮ್ ಉಡುಪಿ ಕಾಣಿಯೂರು ರಾಮತೀರ್ಥ ಮಠದ ಜಾತ್ರೋತ್ಸವವು ಫೆ 17ರಿಂದ ಪ್ರಾರಂಭಗೊಂಡು ಫೆ 21ರವರೆಗೆ ನಡೆಯಲಿದೆ. ಫೆ 17ರಂದು ರಾತ್ರಿ ಭಂಡಾರ ತೆಗೆದು ಧ್ವಜಾರೋಹಣ, ಫೆ 18ರಂದು ಬೆಳಿಗ್ಗೆ ಶ್ರೀ ಅಮ್ಮನವರ ದೇವರ ಪ್ರತಿಷ್ಠಾ ದಿವಸದ ಪ್ರಯುಕ್ತ ವಿಶೇಷ ಪೂಜೆ, ನವಕ ಕಲಶಾಭೀಷೇಕ, ಗಣಪತಿ ಹೋಮ, ಮಹಾಪೂಜೆ, ಉಳ್ಳಾಕುಲು ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ, ಗಣಪತಿ ಹೋಮ, ಮಹಾಪೂಜೆ, ರಾತ್ರಿ ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿಯ ಆಶ್ರಯದಲ್ಲಿ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ರಾಷ್ಟ್ರ ದೇವೋ ಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ, ಕರ್ನಾಟಕ ಕಲಾಶ್ರೀ ವಿದುಷಿ ಶಾರದ ಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ನೃತ್ಯ ನಿರ್ದೇಶನದ ಪ್ರಖರವಾಗ್ಮಿ ಆದರ್ಶ ಗೋಖಲೆ ಕಾರ್ಕಳ ನಿರೂಪಣೆಯ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ನೃತ್ಯ ವೈವಿಧ್ಯ ಪುಣ್ಯ ಭೂಮಿ ಭಾರತ ನಡೆಯಲಿದೆ. ಫೆ 29ರಂದು ಬೆಳಿಗ್ಗೆ ಮಲ್ಲಾರ ದೈವದ ನೇಮ ಹಾಗೂ ದೈಯರ ನೇಮ, ರಾತ್ರಿ ಬಯ್ಯದ ಬಲಿ ನಡೆಯಲಿದೆ. ಫೆ 20ರಂದು ಮಧ್ಯಾಹ್ನ ಎಲ್ಯಾರ ದೈವದ ನೇಮ, ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ ಮಾಣಿ ದೈವದ ನೇಮ, ನಾಯರ್ ದೈವದ ನೇಮ, ಧ್ವಜಾವರೋಹಣ ನಡೆಯಲಿದೆ. ಫೆ 21 ಬೆಳಿಗ್ಗೆ ಕಾಣಿಯೂರು ಶ್ರೀ ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಅಮ್ಮನವರ ಪೂಜೆ, ಶಿರಾಡಿ ದೈವದ ನೇಮ ನಡೆಯಲಿದೆ ಎಂದು ಕಾಣಿಯೂರು ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ತಿಳಿಸಿದ್ದಾರೆ.